- Kannada News Photo gallery Cricket photos IND vs WI Shubman Gill shines on India return after two years slams maiden fifty in 1st ODI
IND vs WI: 3 ವರ್ಷಗಳಲ್ಲಿ 3 ಪಂದ್ಯ, ಕೇವಲ 49 ರನ್; ಈಗ ಇದ್ದಕ್ಕಿದ್ದಂತೆ ತಂಡಕ್ಕೆ ಮರಳಿ ಫಿಫ್ಟಿ ಬಾರಿಸಿದ ಗಿಲ್
IND vs WI: ಗಿಲ್ ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಈ ಅರ್ಧಶತಕ ಪೂರೈಸಿದರು. ಆದರೆ, ಅವರ ಬಲಿಷ್ಠ ಇನ್ನಿಂಗ್ಸ್ ರನ್ ಔಟ್‌ನೊಂದಿಗೆ ಕೊನೆಗೊಂಡಿತು. ಅವರು 53 ಎಸೆತಗಳಲ್ಲಿ 64 ರನ್ ಗಳಿಸಿದರು.
Updated on:Jul 23, 2022 | 5:11 PM

ಅನೇಕ ಹಿರಿಯ ಮತ್ತು ಎಲ್ಲಾ ಮಾದರಿಯ ಅನುಭವಿ ಆಟಗಾರರು ನಿರಂತರ ಕ್ರಿಕೆಟ್‌ನಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದರೂ, ಇದು ಅನೇಕ ಯುವ ಮತ್ತು ಹೊಸ ಆಟಗಾರರಿಗೆ ತಮ್ಮ ದೇಶಕ್ಕಾಗಿ ಆಡಲು ಅವಕಾಶವನ್ನು ನೀಡುತ್ತಿದೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ಹಲವು ಆಟಗಾರರಿಗೆ ಅವಕಾಶ ಸಿಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿಯ ಲಾಭ ಅಂತಹ ಯುವ ಬ್ಯಾಟ್ಸ್‌ಮನ್‌ಗೆ ಹೋಯಿತು, ಅವರು ಒಂದೂವರೆ ವರ್ಷಗಳ ನಂತರ ತಂಡಕ್ಕೆ ಮರಳಿದರು.

ಶುಕ್ರವಾರ ಜುಲೈ 22 ರಂದು ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ODI ಸರಣಿಯ ಮೊದಲ ಪಂದ್ಯದಲ್ಲಿ, ಭಾರತ ತಂಡವು ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಆಡುವ XI ಗೆ ಸೇರಿಸುವ ಮೂಲಕ ಅಚ್ಚರಿ ಮೂಡಿಸಿತು

ಗಿಲ್ ಕೂಡ ತಮ್ಮ ಆಯ್ಕೆಯ ಬಲವನ್ನು ಸಾಬೀತುಪಡಿಸಿದರು ಮತ್ತು ನಾಯಕ ಶಿಖರ್ ಧವನ್ ಜೊತೆಗೂಡಿ ಅದ್ಭುತ ಆರಂಭಿಕ ಜೊತೆಯಾಟವನ್ನು ಮಾಡಿದರು. ಈ ಸಮಯದಲ್ಲಿ, ಗಿಲ್ ತಮ್ಮ ODI ವೃತ್ತಿಜೀವನದ ಮೊದಲ ಅರ್ಧಶತಕವನ್ನು ಸಹ ಗಳಿಸಿದರು. ಗಿಲ್ ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಈ ಅರ್ಧಶತಕ ಪೂರೈಸಿದರು. ಆದರೆ, ಅವರ ಬಲಿಷ್ಠ ಇನ್ನಿಂಗ್ಸ್ ರನ್ ಔಟ್‌ನೊಂದಿಗೆ ಕೊನೆಗೊಂಡಿತು. ಅವರು 53 ಎಸೆತಗಳಲ್ಲಿ 64 ರನ್ ಗಳಿಸಿದರು.

ಭಾರತ ಟೆಸ್ಟ್ ತಂಡದಲ್ಲಿ ಆಗಾಗ ಆಡುವ ಗಿಲ್ ಅವರಿಗೆ ಇನ್ನೂ ಏಕದಿನ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. 2019ರಲ್ಲಿ ಪದಾರ್ಪಣೆ ಮಾಡಿದ್ದ ಗಿಲ್ ಕಳೆದ ಮೂರೂವರೆ ವರ್ಷಗಳಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ವಿಶೇಷವೆಂದರೆ ಇದಕ್ಕೂ ಮುನ್ನ ಅವರು ಒಟ್ಟು 49 ರನ್ ಗಳಿಸಿದ್ದರು.

ಟೀಂ ಇಂಡಿಯಾ ಪರ ಗಿಲ್ ಅವರ ಕೊನೆಯ ಏಕದಿನ ಪಂದ್ಯ ಒಂದೂವರೆ ವರ್ಷದ ಹಿಂದೆ ಆಸ್ಟ್ರೇಲಿಯಾ ವಿರುದ್ದ ಆಗಿತ್ತು. ಗಿಲ್ ಡಿಸೆಂಬರ್ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ODI ಪಂದ್ಯದಲ್ಲಿ 33 ರನ್ ಗಳಿಸಿದರು.
Published On - 4:51 pm, Sat, 23 July 22




