IND vs SL: ನೂತನ ಮುಖ್ಯ ಕೋಚ್​ಗಳ ಸಾರಥ್ಯದಲ್ಲಿ ಭಾರತ- ಲಂಕಾ ಮುಖಾಮುಖಿ

Updated on: Jul 08, 2024 | 8:44 PM

IND vs SL: ಟೀಂ ಇಂಡಿಯಾಕ್ಕೆ ಮಾತ್ರವಲ್ಲದೆ ಶ್ರೀಲಂಕಾ ತಂಡಕ್ಕೂ ಹೊಸ ಮುಖ್ಯ ಕೋಚ್‌ ನೇಮಕವಾಗಿದೆ. ಅದರಂತೆ ತಂಡದ ಮಾಜಿ ಲೆಜೆಂಡರಿ ಆಟಗಾರ ಸನತ್ ಜಯಸೂರ್ಯ ಲಂಕಾ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಲಂಕಾ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ನೂತನ ಕೋಚ್ ಆಯ್ಕೆಯಾಗುವ ಸಾಧ್ಯತೆ ಇದೆ. ಅಂದರೆ ಭಾರತ ಮತ್ತು ಶ್ರೀಲಂಕಾ ಹೊಸ ಕೋಚ್‌ಗಳೊಂದಿಗೆ ಈ ಸರಣಿಗೆ ಕಾಲಿಡಲಿವೆ.

1 / 5
ಪ್ರಸ್ತುತ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದೊಂದಿಗೆ ಟಿ20 ವಿಶ್ವಕಪ್ ತಂಡದಲ್ಲಿದ್ದ ಕೆಲವು ಆಟಗಾರರು ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾಕ್ಕೆ ಹೊಸ ಮುಖ್ಯ ಕೋಚ್ ಕೂಡ ಸಿಗಲಿದ್ದಾರೆ.

ಪ್ರಸ್ತುತ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದೊಂದಿಗೆ ಟಿ20 ವಿಶ್ವಕಪ್ ತಂಡದಲ್ಲಿದ್ದ ಕೆಲವು ಆಟಗಾರರು ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾಕ್ಕೆ ಹೊಸ ಮುಖ್ಯ ಕೋಚ್ ಕೂಡ ಸಿಗಲಿದ್ದಾರೆ.

2 / 5

ಟೀಂ ಇಂಡಿಯಾಕ್ಕೆ ಮಾತ್ರವಲ್ಲದೆ ಶ್ರೀಲಂಕಾ ತಂಡಕ್ಕೂ ಹೊಸ ಮುಖ್ಯ ಕೋಚ್‌ ನೇಮಕವಾಗಿದೆ. ಅದರಂತೆ ತಂಡದ ಮಾಜಿ ಲೆಜೆಂಡರಿ ಆಟಗಾರ ಸನತ್ ಜಯಸೂರ್ಯ ಲಂಕಾ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಲಂಕಾ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ನೂತನ ಕೋಚ್ ಆಯ್ಕೆಯಾಗುವ ಸಾಧ್ಯತೆ ಇದೆ. ಅಂದರೆ ಭಾರತ ಮತ್ತು ಶ್ರೀಲಂಕಾ ಹೊಸ ಕೋಚ್‌ಗಳೊಂದಿಗೆ ಈ ಸರಣಿಗೆ ಕಾಲಿಡಲಿವೆ.

3 / 5

ಈ ಹಿಂದೆ ಇಂಗ್ಲೆಂಡ್‌ನ ಕ್ರಿಸ್ ಸಿಲ್ವರ್‌ವುಡ್ ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿದ್ದರು. ಆದರೆ ಟಿ20 ವಿಶ್ವಕಪ್​ನಲ್ಲಿ ಲಂಕಾ ತಂಡ ಕಳಪೆ ಪ್ರದರ್ಶನ ನೀಡಿದ ಬಳಿಕ ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನಕ್ಕೆ ಸನತ್ ಜಯಸೂರ್ಯ ಆಯ್ಕೆಯಾಗಿದ್ದಾರೆ.

4 / 5

ಇತ್ತ ಭಾರತ ತಂಡ ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿದಿರುವುದರಿಂದ ಹಿರಿಯ ಆಟಗಾರ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೂ ಮೊದಲು ಬಿಸಿಸಿಐ, ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡುವುದು ಭಾಗಶಃ ಖಚಿತವಾಗಿದೆ.

5 / 5

ಇನ್ನು ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಮತ್ತು ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಎರಡೂ ಏಷ್ಯಾ ತಂಡಗಳು 2021ರ ನಂತರ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಗಾಗಿ ಶ್ರೀಲಂಕಾ ನೆಲದಲ್ಲಿ ಸೆಣಸಾಡಲಿವೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us