Breaking: ‘ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ’; ವಿದೇಶಾಂಗ ಸಚಿವಾಲಯದ ಸ್ಪಷ್ಟನೆ

ICC Champions Trophy 2025: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಕಳುಹಿಸಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡುವ ಬಗ್ಗೆ ಇದ್ದ ಅನುಮಾನಗಳಿಗೆ ತೆರೆಬಿದ್ದಿದೆ.

ಪೃಥ್ವಿಶಂಕರ
|

Updated on:Nov 29, 2024 | 5:01 PM

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಕಳುಹಿಸಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡುವ ಬಗ್ಗೆ ಇದ್ದ ಅನುಮಾನಗಳಿಗೆ ತೆರೆಬಿದ್ದಿದೆ.

1 / 6
ಇಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರ ಬಳಿ ಐಸಿಸಿ ಪಂದ್ಯಾವಳಿಯನ್ನಾಡಲು ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಹೋಗಲಿದೆಯೇ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಭದ್ರತಾ ಕಾಳಜಿಯ ದೃಷ್ಟಿಯಿಂದ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ನಾವು ಬಿಸಿಸಿಐಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

2 / 6
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಈ ಹೇಳಿಕೆ ಹೊರಬಿದ್ದ ಬಳಿಕ ಐಸಿಸಿ ನಡೆಸುತ್ತಿರುವ ವರ್ಚುವಲ್ ಸಭೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹಗ್ಗಜಗ್ಗಾಟಕ್ಕೆ ತೆರೆ ಎಳೆಯುವ ಸಲುವಾಗಿ ಐಸಿಸಿ ಈ ಸಭೆಯನ್ನು ಏರ್ಪಡಿಸಿದೆ. ಇದೀಗ ಈ ಸಭೆಗೂ ಮುನ್ನ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿರುವುದರಿಂದ ಐಸಿಸಿ, ಈ ಸಮಸ್ಯೆಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

3 / 6
ಸದ್ಯದ ಮಾಹಿತಿಯ ಪ್ರಕಾರ, ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನಕ್ಕೆ ಕೇಳಲಿದೆ. ಆ ಪ್ರಕಾರ ಭಾರತದ ಪಂದ್ಯಗಳು ಪಾಕಿಸ್ತಾನದ ಹೊರಗೆ ನಡೆಯಲ್ಲಿವೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲ್ಲಿವೆ.

4 / 6
ಆದರೆ ಪಾಕಿಸ್ತಾನ ಈಗಾಗಲೇ ಹೈಬ್ರಿಡ್ ಮಾದರಿಗೆ ನಮ್ಮ ಸಮ್ಮತಿಯಿಲ್ಲ ಎಂಬುದನ್ನು ಐಸಿಸಿಗೆ ತಿಳಿಸಿದೆ. ಹೀಗಾಗಿ ಐಸಿಸಿಯ ಈ ನಿರ್ಧಾರಕ್ಕೆ ಪಾಕಿಸ್ತಾನ ಒಪ್ಪದಿದ್ದರೆ, ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದ ಹೊರಗೆ ನಡೆಸುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ನಾವು ಸಿದ್ದ ಎಂದು ಬಿಸಿಸಿಐ ಹೇಳಿದೆ ಎಂದು ವರದಿಯಾಗಿದೆ.

5 / 6
ಮೂಲಗಳ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕೆಂಬ ಒತ್ತಡಕ್ಕೆ ಪಾಕಿಸ್ತಾನ ಮಣಿದರೆ, ಮುಂದಿನ ವರ್ಷ ಭಾರತದಲ್ಲಿ ನಡೆಯಲ್ಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಹಾಗೂ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂಬ ವಾದವನ್ನು ಐಸಿಸಿ ಮುಂದಿಡಲು ಪಾಕಿಸ್ತಾನ ಸಜ್ಜಾಗಿದೆ ಎಂದು ವರದಿಯಾಗಿದೆ.

6 / 6

Published On - 4:36 pm, Fri, 29 November 24

Follow us
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್

ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?

ಒಂದೇ ಓವರ್​ನಲ್ಲಿ 28 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ; ವಿಡಿಯೋ ನೋಡಿ

ಎಲ್ಲ ಪಕ್ಷಗಳಂತೆ ಕಾಂಗ್ರೆಸ್​ನಲ್ಲೂ ಭಿನ್ನಮತವಿದೆ: ಸತೀಶ್ ಜಾರಕಿಹೊಳಿ

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ, ಬಸ್ ಪಲ್ಟಿಯಾಗಿ 8 ಮಂದಿ ಸಾವು

ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೊಲೀಸರಿಂದ ಹೋಮ ಹವನ

ಚನ್ನಪಟ್ಟಣದಲ್ಲಿ ನೂತನ ಶಾಸಕರ ಕಚೇರಿಯನ್ನು ಉದ್ಘಾಟಿಸಿಕೊಂಡ ಸಿಪಿ ಯೋಗೇಶ್ವರ್

ಮುಲಾಜಿಲ್ಲದೆ ಯತ್ನಾಳ್​ರನ್ನು ಪಕ್ಷದಿಂದ ಉಚ್ಛಾಟಿಸಬೇಕು: ರೇಣುಕಾಚಾರ್ಯ

ರಾಜಕಾರಣವನ್ನು ಮಾಧ್ಯಮಗಳ ಮುಂದೆ ಚರ್ಚಿಸಲಾಗಲ್ಲ: ಡಿಕೆ ಶಿವಕುಮಾರ್

ಪ್ರಧಾನಿ ಮೋದಿಯೊಂದಿಗೆ ಶಿವಕುಮಾರ್ ನೀರಾವರಿ ಸೇರಿದಂತೆ ಹಲವು ವಿಷಯಗಳ ಚರ್ಚೆ