- Kannada News Photo gallery Cricket photos India Predicted Playing XI vs England in T20 World Cup 2022 Semi Final 2 Match Cricket News in Kannada
India vs England: ಹೈವೋಲ್ಟೇಜ್ ಸೆಮೀಸ್ ಪಂದ್ಯಕ್ಕೆ 1 ದೊಡ್ಡ ಬದಲಾವಣೆ: ಇಲ್ಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
India Playing XI vs England: ಟಿ20 ವಿಶ್ವಕಪ್ನ ದ್ವಿತೀಯ ಸೆಮಿ ಫೈನಲ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಹಾಗಾದರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.
Updated on: Nov 10, 2022 | 10:27 AM

ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡಕ್ಕೆ ಇಂದು ಮಹತ್ವದ ದಿನ. ಐಸಿಸಿ ಟಿ20 ವಿಶ್ವಕಪ್ನ ದ್ವಿತೀಯ ಸೆಮಿ ಫೈನಲ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಎರಡು ಬಲಿಷ್ಠ ತಂಡಗಳ ನಡುವಣ ಕಾಳಗಕ್ಕೆ ಅಡಿಲೇಡ್ನ ಓವಲ್ ಮೈದಾನ ಸಾಕ್ಷಿಯಾಗಲಿದೆ. ಹಾಗಾದರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.

ಓಪನರ್ ಆಗಿ ಕೆಎಲ್ ರಾಹುಲ್ ಆಡುವುದು ಖಚಿತ. ಕಳೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇವರು ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿ ಕೂಡ ಇದ್ದಾರೆ.

ರೋಹಿತ್ ಶರ್ಮಾ ಕೂಡ ರಾಹುಲ್ ಜೊತೆ ಕಣಕ್ಕಿಳಿಯಲಿದ್ದಾರೆ. ಹಿಟ್ಮ್ಯಾನ್ ಕಡೆಯಿಂದ ಇಂದು ನಾಯಕನ ಆಟ ಬರಬೇಕಿದೆ.

ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ಕೂಡ ಆಕರ್ಷಕ ಫಾರ್ಮ್ನಲ್ಲಿದ್ದಾರೆ.

ರಿಷಭ್ ಪಂತ್ಗೆ ಜಿಂಬಾಬ್ವೆ ವಿರುದ್ಧ ಅವಕಾಶ ನೀಡಲಾಗಿತ್ತು. ಆದರೆ, ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಹೀಗಿದ್ದರೂ ಪಂತ್ಗೆ ಮತ್ತೊಂದು ಚಾನ್ಸ್ ಸಿಗಬಹುದು.

ಹಾರ್ದಿಕ್ ಪಾಂಡ್ಯ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ನ ಅಗತ್ಯವಿದೆ.

ಅಕ್ಷರ್ ಪಟೇಲ್ ಸ್ಥಾನ ಬಹುತೇಕ ಭದ್ರವಾಗಿದೆ.

ರವಿಚಂದ್ರನ್ ಅಶ್ವಿನ್ ಜಾಗದಲ್ಲಿ ಯುಜ್ವೇಂದ್ರ ಚಹಲ್ ಆಡುವ ಸಂಭವವಿದೆ. ಈ ಒಂದು ಬದಲಾವಣೆ ಟೀಮ್ ಇಂಡಿಯಾದಲ್ಲಿ ನಿರೀಕ್ಷಿಸಲಾಗಿದೆ.

ಭುವನೇಶ್ವರ್ ಕುಮಾರ್.

ಮೊಹಮ್ಮದ್ ಶಮಿ ಈ ಟೂರ್ನಿಯಲ್ಲಿ ಮಾರಕವಾಗಿ ಗೋಚರಿಸಿದ್ದಾರೆ.

ಅರ್ಶ್ದೀಪ್ ಸಿಂಗ್ ಕೂಡ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.




