AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

Ishan Kishan T20 World Cup: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕಿಶನ್, 77 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಪಾಕಿಸ್ತಾನದ ವಿರುದ್ಧ ಟಿ20 ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದು ಪಾಕಿಸ್ತಾನ ವಿರುದ್ಧ ಅವರ ಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿತ್ತು.

ಪೃಥ್ವಿಶಂಕರ
|

Updated on:Feb 15, 2026 | 9:30 PM

Share
ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕಿಶನ್, ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು.

1 / 6
ವಾಸ್ತವವಾಗಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನದ ವಿರುದ್ಧ ಇಶಾನ್ ಕಿಶನ್ ಇಂದು ಮೊದಲ ಪಂದ್ಯವನ್ನಾಡಿದರು. ಆಡಿದ ಮೊದಲ ಪಂದ್ಯದಲ್ಲೇ ಪಾಕ್ ಬೌಲರ್​ಗಳ ಬೆವರಿಳಿಸಿದ ಕಿಶನ್ ಸ್ಫೋಟಕ ಅರ್ಧಶತಕ ಬಾರಿಸಿದರು. ಮಾತ್ರವಲ್ಲದೆ ಪಾಕಿಸ್ತಾನ ವಿರುದ್ಧದ ಪವರ್‌ಪ್ಲೇನಲ್ಲಿ 42 ರನ್ ಬಾರಿಸುವ ಮೂಲಕ ಪಾಕಿಸ್ತಾನ ವಿರುದ್ಧದ ಟಿ20ಪಂದ್ಯದ ಪವರ್‌ಪ್ಲೇನಲ್ಲಿಯೇ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

2 / 6
ಈ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಬಾರಿಸಿದ ಇಶಾನ್ ಕಿಶನ್, ಈ ಪಂದ್ಯದಲ್ಲಿ  40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 192.50 ಸ್ಟ್ರೈಕ್ ರೇಟ್‌ನಲ್ಲಿ 77 ರನ್ ಕಲೆಹಾಕಿದರು. ಈ ಮೂಲಕ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್​ನಲ್ಲಿ ಅರ್ಧಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕಿಶನ್​ಗೂ ಮೊದಲು ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಸಾಧನೆ ಮಾಡಿದ್ದರು.

3 / 6
ರಾಬಿನ್ ಉತ್ತಪ್ಪ 2007 ರ ಟಿ20 ವಿಶ್ವಕಪ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ಆ ನಂತರ ಗೌತಮ್ ಗಂಭೀರ್ ಕೂಡ 2007 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಟಿ20 ಅರ್ಧಶತಕ ಸಿಡಿಸಿದ್ದರು. ಅದಾದ ಬಳಿಕ ವಿರಾಟ್ ಕೊಹ್ಲಿ 2012, 2016, 2021 ಮತ್ತು 2022 ರ ಟಿ20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದ್ದರು. ಈಗ, ಇಶಾನ್ ಕಿಶನ್ ಈ ಸಾಧನೆ ಮಾಡಿದ್ದಾರೆ.

4 / 6
ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ಗಳಿಸಿದ ಮೂರನೇ ವೇಗದ ಅರ್ಧಶತಕವಾಗಿದೆ. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2012 ರಲ್ಲಿ ಭಾರತದ ವಿರುದ್ಧ ಅವರು 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅದಾದ ನಂತರ, ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರೆ, ಈಗ ಇಶಾನ್ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

5 / 6
ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇಶಾನ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನಾ 79 ರನ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ವಿರಾಟ್ ಕೊಹ್ಲಿ ಅಜೇಯ 78 ರನ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇದೀಗ ಇಶಾನ್ ಕಿಶನ್ 77 ರನ್‌ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

6 / 6

Published On - 9:28 pm, Sun, 15 February 26

ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ

ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ

50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ

ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ

ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ

ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ

ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್

ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ

ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP

ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ