INDW vs AUSW: 100 ವಿಕೆಟ್, 1000 ರನ್! ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ
INDW vs AUSW: ಆಸೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 30 ರನ್ಗಳ ಇನ್ನಿಂಗ್ಸ್ ಆಡಿದ ದೀಪ್ತಿ ಶರ್ಮಾ ಟಿ20ಯಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದರು. ಅಲ್ಲದೆ ದೀಪ್ತಿ ಟೀಂ ಇಂಡಿಯಾ ಪರ 100 ವಿಕೆಟ್ ಹಾಗೂ 1000 ರನ್ ಪೂರೈಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ದೀಪ್ತಿ ಪಾತ್ರರಾದರು.
1 / 6
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ವನಿತಾ ಪಡೆ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಆಸೀಸ್ ಪಡೆ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.
2 / 6
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಆಲ್ರೌಂಡರ್ ದೀಪ್ತಿ ಶರ್ಮಾ ಅತ್ಯಧಿಕ 30 ರನ್ ಕಲೆಹಾಕಿದರು.
3 / 6
ಗೆಲುವಿಗೆ 131 ರನ್ಗಳ ಸವಾಲು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇನ್ನೊಂದು ಓವರ್ ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ ಪರ 2 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ ಈ ಪಂದ್ಯದಲ್ಲಿ ಇತಿಹಾಸ ಕೂಡ ನಿರ್ಮಿಸಿದರು.
4 / 6
ಆಸೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 30 ರನ್ಗಳ ಇನ್ನಿಂಗ್ಸ್ ಆಡಿದ ದೀಪ್ತಿ ಶರ್ಮಾ ಟಿ20ಯಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದರು. ಅಲ್ಲದೆ ದೀಪ್ತಿ ಟೀಂ ಇಂಡಿಯಾ ಪರ 100 ವಿಕೆಟ್ ಹಾಗೂ 1000 ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ದೀಪ್ತಿ ಪಾತ್ರರಾದರು.
5 / 6
ಎರಡನೇ ಟಿ20 ಪಂದ್ಯಕ್ಕೂ ಮುನ್ನ ದೀಪ್ತಿ 1000 ರನ್ ಗಡಿ ದಾಟಲು 29 ರನ್ಗಳ ಅಗತ್ಯವಿತ್ತು. ದೀಪ್ತಿ 102 ಪಂದ್ಯಗಳಲ್ಲಿ 72 ಇನ್ನಿಂಗ್ಸ್ಗಳಲ್ಲಿ 971 ರನ್ ಗಳಿಸಿ ದಾಖಲೆ ಬರೆದಿದ್ದರು. ಆಸ್ಟ್ರೇಲಿಯಾ ವಿರುದ್ಧ 29ನೇ ರನ್ ಪೂರೈಸಿದ ತಕ್ಷಣ ದೀಪ್ತಿ 1000 ರನ್ ಪೂರೈಸಿದರು.
6 / 6
ಈ ಪಂದ್ಯದಲ್ಲಿ ದೀಪ್ತಿ 27 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 30 ರನ್ ಗಳಿಸಿದರು. ಅಲ್ಲದೆ ಆ ಬಳಿಕ 4 ಓವರ್ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು.
Published On - 4:47 pm, Mon, 8 January 24