- Kannada News Photo gallery Cricket photos IND vs ENG Ben Stokes Golden Duck out 1st time in test career
IND vs ENG: 13 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ರೀತಿ ಔಟಾದ ಸ್ಟೋಕ್ಸ್
Ben Stokes Golden Duck: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಕಲೆಹಾಕಿತು. ಆದರೆ ಇಂಗ್ಲೆಂಡ್‌ಗೆ ನಿರಾಶಾದಾಯಕ ಆರಂಭ ಸಕ್ಕಿತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಗೋಲ್ಡನ್ ಡಕ್ ಆಗಿ ಔಟಾದರು. ಇದು ಅವರ 13 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸಂಭವಿಸಿದೆ ಘಟನೆಯಾಗಿದೆ. ಮೊಹಮ್ಮದ್ ಸಿರಾಜ್ ಅವರ ಅದ್ಭುತ ಬೌನ್ಸರ್ ಸ್ಟೋಕ್ಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು.
Updated on: Jul 04, 2025 | 7:41 PM

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲೂ ರನ್ಗಳ ಮಳೆ ಸುರಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 587 ರನ್ ಕಲೆಹಾಕಿದರೆ, ಇತ್ತ ಇಂಗ್ಲೆಂಡ್ ಕೂಡ ದಿಟ್ಟ ಹೋರಾಟ ನೀಡುತ್ತಿದೆ. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ತಂಡ 84 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.

ಇದರಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಮೊದಲ ಎಸೆತದಲ್ಲೇ ಅಂದರೆ ಗೋಲ್ಡನ್ ಡಕ್ಗೆ ಬಲಿಯಾದರು. ಅದರಲ್ಲಿ ಮೊದಲೆಯನವರು ಓಲಿ ಪೋಪ್ ಆದರೆ, ಎರಡನೇಯವರು ತಂಡದ ನಾಯಕ ಬೆನ್ ಸ್ಟೋಕ್ಸ್. ಕಳೆದ ಕೆಲವು ದಿನಗಳಿಂದ ಬ್ಯಾಟಿಂಗ್ನಲ್ಲಿ ನಿರಸ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್ ಈ ಪಂದ್ಯದಲ್ಲೂ ಸ್ಕೋರ್ ಬೋರ್ಡ್ಗೆ ಯಾವುದೇ ತೊಂದರೆ ನೀಡದೆ ಪೆವಿಲಿಯನ್ ಸೇರಿಕೊಂಡರು.

ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೂರನೇ ದಿನದಂದು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ಗೆ ಬಂದರು. ಆದರೆ ಅವರಿಗೆ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಬೌನ್ಸರ್ ಮೂಲಕ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಈ ಬಾರಿ ಸ್ಟೋಕ್ಸ್ ‘ಗೋಲ್ಡನ್ ಡಕ್' ಗೆ ಬಲಿಯಾದರು. ಅಂದರೆ, ಈ ಇನ್ನಿಂಗ್ಸ್‌ನಲ್ಲಿ ಅವರು ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗದೆ ಮೊದಲ ಎಸೆತದಲ್ಲೇ ಔಟಾದರು. ಇದರೊಂದಿಗೆ, ಸ್ಟೋಕ್ಸ್ ತಮ್ಮ 13 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ‘ಗೋಲ್ಡನ್ ಡಕ್' ಆಗಿ ಔಟಾದರು.

ಮತ್ತೊಂದೆಡೆ, 6 ವರ್ಷಗಳ ನಂತರ, ಇಂಗ್ಲೆಂಡ್ ತಂಡದ ನಾಯಕನೊಬ್ಬ ಟೆಸ್ಟ್ ಕ್ರಿಕೆಟ್‌ನಲ್ಲಿ ‘ಗೋಲ್ಡನ್ ಡಕ್' ಆಗಿ ಔಟಾದರು. 2019 ರ ಆರಂಭದಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಜೋ ರೂಟ್ ಇದೇ ರೀತಿ ಔಟಾಗಿದ್ದರು. ಪ್ರಾಸಂಗಿಕವಾಗಿ, ಎಡ್ಜ್‌ಬಾಸ್ಟನ್‌ನಲ್ಲಿ ರೂಟ್ ಔಟಾದ ನಂತರವೇ ಸ್ಟೋಕ್ಸ್ ಬ್ಯಾಟಿಂಗ್‌ಗೆ ಬಂದರು.

ನಾಯಕನಾಗಿ ಸ್ಟೋಕ್ಸ್ ಎರಡನೇ ಬಾರಿಗೆ ಭಾರತದ ವಿರುದ್ಧ ಖಾತೆ ತೆರೆಯಲು ವಿಫಲರಾಗಿದ್ದಾರೆ. ಇದಕ್ಕೂ ಮೊದಲು, ಕಳೆದ ವರ್ಷ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಸ್ಟೋಕ್ಸ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಬೇಕಾಯಿತು.
