- Kannada News Photo gallery Cricket photos IND vs WI 1st Test 13-man West Indies squad announced for the first Test against India
WI Squad For IND Series: ಭಾರತ ವಿರುದ್ಧದ ಟೆಸ್ಟ್ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ: ಹೊಸಬರಿಂದ ಕೂಡಿದೆ ಕೆರಿಬಿಯನ್ ಪಡೆ
IND vs WI 1st Test: ಭಾರತ ವಿರುದ್ಧದ ಟೆಸ್ಟ್ಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಕೆಲವೊಂದು ಅಚ್ಚರಿಯ ಆಯ್ಕೆಗಳು ನಡೆದಿದ್ದು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಕಿರ್ಕ್ ಮೆಕೆಂಜಿ ಮತ್ತು ಅಲಿಕ್ ಅಥಾನಾಜೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದಾರೆ.
Updated on: Jul 08, 2023 | 8:03 AM

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದೆ. ಈಗಾಗಲೇ ಎಲ್ಲ ಆಟಗಾರರು ಕೆರಿಬಿಯನ್ ನಾಡಲ್ಲಿದ್ದು ಅಭ್ಯಾಸ ನಡೆಸುತ್ತಿದ್ದಾರೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಹೀಗಿರುವಾಗ ಇದೀಗ ಮೊದಲ ಟೆಸ್ಟ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 13 ಆಟಗಾರರ ತಂಡವನ್ನು ಪ್ರಕಟ ಮಾಡಿದೆ.

ಕೆಲವೊಂದು ಅಚ್ಚರಿಯ ಆಯ್ಕೆಗಳು ನಡೆದಿದ್ದು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಕಿರ್ಕ್ ಮೆಕೆಂಜಿ ಮತ್ತು ಅಲಿಕ್ ಅಥಾನಾಜೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದಾರೆ.

ನವೆಂಬರ್ 2021 ರಿಂದ ಟೆಸ್ಟ್ ಪಂದ್ಯವನ್ನು ಆಡದ ಆಲ್ ರೌಂಡರ್ ರಹಕೀಮ್ ಕಾರ್ನ್‌ವಾಲ್ ಮತ್ತು ಫೆಬ್ರವರಿಯ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದ ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕಾನ್ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.

ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಮೊದಲ ಟೆಸ್ಟ್ನಿಂದ ಹೊರಬಿದ್ದಿದ್ದಾರೆ. ಕ್ರಿಕೆಟ್ ವೆಸ್ಟ್ ಇಂಡೀಸ್ ಹಿರಿಯ ಪುರುಷರ ಆಯ್ಕೆ ಸಮಿತಿಯು 13 ತಂಡದ ಸದಸ್ಯರ ಜೊತೆ ಇಬ್ಬರು ಮೀಸಲು ಆಟಗಾರರನ್ನು ಕೂಡ ಹೆಸರಿಸಿದೆ.

ಆಯ್ಕೆ ಸಮಿತಿ ಅಧ್ಯಕ್ಷ ಡೆಸ್ಮಂಡ್ ಹೇನ್ಸ್ ಮಾತನಾಡಿ, "ಇತ್ತೀಚಿನ ಬಾಂಗ್ಲಾದೇಶದ 'ಎ' ತಂಡದ ವಿರುದ್ಧದ ಪ್ರವಾಸದಲ್ಲಿ ಮೆಕೆಂಜಿ ಮತ್ತು ಅಥಾನಾಜೆ ಅವರ ಬ್ಯಾಟ್ಸ್‌ಮನ್‌ಶಿಪ್ ಬಗ್ಗೆ ನಾವು ಸಾಕಷ್ಟು ಪ್ರಭಾವಿತರಾಗಿದ್ದೇವೆ. ಈ ಇಬ್ಬರು ಯುವ ಆಟಗಾರರು ಅವಕಾಶಕ್ಕೆ ಅರ್ಹರು. ಇವರಿಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಾರೆ", ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ತಂಡವು ತಮ್ಮ ಪ್ರಿ ಸಿರೀಸ್ ತರಬೇತಿ ಶಿಬಿರದ ನಂತರ ಜುಲೈ 9 ರಂದು ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಿಂದ ಡೊಮಿನಿಕಾಗೆ ತೆರಳಲಿದೆ.

ಮೊದಲ ಟೆಸ್ಟ್ಗೆ ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜೆ, ಟಗೆನರೈನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್, ಮರ್ಕ್ರಿ ಜೋಸೆಫ್, ಕಿರ್ಕೆ ಕೆಮರ್ ರೋಚ್, ಜೋಮೆಲ್ ವಾರಿಕನ್. ಪ್ರಯಾಣ ಮೀಸಲು: ಟೆವಿನ್ ಇಮ್ಲಾಚ್, ಅಕೀಮ್ ಜೋರ್ಡಾನ್.
