- Kannada News Photo gallery Cricket photos IND vs PAK ODI World Cup 2023 match tickets resale price more than 10 times original cost
2 ಸಾವಿರಕ್ಕೆ ಖರೀದಿಸಿ 22 ಸಾವಿರಕ್ಕೆ ಮಾರಾಟ..! ಗಗನಕ್ಕೇರಿದ ಭಾರತ- ಪಾಕ್ ಪಂದ್ಯದ ಟಿಕೆಟ್ ಬೆಲೆ
IND vs PAK Tickets Resale Price: ಈ ಉಭಯ ತಂಡಗಳ ಕಾಳಗವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಅಭಿಮಾನಿಗಳಿಗೆ ಟಿಕೆಟ್ ಖರೀದಿಸುವುದು ಕಷ್ಟಕರವಾಗಿದೆ. ಅದರಲ್ಲೂ ಕಾಳ ಸಂತೆಯಲ್ಲಿ ಈ ಟಿಕೆಟ್ ಬೆಲೆ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.
Updated on: Oct 13, 2023 | 7:57 AM

ಈ ಬಾರಿಯ ಏಕದಿನ ವಿಶ್ವಕಪ್ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಪಂದ್ಯವು ಅಕ್ಟೋಬರ್ 14 ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಬಿಸಿಸಿಐ ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದೆ.

ಈ ಉಭಯ ತಂಡಗಳ ಕಾಳಗವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಅಭಿಮಾನಿಗಳಿಗೆ ಟಿಕೆಟ್ ಖರೀದಿಸುವುದು ಕಷ್ಟಕರವಾಗಿದೆ. ಅದರಲ್ಲೂ ಕಾಳ ಸಂತೆಯಲ್ಲಿ ಈ ಟಿಕೆಟ್ ಬೆಲೆ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

ವಿಶ್ವಕಪ್ನ ಅಧಿಕೃತ ಟಿಕೆಟ್ ಪಾಲುದಾರ ಬುಕ್‌ಮೈಶೋನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳನ್ನು ವಾರಗಳ ಹಿಂದೆ ಮಾರಾಟ ಮಾಡಲಾಗಿತ್ತು. ಟಿಕೆಟ್ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದವು. ಹೀಗಾಗಿ ಟಿಕೆಟ್ ಸಿಗದೆ ಅಭಿಮಾನಿಗಳು ನಿರಾಸೆಗೊಂಡಿದ್ದರು.

ಭಾರತ- ಪಾಕಿಸ್ತಾನ ಪಂದ್ಯದ ಬೇಸ್ ಲೆವೆಲ್ ಟಿಕೆಟ್‌ಗಳನ್ನು ರೂ 2200 ಕ್ಕೆ ಮಾರಾಟ ಮಾಡಲಾಗಿದೆ. ಲಾಂಜ್ ಮತ್ತು ಉನ್ನತ ಮಟ್ಟದ ಟಿಕೆಟ್‌ಗಳು ಸುಮಾರು ರೂ 15,000 ಕ್ಕೆ ಮಾರಾಟವಾಗಿವೆ. ಈ ಬೆಲೆ ನೀಡಿ ಖರೀದಿಸಲು ಅಭಿಮಾನಿಗಳು ಮುಂದಾಗಿದ್ದರೂ ಅವರಿಗೆ ಟಿಕೆಟ್ ಸಿಗುತ್ತಿಲ್ಲ.

ಹೀಗಾಗಿ ಕಾಳಸಂತೆಯಲ್ಲಿ ಟಿಕೆಟ್ ಖರೀದಿಸಲು ಅಭಿಮಾನಿಗಳು ಮುಂದಾಗುತ್ತಿದ್ದಾರೆ. ಇನ್ನು ಈ ಪಂದ್ಯದ ಟಿಕೆಟ್‌ಗಳನ್ನು ಕೆಲವರು ಮರು ಮಾರಾಟ ಮಾಡುತ್ತಿದ್ದು, ಅವರಿಗೆ 10 ಪಟ್ಟು ಅಧಿಕ ಹಣ ಸಿಗುತ್ತಿದೆ ಎಂದು ವರದಿಯಾಗಿದೆ.

ಬ್ಲೂಮ್‌ಬರ್ಗ್ ಮಾಡಿರುವ ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಈ ಪಂದ್ಯದ ತನ್ನ ಟಿಕೆಟ್ ಅನ್ನು ಮೂಲ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಿದ್ದಾನೆ ಎಂದು ವರದಿ ಮಾಡಿದೆ. ಟಿಕೆಟ್‌ಗಳ ಮಾರಾಟದ ಸಮಯದಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಅನ್ನು ಆ ವ್ಯಕ್ತಿ 2200 ರೂ.ಗೆ ಖರೀದಿಸಿದ್ದ.

ಆದರೆ ಪಂದ್ಯಕ್ಕೆ ಕೇವಲ ಎರಡು ದಿನಗಳ ಮೊದಲು ಆತ ಪಂದ್ಯದ ಟಿಕೆಟ್ ಅನ್ನು ಮರುಮಾರಾಟ ಮಾಡಿದ್ದು, ಆ ಟಿಕೆಟ್‌ನ ಮರುಮಾರಾಟ ಮೌಲ್ಯವು 22,000 ರೂ. ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅಂದರೆ 2200 ರೂ.ಗೆ ಟಿಕೆಟ್ ಖರೀದಿಸಿದ ವ್ಯಕ್ತಿ ಅದೇ ಟಿಕೆಟ್ ಅನ್ನು 22,000 ರೂಗೆ ಮರು ಮಾರಾಟ ಮಾಡಿದ್ದಾನೆ.

ಈ ಬಂಪರ್ ಬೆಲೆ ಪಡೆದ ವ್ಯಕ್ತಿ ನಿಖಿಲ್ ವಾಧ್ವಾನಿ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಮಾತನಾಡಿರುವ ಅವರು, ಭಾರತ- ಪಾಕ್ ಪಂದ್ಯದ ಟಿಕೆಟ್ಗಿರುವ ಬೇಡಿಕೆಯನ್ನು ನೋಡಿ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣವನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ.




