ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಜೂನ್ 17 ರಂದು ಹಾಂಗ್ಕಾಂಗ್ನ ಮೊಂಗ್ ಕಾಕ್‌ನಲ್ಲಿರುವ ಮಿಷನ್ ಗ್ರೌಂಡ್ ರೌಂಡ್ನಲ್ಲಿ ನಡೆಯಬೇಕಿದ್ದ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಈ ಮೂಲಕ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗಿದ್ದು, ಇದೀಗ ಎರಡೂ ತಂಡಗಳು ಟೂರ್ನಿಯ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿವೆ.