Updated on:Mar 01, 2023 | 9:44 AM
ಇಂದಿನಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್ನಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಟಾಸ್ ಬಳಿಕ ಉಭಯ ತಂಡಗಳು ತಮ್ಮ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದು, ಕೆಎಲ್ ರಾಹುಲ್ ಅವರನ್ನು ಕೈಬಿಡುವ ಮೂಲಕ ಭಾರತ ಶುಭಮನ್ ಗಿಲ್‌ಗೆ ಅವಕಾಶ ನೀಡಿದೆ.
ನಿರೀಕ್ಷೆಯಂತೆ ಕಳಪೆ ಫಾರ್ಮ್ನಲ್ಲಿರುವ ರಾಹುಲ್ರನ್ನು ತಂಡದಿಂದ ಕೈಬಿಡಲಾಗಿದೆ. ಹಾಗೆಯೇ ಮತ್ತೊಂದು ಬದಲಾವಣೆ ಎಂಬಂತೆ ವೇಗಿ ಮೊಹಮ್ಮದ್ ಶಮಿ ಬದಲು ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಟೀಂ ಇಂಡಿಯಾ ಹೀಗಿದೆ.
ರೋಹಿತ್ ಶರ್ಮಾ
ಶುಭ್ಮನ್ ಗಿಲ್
ಚೇತೇಶ್ವರ್ ಪೂಜಾರ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಸ್ ಭರತ್
ರವೀಂದ್ರ ಜಡೇಜಾ
ರವಿಚಂದ್ರನ್ ಅಶ್ವಿನ್
ಅಕ್ಷರ್ ಪಟೇಲ್
ಉಮೇಶ್ ಯಾದವ್
ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೂರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್
Published On - 9:19 am, Wed, 1 March 23