Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
TV9 Web | Updated By: ಝಾಹಿರ್ ಯೂಸುಫ್
Updated on:
Nov 20, 2021 | 7:09 PM
India vs New Zealand: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಈ ಮೂವರು ಆಟಗಾರರು ಮಾತ್ರ 3 ಸಾವಿರ ರನ್ ಕಲೆಹಾಕಿರುವುದು ವಿಶೇಷ. ಅದರಲ್ಲಿ ಇಬ್ಬರು ಕೂಡ ಟೀಮ್ ಇಂಡಿಯಾ ಆಟಗಾರರು ಎಂಬುದು ಮತ್ತೊಂದು ವಿಶೇಷ.
1 / 6
ಭಾರತ-ನ್ಯೂಜಿಲೆಂಡ್ ನಡುವಣ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
2 / 6
ಆರಂಭಿಕನಾಗಿ ಕಣಕ್ಕಿಳಿದ ಗಪ್ಟಿಲ್ 2 ಸಿಕ್ಸ್ ಹಾಗೂ 3 ಬೌಂಡರಿ ಬಾರಿಸಿ ಕೇವಲ 15 ಎಸೆತಗಳಲ್ಲಿ 31 ರನ್ ಕಲೆಹಾಕಿದ್ದರು. ನ್ಯೂಜಿಲೆಂಡ್ಗೆ ಭರ್ಜರಿ ಆರಂಭ ಒದಗಿಸಿದ್ದ ಗಪ್ಟಿಲ್ 11 ರನ್ಗಳಿಸುವುದರೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದರು. ಅದು ಕೂಡ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎಂಬುದು ವಿಶೇಷ.
3 / 6
ಭಾರತದ ವಿರುದ್ದ 11 ರನ್ ಗಳಿಸುವುದರೊಂದಿಗೆ ಗಪ್ಟಿಲ್ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 87 ಇನಿಂಗ್ಸ್ಗಳಿಂದ 3227 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದರು.
4 / 6
ಇದೀಗ ಕೊಹ್ಲಿಯನ್ನು ಹಿಂದಿಕ್ಕಿ ಮಾರ್ಟಿನ್ ಗಪ್ಟಿಲ್ 3231 ರನ್ ಬಾರಿಸಿ ಅಗ್ರಸ್ಥಾನಕ್ಕೇರಿದ್ದಾರೆ. ಆದರೆ ಗಪ್ಟಿಲ್ ಈ ಸಾಧನೆ ಮಾಡಲು 107 ಇನಿಂಗ್ಸ್ ತೆಗೆದುಕೊಂಡಿದ್ದರು.
5 / 6
ಸದ್ಯ ಕೊಹ್ಲಿಗಿಂತ ಕೇವಲ 4 ರನ್ ಮುಂದಿರುವ ಗಪ್ಟಿಲ್ ಟಿ20 ಕ್ರಿಕೆಟ್ನ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (3227) ಇದ್ದು, 3ನೇ ಸ್ಥಾನದಲ್ಲಿ 3141 ರನ್ ಬಾರಿಸಿರುವ ರೋಹಿತ್ ಶರ್ಮಾ ಇದ್ದಾರೆ.
6 / 6
ಅಂದಹಾಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಈ ಮೂವರು ಆಟಗಾರರು ಮಾತ್ರ 3 ಸಾವಿರ ರನ್ ಕಲೆಹಾಕಿರುವುದು ವಿಶೇಷ. ಅದರಲ್ಲಿ ಇಬ್ಬರು ಕೂಡ ಟೀಮ್ ಇಂಡಿಯಾ ಆಟಗಾರರು ಎಂಬುದು ಮತ್ತೊಂದು ವಿಶೇಷ.