IND vs AUS: ಕನಿಷ್ಠ 1 ವಿಕೆಟ್; ಅಶ್ವಿನ್ ದಾಖಲೆ ಸರಿಗಟ್ಟಿದ ರವಿ ಬಿಷ್ಣೋಯ್..!

IND vs AUS, Ravi Bishnoi: ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಲೆಗ್ ಸ್ಪಿನ್ನರ್, ಆಡಿದ ಐದು ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್ ಉರುಳಿಸಿದರು. ಇದರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಲ್ಲದೆ ಈ ಹಿಂದೆ ಯಾವುದೇ ಭಾರತೀಯ ಸ್ಪಿನ್ ಬೌಲರ್ ಮಾಡಲಾಗದ ಸಾಧನೆಯನ್ನು ಮಾಡಿದರು.

ಪೃಥ್ವಿಶಂಕರ
|

Updated on: Dec 04, 2023 | 9:23 AM

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 4-1 ಅಂತರದಿಂದ ವಶಪಡಿಸಿಕೊಂಡಿದೆ. ಯುವ ಪಡೆಯನ್ನು ಕಟ್ಟಿಕೊಂಡು ಕಾಂಗರೂಗಳ ವಿರುದ್ಧ ಅಖಾಡಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ ಭಾರತಕ್ಕೆ ಟಿ20 ಸರಣಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

1 / 8
ಇನ್ನು ಈ ಸರಣಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದ ಯುವ ಆಟಗಾರರಲ್ಲಿ ಹಲವು ಆಟಗಾರರು ಆಯ್ಕೆ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬ್ಯಾಟಿಂಗ್​​ನಲ್ಲಿ ಯಶಸ್ವಿ, ರುತುರಾಜ್ ಹಾಗೂ ರಿಂಕು ಸಿಂಗ್ ಮಿಂಚಿದರೆ, ಬೌಲಿಂಗ್​ನಲ್ಲಿ ರವಿ ರವಿ ಬಿಷ್ಣೋಯ್ ಕಮಾಲ್ ಮಾಡಿದರು.

2 / 8
ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಲೆಗ್ ಸ್ಪಿನ್ನರ್, ಆಡಿದ ಐದು ಪಂದ್ಯಗಳಲ್ಲಿ ಬರೋಬ್ಬರಿ 9 ವಿಕೆಟ್ ಉರುಳಿಸಿದರು. ಇದರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಲ್ಲದೆ ಈ ಹಿಂದೆ ಯಾವುದೇ ಭಾರತೀಯ ಸ್ಪಿನ್ ಬೌಲರ್ ಮಾಡಲಾಗದ ಸಾಧನೆಯನ್ನು ಮಾಡಿದರು.

3 / 8
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಸೇರಿದಂತೆ ರವಿ ಬಿಷ್ಣೋಯ್ ಭಾರತದ ಪರ ಇದುವರೆಗೆ 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಹತ್ತೂ ಪಂದ್ಯಗಳಲ್ಲೂ ಭಾರತದ ಪರ ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

4 / 8
ಇದರೊಂದಿಗೆ ಸತತ 10 ಟಿ20 ಪಂದ್ಯಗಳಲ್ಲಿ ಕನಿಷ್ಠ 1 ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ರವಿ ಬಿಷ್ಣೋಯ್ ಪಾತ್ರರಾಗಿದ್ದಾರೆ.

5 / 8
ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ, ಸತತ 13 ಟಿ20 ಪಂದ್ಯಗಳಲ್ಲಿ ಕನಿಷ್ಠ 1 ವಿಕೆಟ್ ಪಡೆದ ಸಾಧನೆ ಮಾಡಿದ್ದರು.

6 / 8
ಇದಲ್ಲದೆ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನೂ ರವಿ ಬಿಷ್ಣೋಯ್ ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಒಟ್ಟು 9 ವಿಕೆಟ್ ಪಡೆದಿದ್ದರು.

7 / 8
ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಯುಜುವೇಂದ್ರ ಚಹಾಲ್ 2017ರಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಲಾ 8 ವಿಕೆಟ್ ಪಡೆದಿದ್ದರು.

8 / 8
Follow us