- Kannada News Photo gallery Cricket photos IND vs AFG 2nd t20i virat kohli return team india t20 squad tilak varma may be out in playing 11
IND vs AFG: ಟಿ20 ಅಖಾಡಕ್ಕಿಳಿಯಲು ಕೊಹ್ಲಿ ಸಜ್ಜು; ಆಪ್ತನಿಗೆ ತಂಡದಿಂದ ಕೋಕ್ ನೀಡ್ತಾರಾ ರೋಹಿತ್?
IND vs AFG: ವಿರಾಟ್ ಕೊಹ್ಲಿ ಆಗಮನದಿಂದ ತಂಡದಲ್ಲಿ ಒಬ್ಬ ಆಟಗಾರನಿಗೆ ಕೋಕ್ ಸಿಗುವುದು ಖಚಿತ. ಹೀಗಾಗಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲು ಯಾವ ಆಟಗಾರನನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
Updated on:Jan 12, 2024 | 6:33 PM

ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಗೆದ್ದಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇದೀಗ ಉಭಯ ತಂಡಗಳು ಇಂದೋರ್ನಲ್ಲಿ ಎರಡನೇ ಟಿ20 ಪಂದ್ಯವನ್ನು ಆಡಲಿವೆ. ಈ ಪಂದ್ಯ ಇದೇ ಭಾನುವಾರ ಅಂದರೆ ಜನವರಿ 14 ರಂದು ನಡೆಯಲ್ಲಿದೆ. ಮೊದಲ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 14 ತಿಂಗಳ ನಂತರ ಟಿ20 ಮಾದರಿಗೆ ಕಾಲಿಟ್ಟರೆ, ಇದೀಗ ಎರಡನೇ ಟಿ20 ಪಂದ್ಯದಲ್ಲಿ ಅಖಾಡಕ್ಕೆ ದುಮುಕಲು ಕಿಂಗ್ ಕೊಹ್ಲಿ ಕಾತುರರಾಗಿದ್ದಾರೆ.

ವಾಸ್ತವವಾಗಿ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಈ ಇಬ್ಬರು ಹಿರಿಯ ಆಟಗಾರರಿಗೆ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಅವಕಾಶ ನೀಡದೆ. ಆದರೆ ಮಗಳ ಜನ್ಮದಿನವಿದ್ದಿದ್ದರಿಂದ ವಿರಾಟ್ ಕೊಹ್ಲಿ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೀಗ ಎರಡನೇ ಟಿ20 ಪಂದ್ಯದೊಂದಿಗೆ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದರರ್ಥ ವಿರಾಟ್ ಕೊಹ್ಲಿ ಆಗಮನದಿಂದ ತಂಡದಲ್ಲಿ ಒಬ್ಬ ಆಟಗಾರನಿಗೆ ಕೋಕ್ ಸಿಗುವುದು ಖಚಿತ. ಹೀಗಾಗಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲು ಯಾವ ಆಟಗಾರನನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಸ್ಥಾನದಲ್ಲಿ ಅಂದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಎರಡನೇ ಟಿ20 ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಕೆಂದರೆ ಕಳೆದ ಕೆಲವು ಪಂದ್ಯಗಳಲ್ಲಿ ತಿಲಕ್ ವರ್ಮಾ ಪ್ರದರ್ಶನ ಅಷ್ಟಕಷ್ಟೆ.

ಇನ್ನು ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡ ತಿಲಕ್‌ಗೆ ಕೊನೆಯವರೆಗೂ ಈ ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 22 ಎಸೆತಗಳಲ್ಲಿ 26 ರನ್ ಸಿಡಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸಹ ಸೇರಿತ್ತು.
Published On - 6:30 pm, Fri, 12 January 24




