IND vs SL: ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ ಮಾನವ್ ಸುತಾರ್

Updated on: Aug 18, 2026 | 9:01 PM

Manav Suthar replicates Kumble's 32-year record: ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾಕ್ಕೆ ಭಾರತ 372 ರನ್‌ಗಳ ಗುರಿ ನೀಡಿದೆ. 4ನೇ ದಿನದಾಟದಂತ್ಯಕ್ಕೆ ಶ್ರೀಲಂಕಾ 84/4 ಆಗಿದ್ದು, ಮಾನವ್ ಸುತಾರ್ ಪ್ರಮುಖ ಎರಡು ವಿಕೆಟ್ ಪಡೆದಿದ್ದಾರೆ. ಚೊಚ್ಚಲ ಪಂದ್ಯವಾಡಿದ ಸೂರ್ಯಬಂಡಾರರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡುವ ಮೂಲಕ ಸುತಾರ್ 32 ವರ್ಷಗಳ ಹಿಂದಿನ ಅನಿಲ್ ಕುಂಬ್ಳೆ ದಾಖಲೆಯನ್ನು ಪುನರಾವರ್ತಿಸಿ ಇತಿಹಾಸ ನಿರ್ಮಿಸಿದ್ದಾರೆ.

1 / 5
ಗಾಲೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಗೆಲ್ಲಲು ಭಾರತ 372 ರನ್‌ಗಳ ಗುರಿ ನೀಡಿದೆ. ಆದರೆ ಈ ರನ್ ಚೇಸ್‌ನಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ಆರಂಭ ಪಡೆದುಕೊಂಡಿದೆ. 4ನೇ ದಿನದಾಟದಂತ್ಯಕ್ಕೆ ಶ್ರೀಲಂಕಾ 84 ರನ್​ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ನಾಲ್ಕು ವಿಕೆಟ್​ಗಳಲ್ಲಿ ಎರಡು ವಿಕೆಟ್‌ಗಳನ್ನು ಸ್ಪಿನ್ನರ್ ಮಾನವ್ ಸುತಾರ್ ಉರುಳಿಸಿದ್ದಾರೆ(PC-PTI).

2 / 5
ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದ ಮಾನವ್ ಸುತಾರ್ ಇದೀಗ ಎರಡನೇ ಇನ್ನಿಂಗ್ಸ್​ನಲ್ಲೂ ಪ್ರಮುಖ ಎರಡು ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಮೂಲಕ ಹೊಸ ಇತಿಹಾಸ ಕೂಡ ಸೃಷ್ಟಿಸಿದ್ದಾರೆ. ಶ್ರೀಲಂಕಾ ಪರ ಚೊಚ್ಚಲ ಪಂದ್ಯವನ್ನಾಡಿದ ಪಸಿಂದು ಸೂರ್ಯಬಂಡಾರ ಅವರನ್ನು ಓವರ್‌ನ ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಸುತಾರ್ 32 ವರ್ಷಗಳ ಹಳೆಯ ದಾಖಲೆಯನ್ನು ಪುನರಾವರ್ತಿಸಿದ್ದಾರೆ(PC-PTI).

3 / 5
ವಾಸ್ತವವಾಗಿ, ಈ ಪಂದ್ಯದ ಸಮಯದಲ್ಲಿ, ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಾಲ್, ಬೌಂಡರಿ ಲೈನ್‌ನಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸುವಾಗ ಗಂಭೀರವಾಗಿ ಗಾಯಗೊಂಡರು. ಕುತ್ತಿಗೆಗೆ ತೀವ್ರವಾದ ಗಾಯವಾಗಿದ್ದರಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಯುವ ಆಟಗಾರ ಪಸಿಂದು ಸೂರ್ಯಬಂದರ ಅವರಿಗೆ ಪಂದ್ಯದ ಮಧ್ಯದಲ್ಲಿ ಕನ್ಕ್ಯುಶನ್ ಬದಲಿಯಾಗಿ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಅವಕಾಶ ನೀಡಲಾಯಿತು. ಆದಾಗ್ಯೂ, ಇನ್ನಿಂಗ್ಸ್‌ನ ಎಂಟನೇ ಓವರ್ ಬೌಲ್ ಮಾಡಲು ಬಂದ ಮಾನವ್ ಸುತಾರ್ ಅವರಿಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ(PC-PTI).

4 / 5
ಸೂರ್ಯಬಂಡಾರ ಅವರ ಈ ವಿಕೆಟ್ ಟೆಸ್ಟ್ ಕ್ರಿಕೆಟ್​ನಲ್ಲಿ ಎರಡು ಪ್ರಮುಖ ದಾಖಲೆಗಳನ್ನು ಸೃಷ್ಟಿಸಿತು. ಮೊದಲನೆಯದ್ದು ಸೂರ್ಯಬಂಡಾರ ಕಳೆದ 10 ವರ್ಷಗಳಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಔಟಾದ ಮೊದಲ ಶ್ರೀಲಂಕಾದ ಬ್ಯಾಟ್ಸ್‌ಮನ್ ಎಂಬ ಬೇಡದ ದಾಖಲೆಗೆ ಕೊರಳೊಡ್ಡಬೇಕಾಯಿತು(PC-PTI).

5 / 5
ಇತ್ತ ಮಾನವ್ ಸುತಾರ್ 32 ವರ್ಷಗಳಲ್ಲಿ ಎದುರಾಳಿ ತಂಡದ ಪರ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಿದ ಆಟಗಾರನನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಕೊನೆಯ ಬಾರಿಗೆ 1994 ರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ವೆಸ್ಟ್ ಇಂಡೀಸ್‌ ಪರ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಕ್ಯಾಮರೂನ್ ಕಫಿಯನ್ನು ಕುಂಬ್ಳೆ ತಮ್ಮ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು(PC-PTI).

Loading...
Unable to load recommendations.
Follow Us