IND vs ENG: ಟೀಂ ಇಂಡಿಯಾವನ್ನು ಕಾಡುತ್ತಿರುವ ಇಬ್ಬರು ಆರ್​ಸಿಬಿ ಆಟಗಾರರು

Updated on: Jul 08, 2026 | 3:21 PM

India vs England: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋತು, ಒಂದು ರದ್ದಾಗಿದೆ. ಈ ಸರಣಿಯಲ್ಲಿ ಭಾರತದ ಸೋಲಿಗೆ ಜೇಕಬ್ ಬೆಥೆಲ್ ಮತ್ತು ಫಿಲ್ ಸಾಲ್ಟ್ (ಆರ್‌ಸಿಬಿ ಆಟಗಾರರು) ಪ್ರಮುಖ ಕಾರಣರಾಗಿದ್ದು, ಇಂಗ್ಲೆಂಡ್ ಪರ ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ತಂದಿದ್ದಾರೆ.

1 / 5
ಐದು ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಇದುವರೆಗೂ ತನ್ನ ಗೆಲುವಿನ ಖಾತೆ ತೆರೆದಿಲ್ಲ ನಡೆದಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿದ್ದರೆ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಶ್ರೇಯಸ್ ಪಡೆಯ ಈ ಕಳಪೆ ಪ್ರದರ್ಶನವನ್ನು ನೋಡಿದರೆ, ಮಳೆಯಿಂದ ಮೊದಲ ಪಂದ್ಯ ರದ್ದಾಗದಿದ್ದರೆ, ಆ ಪಂದ್ಯವನ್ನು ಭಾರತ ಸೋಲುವ ಸಾಧ್ಯತೆಗಳಿದ್ದವು (PC-BCCI).

2 / 5
ಸರಣಿಯ ಎರಡನೇ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿದ್ದ ಭಾರತ ತಂಡ, ಎರಡನೇ ಪಂದ್ಯವನ್ನು ಬರೋಬ್ಬರಿ 125 ರನ್​ಗಳಿಂದ ಸೋತಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಕಂಡ ಅತಿದೊಡ್ಡ ಸೋಲು ಇದಾಗಿದೆ. ಹಾಗೆಯೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಸತತ ಐದು ಪಂದ್ಯಗಳನ್ನು ಗೆಲ್ಲಲು ವಿಫಲವಾಗಿರುವುದು ಇದೇ ಮೊದಲು (PC-BCCI).

3 / 5
ವಾಸ್ತವವಾಗಿ ಟೀಂ ಇಂಡಿಯಾದ ಸತತ ಈ ಎರಡು ಸೋಲುಗಳಿಗೆ ಒಂದರ್ಥದಲ್ಲಿ ಇಬ್ಬರು ಆರ್​ಸಿಬಿ ಆಟಗಾರರೇ ಪ್ರಮುಖ ಕಾರಣ ಎನ್ನಬಹುದು. ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 190 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ 4ನೇ ಕ್ರಮಾಂಕದಲ್ಲಿ ಬಂದ ಜೇಕಬ್ ಬೆಥೆಲ್ ಕೊನೆಯವರೆಗೂ ಅಜೇಯರಾಗಿ ಉಳಿದು 76 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬೆಥೆಲ್ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಆಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ (PC-ECB).

4 / 5
ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಆರಂಭಿಕ ಫಿಲ್ ಸಾಲ್ಟ್ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡ 200 ರನ್​ಗಳ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಾಲ್ಟ್ 17ನೇ ಓವರ್​ನವರೆಗೂ ಕ್ರಿಸ್​ನಲ್ಲಿ ನಿಂತು ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಹಾಗೆಯೇ ವೈಯಕ್ತಿಕವಾಗಿ 70 ರನ್​ಗಳ ಇನ್ನಿಂಗ್ಸ್ ಕೂಡ ಆಡಿದರು. ಸಾಲ್ಟ್ ಕೂಡ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಆಡುತ್ತಾರೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ (PC-PTI).

5 / 5
ಇವರಿಬ್ಬರ ಜೊತೆಗೆ ಇಡೀ ಇಂಗ್ಲೆಂಡ್‌ ತಂಡದ ಸಾಂಘಿಕ ಪ್ರದರ್ಶನ ಗೆಲುವಿಗೆ ಪ್ರಮುಖ ಕಾರಣವಾಗಿದ್ದರೂ ಇವರಿಬ್ಬರ ನಿರ್ಣಾಯಕ ರನ್ ಕೊಡುಗೆ ತಂಡವನ್ನು ಒತ್ತಡದಿಂದ ದೂರ ಮಾಡಿತು. ಅದರಲ್ಲೂ 2ನೇ ಟಿ20 ಪಂದ್ಯದಲ್ಲಿ ಬೆಥೆಲ್ ಆಡಿದ ಅಜೇಯ ಇನ್ನಿಂಗ್ಸ್​ನಿಂದಾಗಿಯೇ ಇಂಗ್ಲೆಂಡ್‌ ಗೆದ್ದಿತು ಎಂಬುದರಲ್ಲಿ ಯಾವುದೇ ಸುಳ್ಳಿಲ್ಲ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಲ್ಟ್ ಕಟ್ಟಿದ ಇನ್ನಿಂಗ್ಸ್ ಕೂಡ ಇಂಗ್ಲೆಂಡ್‌ ಗೆಲುವಿಗೆ ಕಾರಣವಾಯಿತು. ಒಟ್ಟಾರೆ ಐಪಿಎಲ್‌ನಲ್ಲಿ ಆರ್​ಸಿಬಿ ಅಭಿಮಾನಿಗಳ ಫೆವರೇಟ್ ಆಟಗಾರರೆನಿಸಿಕೊಂಡಿರುವವರು, ಇದೀಗ ಟೀಂ ಇಂಡಿಯಾ ಪಾಲಿಗೆ ವಿಲನ್​ಗಳಾಗಿದ್ದಾರೆ ಎಂದರೆ ತಪ್ಪಾಗಲಾರದು (PC-PTI).

Published On - 3:21 pm, Wed, 8 July 26

Follow Us