- Kannada News Photo gallery Cricket photos India 3rd in ICC WTC points table after Indian team win over new zealand Sri lanka on top
WTC Points Table: ಸರಣಿ ಗೆದ್ದ ಮೇಲೂ ಟೀಂ ಇಂಡಿಯಾ ಟಾಪರ್ ಆಗಲಿಲ್ಲ! ಲಂಕಾ-ಪಾಕ್ ಮೇಲುಗೈ
WTC Points Table: ಮುಂಬೈ ಟೆಸ್ಟ್ ಗೆದ್ದ ನಂತರ ಟೀಮ್ ಇಂಡಿಯಾ 42 ಅಂಕಗಳನ್ನು ಹೊಂದಿದೆ. ಅಲ್ಲದೆ ಶೇಕಡಾವಾರು ಪಾಯಿಂಟ್ ಈಗ 58.33 ಆಗಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
Updated on: Dec 06, 2021 | 3:56 PM

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಮುಂಬೈ ಟೆಸ್ಟ್‌ನಲ್ಲಿ 372 ರನ್‌ಗಳಿಂದ ಗೆದ್ದು ಸರಣಿಯನ್ನು 1-0ಯಿಂದ ವಶಪಡಿಸಿಕೊಂಡರು. ಇದು 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಸರಣಿ ಜಯವಾಗಿದೆ. ಈ ಫಲಿತಾಂಶದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲೂ ಬದಲಾವಣೆಯಾಗಿದೆ. ಆದರೆ ಭಾರತದ ಸ್ಥಾನದಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ. WTC ಯ ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಯಾವ ತಂಡವು ಅಗ್ರಸ್ಥಾನದಲ್ಲಿದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

ಮುಂಬೈ ಟೆಸ್ಟ್ ಗೆದ್ದ ನಂತರ ಟೀಮ್ ಇಂಡಿಯಾ 42 ಅಂಕಗಳನ್ನು ಹೊಂದಿದೆ. ಅಲ್ಲದೆ ಶೇಕಡಾವಾರು ಪಾಯಿಂಟ್ ಈಗ 58.33 ಆಗಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಮೂರರಲ್ಲಿ ಗೆದ್ದು, ಎರಡರಲ್ಲಿ ಡ್ರಾ ಹಾಗೂ ಒಂದರಲ್ಲಿ ಸೋತಿದ್ದಾರೆ. ಭಾರತ ಡಬ್ಲ್ಯುಟಿಸಿಯಲ್ಲಿ ಎರಡು ಟೆಸ್ಟ್ ಸರಣಿಗಳನ್ನು ಆಡಿದೆ. ಇದರಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದಾಗ್ಯೂ, ಭಾರತ ಇದರಲ್ಲಿ 2-1 ಮುನ್ನಡೆಯಲ್ಲಿದೆ 2022 ರ ಕೊನೆಯ ಟೆಸ್ಟ್‌ನೊಂದಿಗೆ ಫಲಿತಾಂಶವು ಹೊರಬೀಳಲಿದೆ.

ಶ್ರೀಲಂಕಾ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಎರಡನ್ನೂ ಗೆದ್ದಿದ್ದಾರೆ. ಶ್ರೀಲಂಕಾ 24 ಅಂಕ ಮತ್ತು 100 ಪರ್ಸೆಂಟೈಲ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ತಂಡಗಳ ಸ್ಥಾನವನ್ನು ಗಳಿಸಿದ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ. ಭಾರತ ಮತ್ತು ಶ್ರೀಲಂಕಾದ ವಿಷಯದಲ್ಲಂತೂ. ಭಾರತ 42 ಅಂಕಗಳನ್ನು ಹೊಂದಿದ್ದರೂ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಕೊರೊನಾವೈರಸ್‌ನಿಂದಾಗಿ ಕೆಲವು ಸರಣಿಗಳನ್ನು ರದ್ದುಗೊಳಿಸಿದ್ದರಿಂದ ಐಸಿಸಿ ಈ ಬಾರಿ ಪಾಯಿಂಟ್‌ಗಳ ಶೇಕಡಾವಾರು ವ್ಯವಸ್ಥೆಯನ್ನು ಮೊದಲಿನಿಂದ ಜಾರಿಗೆ ತಂದಿದೆ. ಇದರ ಆಧಾರದ ಮೇಲೆ ಗೆಲುವಿಗೆ ಶೇ.100 ಅಂಕ ನೀಡಿದರೆ, ಟೈ ಆದಲ್ಲಿ ಶೇ.50 ಅಂಕ ಹಾಗೂ ಡ್ರಾಗೊಂಡ ಪಂದ್ಯಕ್ಕೆ ಉಭಯ ತಂಡಗಳು ಶೇ.33.33 ಅಂಕಗಳನ್ನು ಪಡೆಯುತ್ತವೆ.

ಪಾಕಿಸ್ತಾನವು ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ಅವರು ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಎರಡು ಗೆದ್ದು ಒಂದು ಸೋತಿದೆ. ಹಾಗಾಗಿ ಅವರ ಖಾತೆಯಲ್ಲಿ 24 ಅಂಕ ಹಾಗೂ ಶೇ.66.66 ಅಂಕಗಳಿವೆ. ಪಾಕಿಸ್ತಾನ ಸದ್ಯ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ.

ಉಳಿದ ತಂಡಗಳ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್ ಒಂದು ಗೆಲುವು, ಒಂದು ಡ್ರಾ ಮತ್ತು ಎರಡು ಸೋಲುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅವರು 14 ಅಂಕಗಳನ್ನು ಮತ್ತು 29.17 ಶೇಕಡಾ ಅಂಕಗಳನ್ನು ಹೊಂದಿದ್ದಾರೆ. ವೆಸ್ಟ್ ಇಂಡೀಸ್ ಒಂದು ಗೆಲುವು ಮತ್ತು ಮೂರು ಸೋಲಿನೊಂದಿಗೆ 12 ಅಂಕಗಳು ಮತ್ತು 25 ಶೇಕಡಾ ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ನಾಲ್ಕು ಅಂಕಗಳನ್ನು ಮತ್ತು 16.66 ಶೇಕಡಾ ಅಂಕಗಳನ್ನು ಹೊಂದಿದೆ ಮತ್ತು ಆರನೇ ಸ್ಥಾನದಲ್ಲಿದೆ.




