ಏಷ್ಯನ್ ಗೇಮ್ಸ್ ಫೈನಲ್; ವಿಶ್ವದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ

Updated on: Sep 22, 2026 | 2:56 PM

ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡ ಸತತ ಎರಡನೇ ಚಿನ್ನ ಗೆದ್ದಿದೆ. ಶ್ರೀಲಂಕಾ ವಿರುದ್ಧ 147 ರನ್​ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ, ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ಸ್ಮೃತಿ ಮಂಧಾನ 79 ರನ್ ಗಳಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್‌ಗಳ ವಿಶ್ವದಾಖಲೆ ಸೃಷ್ಟಿಸಿದರು. ಶಫಾಲಿ ವರ್ಮಾ ಕೂಡ ಉತ್ತಮ ಇನ್ನಿಂಗ್ಸ್ ಆಡಿದರು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ.

1 / 5
ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ಮಹಿಳಾ ತಂಡ, ಶ್ರೀಲಂಕಾ ಮಹಿಳಾ ತಂಡವನ್ನು ಬರೋಬ್ಬರಿ 147 ರನ್​ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 216 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 69 ರನ್ ಕಲೆಹಾಕಲಷ್ಟೇ ಶಕ್ತವಾಯಿತು(PC-BCCI Women x).

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ಮಹಿಳಾ ತಂಡ, ಶ್ರೀಲಂಕಾ ಮಹಿಳಾ ತಂಡವನ್ನು ಬರೋಬ್ಬರಿ 147 ರನ್​ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 216 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 69 ರನ್ ಕಲೆಹಾಕಲಷ್ಟೇ ಶಕ್ತವಾಯಿತು(PC-BCCI Women x).

2 / 5

ಟೀಂ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಚಿನ್ನದ ಪದಕದ ಪಂದ್ಯದಲ್ಲಿ 79 ರನ್​ಗಳ ಇನ್ನಿಂಗ್ಸ್ ಆಡಿದ ಸ್ಮೃತಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್‌ಗಳ ಮೈಲಿಗಲ್ಲನ್ನು ದಾಟಿದರು(PC-BCCI Women x).

3 / 5

ಈ ಮೂಲಕ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾದರು. ಈ ಪಂದ್ಯಕ್ಕೂ ಮುನ್ನ, ಈ ಅಪರೂಪದ ದಾಖಲೆಯನ್ನು ತಲುಪಲು ಸ್ಮೃತಿ ಮಂಧಾನ ಅವರಿಗೆ ಕೇವಲ 13 ರನ್‌ಗಳು ಬೇಕಾಗಿದ್ದವು. ಕೇವಲ 10 ಎಸೆತಗಳಲ್ಲಿ 13 ರನ್​ಗಳನ್ನ ಕಲೆಹಾಕುವ ಮೂಲಕ ಸ್ಮೃತಿ ಈ ಐತಿಹಾಸಿಕ ಸಾಧನೆ ಮಾಡಿದರು(PC-BCCI Women x).

4 / 5

ಈ ಪಂದ್ಯದಲ್ಲಿ, ಸ್ಮೃತಿ ಮಂಧಾನಾ 79 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳು ಮತ್ತು 7 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಸ್ಮೃತಿ ತಮ್ಮ ವೃತ್ತಿಜೀವನದಲ್ಲಿ 37 ನೇ ಟಿ20 ಅಂತರರಾಷ್ಟ್ರೀಯ ಅರ್ಧಶತಕವನ್ನು ಪೂರ್ಣಗೊಳಿಸಿದರು(PC-BCCI Women x).

5 / 5

ಈ ಪಂದ್ಯದಲ್ಲಿ ಸ್ಮೃತಿ ಜೊತೆಗೆ ಮತ್ತೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೂಡ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ್ದ ಶಫಾಲಿ ಈ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 48 ರನ್ ಕಲೆಹಾಕಿದರು. ಇದರ ಜೊತೆಗೆ ಮೊದಲ ವಿಕೆಟ್‌ಗೆ 99 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ಹಂಚಿಕೊಂಡರು(PC-BCCI Women x).

Loading...
Unable to load recommendations.
Follow Us