AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಕೊಹ್ಲಿ, ಸೂರ್ಯ, ರಾಹುಲ್ ಆಯ್ತು, ಇದೀಗ ಉಮೇಶ್ ಯಾದವ್ ಸರದಿ

Team India: ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಅದೊಂದು ದೇವಾಲಯಕ್ಕೆ ಹೋಗಿಬಂದ ಮೇಲೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೀಗ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಆಟಗಾರರು ಒಬ್ಬರ ನಂತರ ಒಬ್ಬರಂತೆ ಆ ದೇವಾಲಯಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.

ಪೃಥ್ವಿಶಂಕರ
|

Updated on:Mar 20, 2023 | 1:47 PM

Share
ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ಆಗಾಗ್ಗೆ ದೇವರ ಮೊರೆ ಹೋಗವುದು ಸರ್ವೆ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಅದೊಂದು ದೇವಾಲಯಕ್ಕೆ ಹೋಗಿಬಂದ ಮೇಲೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೀಗ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಆಟಗಾರರು ಒಬ್ಬರ ನಂತರ ಒಬ್ಬರಂತೆ ಅದೊಂದು ದೇವಾಲಯಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.

1 / 6
ವಾಸ್ತವವಾಗಿ ಈ ದೇವಾಲಯದ ಭೇಟಿ ಪರ್ವ ಆರಂಭವಾಗಿದ್ದು ವಿರಾಟ್ ಕೊಹ್ಲಿ ಅವರಿಂದ, ಆ ನಂತರ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಟೀಂ ಇಂಡಿಯಾ ಬೌಲರ್ ಉಮೇಶ್ ಯಾದವ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಉಜ್ಜಯನಿಯ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದಾರೆ.

2 / 6
ಸೋಮವಾರ ಮಹಾಕಾಳೇಶ್ವರ ಭಸ್ಮ ಆರತಿಯಲ್ಲಿ ಪಾಲ್ಗೊಂಡಿದ್ದ ಉಮೇಶ್, ದೇವರಿಗೆ ರುದ್ರಾಭಿಷೇಕ ನೆರವೇರಿಸಿದರು. ಇದೀಗ ಈ ದೇವರ ದರ್ಶನ ಪಡೆದಿರುವ ಉಮೇಶ್ ಯಾದವ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ವಾಸ್ತವವಾಗಿ, ಉಮೇಶ್​ಗೂ ಮೊದಲು, ಇಲ್ಲಿಗೆ ಭೇಟಿ ನೀಡಿದ್ದ ಮೂವರು ಟೀಂ ಇಂಡಿಯಾ ಆಟಗಾರರು ಲಯ ಕಂಡುಕೊಂಡಿದ್ದರು.

3 / 6
ಅಹಮದಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ 3 ವರ್ಷಗಳ ಶತಕದ ಬರವನ್ನು ಅಂತ್ಯಗೊಳಿಸಿದ್ದರು. ಆದರೆ ಈ ಶತಕಕ್ಕೂ ಮುನ್ನ ಕೊಹ್ಲಿ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದರು.

4 / 6
ಕೊಹ್ಲಿಗೂ ಮುನ್ನ ಸೂರ್ಯಕುಮಾರ್ ಕೂಡ ಕಳೆದ ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಸೂರ್ಯ, ಮಹಾಕಾಳೇಶ್ವರನ ಆಶೀರ್ವಾದ ಪಡೆದಿದ್ದರು. ಇದಾದ ಬಳಿಕ ಕಿವೀ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 47 ರನ್ ಬಾರಿಸಿದ್ದರು.

5 / 6
ಕಳೆದ ಫೆಬ್ರವರಿಯಲ್ಲಿ ಕೆಎಲ್ ರಾಹುಲ್ ಕೂಡ ಮಹಾಕಾಳೇಶ್ವರನ ದರ್ಶನ ಪಡೆದಿದ್ದರು. ರಾಹುಲ್ ಪತ್ನಿ ಅಥಿಯಾ ಅವರೊಂದಿಗೆ ಇಲ್ಲಿಗೆ ಬಂದಿದ್ದರು. ಇಲ್ಲಿಗೆ ಭೇಟಿ ನೀಡಿ ಫಾರ್ಮ್​ಗೆ ಮರಳಿದ್ದ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸಿದರು.

6 / 6

Published On - 1:47 pm, Mon, 20 March 23