- Kannada News Photo gallery Cricket photos IND vs AUS: Pat Cummins gifts Cheteshwar Pujara signed jersey
IND vs AUS: ಅಂದು ರಹಾನೆ, ಇಂದು ಕಮಿನ್ಸ್: ಸೋತರೂ ಎಲ್ಲರ ಮನಗೆದ್ದ ಆಸ್ಟ್ರೇಲಿಯಾ ನಾಯಕ
India vs Australia 2nd Test: ಹೀನಾಯ ಸೋಲಿನ ಬಳಿಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿ ಚೇತೇಶ್ವರ ಪೂಜಾರಗೆ ವಿಶೇಷ ಜೆರ್ಸಿಯೊಂದನ್ನು ನೀಡಿ ಅಭಿನಂದಿಸಿದರು.
Updated on: Feb 19, 2023 | 5:31 PM

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಸೋಲುಣಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ವಿಶೇಷ ಎಂದರೆ ಈ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡಿದ್ದರು.

ಹೌದು, ಅತ್ತ ಹೀನಾಯ ಸೋಲಿನ ಬಳಿಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿ ಚೇತೇಶ್ವರ ಪೂಜಾರಗೆ ವಿಶೇಷ ಜೆರ್ಸಿಯೊಂದನ್ನು ನೀಡಿ ಅಭಿನಂದಿಸಿದರು.

100ನೇ ಟೆಸ್ಟ್ ಪಂದ್ಯವಾಡಿದ್ದ ಪೂಜಾರ ಅವರ ಸಾಧನೆಯನ್ನು ಅವಿಸ್ಮರಣೀಯವಾಗಿಸಲು ಆಸ್ಟ್ರೇಲಿಯಾ ತಂಡದ ಎಲ್ಲ ಆಟಗಾರರು ಸಹಿ ಹಾಕಿರುವ ಜೆರ್ಸಿಯನ್ನು ಪ್ಯಾಟ್ ಕಮಿನ್ಸ್ ಉಡುಗೊರೆಯಾಗಿ ನೀಡಿ ಅಭಿನಂದಿಸಿದರು. ಇದೀಗ ಈ ಫೋಟೋ ವೈರಲ್ ಆಗಿದೆ.

ವಿಶೇಷ ಎಂದರೆ ಕಳೆದ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕರಾಗಿದ್ದ ಅಜಿಂಕ್ಯ ರಹಾನೆ ಕೂಡ ನಾಥನ್ ಲಿಯಾನ್ ಅವರನ್ನು ಇದೇ ಮಾದರಿಯಲ್ಲಿ ಗೌರವಿಸಿದ್ದರು.

ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ಮೂಲಕ ನಾಥನ್ ಲಿಯಾನ್ 100ನೇ ಟೆಸ್ಟ್ ಪಂದ್ಯವಾಡಿದ್ದರು. ಈ ಕ್ಷಣವನ್ನು ಸ್ಮರಣೀಯವಾಗಿಸಲು ಟೀಮ್ ಇಂಡಿಯಾ ನಾಯಕರಾಗಿದ್ದ ಅಜಿಂಕ್ಯ ರಹಾನೆ ಭಾರತೀಯ ಆಟಗಾರರ ಸಹಿ ಹೊಂದಿದ್ದ ವಿಶೇಷ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

ಇದೀಗ ಇದೇ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ತನ್ನ ಸಹ ಆಟಗಾರರ ಸಹಿ ಹೊಂದಿರುವ ವಿಶೇಷ ಜೆರ್ಸಿಯನ್ನು 100ನೇ ಟೆಸ್ಟ್ ಪಂದ್ಯವಾಡಿದ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರಾಗೆ ಉಡುಗೊರೆಯಾಗಿ ನೀಡಿದ್ದಾರೆ.
