- Kannada News Photo gallery Cricket photos IND vs NZ Ajaz Patel joins Laker and Kumble in elite list of 10 wickets in an innings
Ajaz Patel: ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಲೇಕರ್, ಕುಂಬ್ಳೆ ಸಾಲಿಗೆ ಎಜಾಜ್ ಪಟೇಲ್ ಸೇರ್ಪಡೆ..!
India vs New Zealand: 3 ವರ್ಷಗಳ ಹಿಂದೆ ಮುಂಬೈನಲ್ಲಿಯೇ ಜನಿಸಿದ ಎಜಾಜ್ ಪಟೇಲ್ ಈಗ ತಮ್ಮ ಜನ್ಮಭೂಮಿಯಲ್ಲಿ ಈ ಅದ್ಭುತವನ್ನು ಮಾಡಿದ್ದಾರೆ. 47.5 ಓವರ್‌ಗಳ ಬೌಲಿಂಗ್‌ನಲ್ಲಿ 119 ರನ್‌ಗಳಿಗೆ 10 ವಿಕೆಟ್ ಪಡೆದ ಸಾಧನೆ ಮಾಡಿದರು.
Updated on: Dec 04, 2021 | 1:53 PM

ಡಿಸೆಂಬರ್ 4 ರ ಶನಿವಾರದ ದಿನ ಮುಂಬೈನ ವಾಂಖೆಡೆ ಸ್ಟೇಡಿಯಂ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಯಿತು. ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತೀಯ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ 144 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.

ಇಂಗ್ಲೆಂಡ್‌ನ ದಂತಕಥೆ ಸ್ಪಿನ್ನರ್ ಜಿಮ್ ಲೇಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದ ಮೊದಲಿಗರಾಗಿದ್ದರು. ಲೇಕರ್ 1956 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಲೇಕರ್ 51.2 ಓವರ್‌ಗಳಲ್ಲಿ 53 ರನ್‌ಗಳಿಗೆ ಈ 10 ವಿಕೆಟ್‌ಗಳನ್ನು ಪಡೆದರು.

ಭಾರತದ ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಲೇಕರ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು. ಅವರು 1999 ರಲ್ಲಿ ಪಾಕಿಸ್ತಾನ ವಿರುದ್ಧ ದೆಹಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದರು. ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್‌ಗಳಿಗೆ ಈ 10 ವಿಕೆಟ್‌ಗಳನ್ನು ಪಡೆದರು.

ಈಗ ಈ ಪಟ್ಟಿಯಲ್ಲಿ ಎಜಾಜ್ ಪಟೇಲ್ ಹೆಸರೂ ಸೇರಿಕೊಂಡಿದೆ. 33 ವರ್ಷಗಳ ಹಿಂದೆ ಮುಂಬೈನಲ್ಲಿಯೇ ಜನಿಸಿದ ಎಜಾಜ್ ಪಟೇಲ್ ಈಗ ತಮ್ಮ ಜನ್ಮಭೂಮಿಯಲ್ಲಿ ಈ ಅದ್ಭುತವನ್ನು ಮಾಡಿದ್ದಾರೆ. 47.5 ಓವರ್‌ಗಳ ಬೌಲಿಂಗ್‌ನಲ್ಲಿ 119 ರನ್‌ಗಳಿಗೆ 10 ವಿಕೆಟ್ ಪಡೆದ ಸಾಧನೆ ಮಾಡಿದರು. ವಿದೇಶಿ ನೆಲದಲ್ಲಿ ಈ ಅದ್ಭುತ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಎಜಾಜ್ ಅವರ ಈ ಅದ್ಭುತ ಸ್ಪೆಲ್ ಆಧಾರದ ಮೇಲೆ ಭಾರತ ತಂಡವನ್ನು 325 ರನ್‌ಗಳಿಗೆ ಆಲ್ಔಟ್ ಮಾಡಲಾಯಿತು.









