- Kannada News Photo gallery Cricket photos India vs New Zealand: Rahul Dravid donated INR 35000 to Green Park's groundstaff
Rahul Dravid: ರೋಚಕ ಪಂದ್ಯಕ್ಕೆ ಪಿಚ್ ಸಿದ್ದಪಡಿಸಿದ ಸಿಬ್ಬಂದಿಗೆ ಭರ್ಜರಿ ಗಿಫ್ಟ್ ನೀಡಿದ ರಾಹುಲ್ ದ್ರಾವಿಡ್
India vs New Zealand: ಅಂತಿಮ ವಿಕೆಟ್ಗೆ ಜೊತೆಗೂಡಿದ ರಚಿನ್ ರವೀಂದ್ರ ಹಾಗೂ ಏಜಾಝ್ ಪಟೇಲ್ 9 ಓವರ್ಗಳ ಕಾಲ ಬ್ಯಾಟ್ ಮಾಡುವ ಮೂಲಕ 9 ವಿಕೆಟ್ ನಷ್ಟಕ್ಕೆ 165 ರನ್ಗಳಿಸಿದರು. ಇದರೊಂದಿಗೆ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.
Updated on: Nov 29, 2021 | 8:09 PM

ಕಾನ್ಪುರದಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅಂತಿಮ ಓವರ್ವರೆಗೂ ಸಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಭಾರತ ಗೆಲ್ಲಬಹುದಾಗಿದ್ದ ಪಂದ್ಯವನ್ನು ನ್ಯೂಜಿಲೆಂಡ್ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪ ಎನಿಸುವ ಇಂತಹ ಸನ್ನಿವೇಶಕ್ಕೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಫುಲ್ ಖುಷ್ ಆಗಿದ್ದಾರೆ.

ಹೌದು, ಪ್ರತಿ ಕ್ಷಣಕ್ಕೂ ರೋಚಕ ಸೃಷ್ಟಿಸಿದ್ದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನ ಪಿಚ್ ಸಿದ್ಧಪಡಿಸಿದ ಸಿಬ್ಬಂದಿಗಳ ಬಗ್ಗೆ ರಾಹುಲ್ ದ್ರಾವಿಡ್ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಈ ಪಿಚ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಬ್ಬಂದಿಗಳಿಗೆ ದ್ರಾವಿಡ್ ಅವರು 35 ಸಾವಿರ ರೂ. ನೀಡಿದ್ದಾರೆ.

ಈ ವಿಚಾರವನ್ನು ಬಹಿರಂಗಪಡಿಸಿರುವ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ), ರಾಹುಲ್ ದ್ರಾವಿಡ್ ಖುದ್ದಾಗಿ 35 ಸಾವಿರ ರೂಪಾಯಿಗಳನ್ನು ನಮ್ಮ ಮೈದಾನದ ಸಿಬ್ಬಂದಿಗಳಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

5 ದಿನಗಳ ಕಾಲ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಟೀಮ್ ಇಂಡಿಯಾಬೌಲರ್‌ಗಳು 19 ವಿಕೆಟ್ ಪಡೆದರೆ, ಮತ್ತೊಂದೆಡೆ, ನ್ಯೂಜಿಲೆಂಡ್ ಬೌಲರ್‌ಗಳು 17 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಬ್ಯಾಟರುಗಳು ಮತ್ತು ಬೌಲರ್ ಇಬ್ಬರೂ ಪ್ರಾಬಲ್ಯ ಮೆರೆದಿದ್ದರು. ಇಂತಹದೊಂದು ಅತ್ಯುತ್ತಮ ಪಿಚ್ ಸಿದ್ಧಪಡಿಸಿದ್ದಕ್ಕಾಗಿ ಕೋಚ್ ಆಗಿ ದ್ರಾವಿಡ್ ಅವರು ಈ ಕಾಣಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ತಮ್ಮ ಕೋಚಿಂಗ್ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲೇ ರೋಚಕತೆ ಸೃಷ್ಟಿಸಿದ್ದಾರೆ. ಟೀಮ್ ಇಂಡಿಯಾ ನೀಡಿದ 284 ರನ್ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿತು. 86ನೇ ಓವರ್ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 147 ರನ್ಗಳಿಸಿತ್ತು. ಆದರೆ ಅಂತಿಮ ವಿಕೆಟ್ಗೆ ಜೊತೆಗೂಡಿದ ರಚಿನ್ ರವೀಂದ್ರ ಹಾಗೂ ಏಜಾಝ್ ಪಟೇಲ್ 9 ಓವರ್ಗಳ ಕಾಲ ಬ್ಯಾಟ್ ಮಾಡುವ ಮೂಲಕ 9 ವಿಕೆಟ್ ನಷ್ಟಕ್ಕೆ 165 ರನ್ಗಳಿಸಿದರು. ಇದರೊಂದಿಗೆ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು.
