AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs ZIM: 19 ರನ್ ನೀಡಿ 7 ವಿಕೆಟ್; ತಂಡದಿಂದ ಕೈಬಿಟ್ಟ ಆರ್​ಸಿಬಿಗೆ ತಕ್ಕ ತಿರುಗೇಟು ನೀಡಿದ ಹಸರಂಗ..!

SL vs ZIM: ಈ ಪಂದ್ಯದಲ್ಲಿ ಹಸರಂಗ ಕೇವಲ 5.5 ಓವರ್ ಬೌಲ್ ಮಾಡಿ 1 ಮೇಡನ್ ಓವರ್ ಬೌಲ್ ಮಾಡಿ 19 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಐಪಿಎಲ್​ನಲ್ಲಿ ತನ್ನನ್ನು ತಂಡದಿಂದ ಕೈಬಿಟ್ಟ ಆರ್​ಸಿಬಿಗೆ ತಕ್ಕ ತಿರುಗೇಟಯ ನೀಡಿದರು.

ಪೃಥ್ವಿಶಂಕರ
|

Updated on:Jan 12, 2024 | 8:52 PM

Share
ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮಗಳ ಪ್ರಕಾರ ಆತಿಥೇಯ ತಂಡ 8 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

1 / 6
ಶ್ರೀಲಂಕಾ ಪರ ಈ ಪಂದ್ಯದಲ್ಲಿ 5 ತಿಂಗಳ ಬಳಿಕ ಮೈದಾನಕ್ಕೆ ಮರಳಿದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಕೇವಲ 19 ರನ್ ನೀಡಿ 7 ವಿಕೆಟ್ ಕಬಳಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇದರಿಂದಾಗಿ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕೇವಲ 96 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 16.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಜಯದ ನಗೆಬೀರಿತು.

2 / 6
ಮಳೆ ಪೀಡಿತ ಈ ಪಂದ್ಯವನ್ನು  ತಲಾ 27 ಓವರ್‌ ಆಡಿಸಲು ನಿರ್ಧರಿಸಲಾಯಿತು. ಈ ಪಂದ್ಯದಲ್ಲಿ, ಜಿಂಬಾಬ್ವೆ ತಂಡದ ನಾಯಕ ಕ್ರೇಗ್ ಎರ್ವಿನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭಿರಾದ ಗುಂಬೈ ಮತ್ತು ಕೈಟಾನೊ ನಡುವೆ ಮೊದಲ ವಿಕೆಟ್‌ಗೆ 43 ರನ್‌ಗಳ ಪಾಲುದಾರಿಕೆ ಕಂಡುಬಂದಿತು.

3 / 6
ಆ ಬಳಿಕ ಬೌಲಿಂಗ್ ದಾಳಿ ಆರಂಭಿಸದ ಹಸರಂಗ ಜಿಂಬಾಬ್ವೆ ಬ್ಯಾಟ್ಸ್​ಮನ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ಗಟ್ಟಲಾರಂಭಿಸಿದರು. ಇದರಿಂದಾಗಿ ಇಡೀ ಜಿಂಬಾಬ್ವೆ ತಂಡ 96 ರನ್‌ಗಳಿಗೆ ಆಲೌಟ್ ಆಯಿತು.

4 / 6
ಈ ಪಂದ್ಯದಲ್ಲಿ ಹಸರಂಗ ಕೇವಲ 5.5 ಓವರ್ ಬೌಲ್ ಮಾಡಿ 1 ಮೇಡನ್ ಓವರ್ ಬೌಲ್ ಮಾಡಿ 19 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಐಪಿಎಲ್​ನಲ್ಲಿ ತನ್ನನ್ನು ತಂಡದಿಂದ ಕೈಬಿಟ್ಟ ಆರ್​ಸಿಬಿಗೆ ತಕ್ಕ ತಿರುಗೇಟಯ ನೀಡಿದರು.

5 / 6
ವಾಸ್ತವವಾಗಿ ಈ ಬಾರಿಯ ಐಪಿಎಲ್​ನ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ವನಿಂದು ಹಸರಂಗರನ್ನು ತಮ್ಮ ತಂಡದಿಂದ ಬಿಡುಗಡೆಗೊಳಿಸಿತ್ತು. ಆ ಬಳಿಕ ಮಿನಿ ಹರಾಜಿನಲ್ಲಿ ಹಸರಂಗರನ್ನು ಹೈದರಾಬಾದ್ ಫ್ರಾಂಚೈಸ್ ಮೂಲ ಬೆಲೆ 2 ಕೋಟಿ ರೂಗೆ ತನ್ನ ಬತ್ತಳಿಕೆಗೆ ಹಾಕಿಕೊಂಡಿತು.

6 / 6

Published On - 8:50 pm, Fri, 12 January 24

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..