ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯಾಟರ್ಗಳ ಅಬ್ಬರ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ (59) ಹಾಗೂ ಫಿಲ್ ಸಾಲ್ಟ್ (56) ಅಬ್ಬರಿಸಿದರೆ, ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ (106) ಸೆಂಚುರಿ ಸಿಡಿಸಿದ್ದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಕ್ವಿಂಟನ್ ಡಿಕಾಕ್ ಶತಕ ಮಿಸ್ ಮಾಡಿಕೊಂಡಿದ್ದಾರೆ. ಹೀಗೆ 24 ಗಂಟೆಗಳಲ್ಲಿ ಟಿ20 ಕ್ರಿಕೆಟ್ನಲ್ಲಿ ಮೂರು ಶತಕಗಳು ಮಿಸ್ ಆಗಿವೆ. ಅವುಗಳೆಂದರೆ...
ಶ್ರೇಯಸ್ ಅಯ್ಯರ್: ಅಹದಾಬಾದ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 42 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿದ್ದರು. ಇತ್ತ ಅಜೇಯರಾಗಿ ಉಳಿದರೂ ಕೇವಲ 3 ರನ್ಗಳಿಂದ ಅಯ್ಯರ್ ಭರ್ಜರಿ ಸೆಂಚುರಿ ತಪ್ಪಿಸಿಕೊಂಡರು.
ಟಿಮ್ ಸೈಫರ್ಟ್: ಮಾರ್ಚ್ 26 ರಂದು ಪಾಕಿಸ್ತಾನ್ ವಿರುದ್ಧದ 5ನೇ ಪಂದ್ಯದಲ್ಲಿ ನ್ಯೂಝಿಲೆಂಡ್ನ ಆರಂಭಿಕ ದಾಂಡಿಗ ಟಿಮ್ ಸೈಫರ್ಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 38 ಎಸೆತಗಳನ್ನು ಎದುರಿಸಿದ ಸೈಫರ್ಟ್ 10 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿದರು. ಅಲ್ಲದೆ ಕೇವಲ ಮೂರು ರನ್ಗಳಿಂದ ಶತಕವಂಚಿತರಾದರು.
ಕ್ವಿಂಟನ್ ಡಿಕಾಕ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಡಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 61 ಎಸೆತಗಳನ್ನು ಎದುರಿಸಿದ ಡಿಕಾಕ್ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 97 ರನ್ ಬಾರಿಸಿದ್ದಾರೆ. ಇದಾಗ್ಯೂ ಅವರಿಗೆ ಶತಕ ಪೂರೈಸಲು ಸಾಧ್ಯವಾಗಿಲ್ಲ.
ಅಂದರೆ ಕಳೆದ 24 ಗಂಟೆಗಳಲ್ಲಿ ಮೂರು ದಾಂಡಿಗರು ಕೇವಲ ಮೂರು ರನ್ಗಳಿಂದ ಶತಕ ವಂಚಿತರಾಗಿದ್ದಾರೆ. ಇದಾಗ್ಯೂ ಈ ಮೂವರು ಕಣಕ್ಕಿಳಿದ ತಂಡಗಳು ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಬಾರಿಯ ಐಪಿಎಲ್ನಲ್ಲಿ ಮೂರಂಕಿ ಮೊತ್ತ ದಾಟಿರುವುದು ಇಶಾನ್ ಕಿಶನ್ ಮಾತ್ರ. ಈ ಪಟ್ಟಿಗೆ ಸೇರ್ಪೆಯಾಗುವ 2ನೇ ಬ್ಯಾಟರ್ ಯಾರು ಎಂಬುದನ್ನು ಕಾದು ನೋಡಬೇಕಿದೆ.
Published On - 12:10 pm, Thu, 27 March 25