- Kannada News Photo gallery Cricket photos IPL 2022: BCCI set to request franchises to play two matches at neutral venues
IPL 2022: ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ಬಿಸಿಸಿಐ
IPL 2022 Mega Auction: ಮುಂದಿನ ಸೀಸನ್ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂದರೆ ಕಳೆದ ಸೀಸನ್ನಲ್ಲಿ ಒಟ್ಟು 56 ಲೀಗ್ ಪಂದ್ಯ+ 4 ಪ್ಲೇಆಫ್ ಪಂದ್ಯಗಳು ಸೇರಿ ಒಟ್ಟು 60 ಪಂದ್ಯಗಳನ್ನು ಆಡಲಾಗಿತ್ತು. ಈ ಬಾರಿ ರೌಂಡ್ ರಾಬಿನ್ ಫಾರ್ಮಾಟ್ ಮೂಲಕ 70 ಲೀಗ್ ಪಂದ್ಯಗಳು ನಡೆಯಲಿದ್ದು, ಹಾಗೆಯೇ 4 ಪ್ಲೇಆಫ್ ಪಂದ್ಯಗಳನ್ನು ಆಡಲಿದೆ.
Updated on: Dec 06, 2021 | 4:37 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ನಲ್ಲಿ ಟೂರ್ನಿಯ ಫಾರ್ಮಾಟ್ ಬದಲಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಈ ಬಾರಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದ್ದು, ಹಳೆಯ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಒಟ್ಟು 94 ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಲು ಪ್ಲ್ಯಾನ್ ರೂಪಿಸಿದೆ ಎಂದು ತಿಳಿದು ಬಂದಿದೆ.

ಅದರಂತೆ ಮುಂದಿನ ಸೀಸನ್ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂದರೆ ಕಳೆದ ಸೀಸನ್ನಲ್ಲಿ ಒಟ್ಟು 56 ಲೀಗ್ ಪಂದ್ಯ+ 4 ಪ್ಲೇಆಫ್ ಪಂದ್ಯಗಳು ಸೇರಿ ಒಟ್ಟು 60 ಪಂದ್ಯಗಳನ್ನು ಆಡಲಾಗಿತ್ತು. ಈ ಬಾರಿ ರೌಂಡ್ ರಾಬಿನ್ ಫಾರ್ಮಾಟ್ ಮೂಲಕ 70 ಲೀಗ್ ಪಂದ್ಯಗಳು ನಡೆಯಲಿದ್ದು, ಹಾಗೆಯೇ 4 ಪ್ಲೇಆಫ್ ಪಂದ್ಯಗಳನ್ನು ಆಡಲಿದೆ.

ಅಂದರೆ ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಬಳಿಕ ತಲಾ 14 ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಗ್ರೂಪ್ A-ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಆ ಬಳಿಕ ಗ್ರೂಪ್ ಬಿ-ನಲ್ಲಿರುವ ತಂಡದ ವಿರುದ್ದ ಒಂದೊಂದು ಪಂದ್ಯವಾಡಲಿದೆ. ಇಷ್ಟೇ ಅಲ್ಲದೆ ಈ ಬಾರಿ ಹೋಮ್ ಗ್ರೌಂಡ್ ಪಂದ್ಯಗಳ ಸಂಖ್ಯೆಯನ್ನೂ ಕೂಡ ಇಳಿಸಲು ಬಿಸಿಸಿಐ ಚಿಂತಿಸಿದೆ.

10 ತಂಡಗಳು ತಮ್ಮ ಹೋಮ್ ಗ್ರೌಂಡ್ನಲ್ಲಿ ಪಂದ್ಯಗಳನ್ನಾಡುವುದರಿಂದ ಕೇವಲ 10 ರಾಜ್ಯಗಳಲ್ಲಿ ಮಾತ್ರ ಐಪಿಎಲ್ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಿ ಇತರೆ ರಾಜ್ಯಗಳ ಸ್ಟೇಡಿಯಂಗಳಲ್ಲೂ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಏಕೆಂದರೆ ಕೆಲ ರಾಜ್ಯಗಳಲ್ಲಿ ಯಾವುದೇ ರೀತಿಯ ಪ್ರಮುಖ ಟೂರ್ನಿ ನಡೆಯುತ್ತಿಲ್ಲ. ಹೀಗಾಗಿ ಪ್ರಮುಖ ಸ್ಟೇಡಿಯಂಗಳಲ್ಲಿ ಮೂಲಸೌಕರ್ಯವನ್ನು ಕಾಪಾಡಿಕೊಳ್ಳಲು, ಎರಡು ಐಪಿಎಲ್ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡುವ ಆಲೋಚನೆಯನ್ನು ಬಿಸಿಸಿಐ ಫ್ರಾಂಚೈಸಿಗಳ ಮುಂದಿಟ್ಟಿದೆ.

ಪ್ರಸ್ತುತ ಐಪಿಎಲ್ ತಂಡಗಳು ಆಡುತ್ತಿರುವ ಹೋಮ್ ಗ್ರೌಂಡ್ಗಳಲ್ಲೇ ರಾಷ್ಟ್ರೀಯ ಪಂದ್ಯಗಳೂ ಕೂಡ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ದೇಶದ ಇತರೆ ನಗರಗಳ ಸ್ಟೇಡಿಯಂಗಳಲ್ಲಿ ಪಂದ್ಯ ಆಯೋಜನೆಯಾಗುವುದು ಮೂರು-ನಾಲ್ಕು ವರ್ಷಗಳಲ್ಲಿ ಒಮ್ಮೆ ಮಾತ್ರ. ಪಂಜಾಬ್, ಜಾರ್ಖಂಡ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಅಸ್ಸಾಂ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಸ್ಟೇಡಿಯಂಗಳಿದ್ದರೂ ಪಂದ್ಯ ಆಯೋಜಿಸಲಾಗುತ್ತಿಲ್ಲ. ಈ ಕೊರತೆಯನ್ನು ದೂರ ಮಾಡಲು ತಟಸ್ಥ ಸ್ಟೇಡಿಯಂಗಳಲ್ಲಿ ಪ್ರತಿ ಐಪಿಎಲ್ ತಂಡಗಳಿಗೆ 2 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಬಿಸಿಸಿಐ ಹೊಸ ಪ್ರಸ್ತಾಪವನ್ನು ಐಪಿಎಲ್ ಫ್ರಾಂಚೈಸಿಗಳ ಮುಂದಿಟ್ಟಿದ್ದಾರೆ.

ಈ ಹಿಂದೆ ಕೂಡ ಬಿಸಿಸಿಐ ಹೀಗೆ ಕೆಲ ತಟಸ್ಥ ಸ್ಥಳಗಳಲ್ಲಿ ಪಂದ್ಯ ಆಯೋಜಿಸಲು ಅನುಮತಿ ನೀಡಿತ್ತು. ಅದರಂತೆ ಕೆಲವು ಫ್ರಾಂಚೈಸಿಗಳು ತಮ್ಮ ತವರು ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿದ್ದರು. ಉದಾಹರಣೆಗೆ, ಕೋಲ್ಕತ್ತಾ ನೈಟ್ ರೈಡರ್ಸ್ ಒಡಿಶಾದಲ್ಲಿ ಆಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ರಾಂಚಿಯಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ರಾಯ್‌ಪುರದಲ್ಲಿ ಮತ್ತು ಪಂಜಾಬ್ ಕಿಂಗ್ಸ್ ಧರ್ಮಶಾಲಾ ಮತ್ತು ಇಂದೋರ್‌ನಲ್ಲಿ ಆಡಿದ್ದರು. ಇದೀಗ ಇದೇ ಮಾದರಿಯನ್ನು ಜಾರಿಗೆ ತಂದು ಎಲ್ಲಾ ಫ್ರಾಂಚೈಸಿಗಳು 2 ತಟಸ್ಥ ಪಂದ್ಯಗಳನ್ನು ಆಡುವಂತೆ ಮನವೊಲಿಸಲು ಮುಂದಾಗಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಹೋಮ್ ಅ್ಯಂಡ್ ಅವೇ ಪಂದ್ಯಗಳ ಜೊತೆಗೆ ನ್ಯೂಟ್ರಲ್ ಸ್ಟೇಡಿಯಂ ಪಂದ್ಯಗಳೂ ಕೂಡ ನಡೆಯುವ ಸಾಧ್ಯತೆಯಿದೆ.
