1031 ಎಸೆತಗಳಲ್ಲಿ ಪಂದ್ಯ ಮುಗಿಸಿ ಇತಿಹಾಸ ನಿರ್ಮಿಸಿದ ಆಸ್ಟ್ರೇಲಿಯಾ

Updated on: Dec 08, 2024 | 12:26 PM

India vs Australia: ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 295 ರನ್​​ಗಳ ಭರ್ಜರಿ ಜಯ ಸಾಧಿಸಿತ್ತು.

1 / 6
ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸೀಸ್ ಪಡೆ ಐತಿಹಾಸಿಕ ಸಾಧನೆಯೊಂದನ್ನು ಸಹ ಮಾಡಿದೆ.

ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸೀಸ್ ಪಡೆ ಐತಿಹಾಸಿಕ ಸಾಧನೆಯೊಂದನ್ನು ಸಹ ಮಾಡಿದೆ.

2 / 6

ಅಂದರೆ ಈ ಪಂದ್ಯವು ಉಭಯ ತಂಡಗಳ ನಡುವಿನ ಅತ್ಯಂತ ಕಡಿಮೆ ಎಸೆತಗಳ ಟೆಸ್ಟ್​​ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯನ್ನರು ಕೇವಲ 486 ಎಸೆತಗಳನ್ನು ಮಾತ್ರ ಎಸೆದಿದ್ದಾರೆ.

3 / 6

ಮೊದಲ ಇನಿಂಗ್ಸ್​​ನಲ್ಲಿ 44.1 ಓವರ್​​ಗಳಲ್ಲಿ ಆಸ್ಟ್ರೇಲಿಯಾ 180 ರನ್ ನೀಡಿದರೆ, ದ್ವಿತೀಯ ಇನಿಂಗ್ಸ್​​ನಲ್ಲಿ 36.5 ಓವರ್​​ಗಳಲ್ಲಿ 175 ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ ಟೀಮ್ ಇಂಡಿಯಾವನ್ನು ಕೇವಲ 486 ಎಸೆತಗಳಲ್ಲಿ ಕಟ್ಟಿಹಾಕಿದರು.

4 / 6

ಇನ್ನು ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​​ನಲ್ಲಿ 525 ಎಸೆತಗಳನ್ನು ಎದುರಿಸಿ 337 ರನ್ ಕಲೆಹಾಕಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಆಡಿದ್ದು ಕೇವಲ 20 ಎಸೆತಗಳನ್ನು ಮಾತ್ರ. ಈ ಮೂಲಕ ದ್ವಿತೀಯ ಇನಿಂಗ್ಸ್​​ನಲ್ಲಿ 19 ರನ್​​ಗಳ ಗುರಿಯನ್ನು ಬೆನ್ನತ್ತಿ ಭರ್ಜರಿ ಜಯ ಸಾಧಿಸಿದೆ.

5 / 6

ಅಂದರೆ ಈ ಟೆಸ್ಟ್​ ಪಂದ್ಯದ 4 ಇನಿಂಗ್ಸ್​ಗಳಲ್ಲಿ ಮೂಡಿಬಂದ ಒಟ್ಟು ಎಸೆತಗಳ ಸಂಖ್ಯೆ ಕೇವಲ 1031. ವಿಶೇಷ ಎಂದರೆ ಇದು ಉಭಯ ತಂಡಗಳ ನಡುವಿನ ಅತ್ಯಂತ ಕಡಿಮೆ ಎಸೆತಗಳ ಟೆಸ್ಟ್​ ಪಂದ್ಯ. ಇದಕ್ಕೂ ಮುನ್ನ 2023 ರಲ್ಲಿ ಇಂದೋರ್​​ನಲ್ಲಿ ನಡೆದ ಟೆಸ್ಟ್ ಪಂದ್ಯವು 1135 ಎಸೆತಗಳಲ್ಲಿ ಅಂತ್ಯ ಕಂಡಿತ್ತು.

6 / 6

ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾ ವಿರುದ್ಧ 1031 ಎಸೆತಗಳಲ್ಲಿ ಪಂದ್ಯ ಮುಗಿಸಿ ಭರ್ಜರಿ ಜಯ ದಾಖಲಿಸುವಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ.

Published On - 12:25 pm, Sun, 8 December 24

Loading...
Unable to load recommendations.
Follow Us