Team India: ಟೀಮ್ ಇಂಡಿಯಾಗೆ ಇಬ್ಬರು ಯುವ ಆಟಗಾರರ ಎಂಟ್ರಿ ಸಾಧ್ಯತೆ

India tour of West Indies 2023: ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ರಂದು, 2ನೇ ಪಂದ್ಯ ಆಗಸ್ಟ್ 6 ರಂದು, 3ನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 13, 2023 | 7:23 PM

India tour of West Indies 2023: ಭಾರತ-ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.

1 / 7
ಈ ಸರಣಿಗಾಗಿ ಶೀಘ್ರದಲ್ಲೇ ತಂಡವನ್ನು ಆಯ್ಕೆ ಮಾಡಲಿದ್ದು, ಇದರಲ್ಲಿ ಇಬ್ಬರು ಯುವ ಆಟಗಾರರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.

2 / 7
ಹೀಗೆ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಅವಕಾಶ ಪಡೆಯಲಿರುವ ಆಟಗಾರರೆಂದರೆ ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್.

3 / 7
ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಲ್ಲಿ 625 ರನ್ ಕಲೆಹಾಕಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಜೈಸ್ವಾಲ್​ಗೆ ಚಾನ್ಸ್​ ಸಿಗಲಿದೆ ಎಂದು ವರದಿಯಾಗಿದೆ.

4 / 7
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಪರ ಫಿನಿಶರ್ ಪಾತ್ರದಲ್ಲಿ ಅಬ್ಬರಿಸಿದ್ದ ರಿಂಕು ಸಿಂಗ್​ಗೂ ಕೂಡ ಟೀಮ್ ಇಂಡಿಯಾದ ಬಾಗಿಲು ತೆರೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಂಕು 14 ಪಂದ್ಯಗಳಿಂದ 474 ರನ್ ಕಲೆಹಾಕಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ರಿಂಕು ಸಿಂಗ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

5 / 7
ಮತ್ತೊಂದೆಡೆ ಕಳಪೆ ಫಾರ್ಮ್​ನಲ್ಲಿರುವ ದೀಪಕ್ ಹೂಡಾ ಹಾಗೂ ರಾಹುಲ್ ತ್ರಿಪಾಠಿ ಟೀಮ್ ಇಂಡಿಯಾದಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಇವರಿಬ್ಬರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್​ಗೆ ಮಣೆ ಹಾಕಬಹುದು.

6 / 7
ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ರಂದು, 2ನೇ ಪಂದ್ಯ ಆಗಸ್ಟ್ 6 ರಂದು, 3ನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಇನ್ನು 4ನೇ ಪಂದ್ಯವು ಆಗಸ್ಟ್ 12 ರಂದು, 5ನೇ ಟಿ20 ಪಂದ್ಯ ಆಗಸ್ಟ್ 13 ರಂದು ಫ್ಲೋರಿಡಾದಲ್ಲಿ ನಡೆಯಲಿದೆ.

7 / 7
Follow us
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ

ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ

ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ

ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ

News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್

ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ

ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್

ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ

‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ

ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್