- Kannada News Photo gallery Cricket photos IPL 2022 Venue: IPL stays in India, Maharashtra to host league matches
IPL 2022: ಐಪಿಎಲ್ ಸೀಸನ್ 15 ಭಾರತದಲ್ಲೇ, ಆದರೆ 2 ನಗರಗಳಲ್ಲಿ ಎಂಬುದೇ ವಿಶೇಷ..!
IPL 2022 Mega Auction: ಕೊರೋನಾಂತಕದ ನಡುವೆಯೂ ಭಾರತದಲ್ಲೇ ಟೂರ್ನಿ ನಡೆಸಲು BCCI ನಿರ್ಧರಿಸಿದ್ದು, ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಜೊತೆ ಕೂಡ ಮಾತುಕತೆಯನ್ನು ನಡೆಸಲಾಗಿದೆ.
Updated on: Jan 30, 2022 | 4:37 PM

ಐಪಿಎಲ್ ಸೀಸನ್ 15 ಮೆಗಾ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಬಿಡ್ಡಿಂಗ್ಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ಐಪಿಎಲ್ ಆಯೋಜನೆಗೆ ಬೇಕಾದ ಪ್ಲ್ಯಾನ್ಗಳನ್ನು ರೆಡಿ ಮಾಡಿದೆ. ಅದರಂತೆ ಮುಂಬರುವ ಐಪಿಎಲ್ ಎರಡು ನಗರಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಕೊರೋನಾಂತಕದ ನಡುವೆಯೂ ಭಾರತದಲ್ಲೇ ಟೂರ್ನಿ ನಡೆಸಲು BCCI ನಿರ್ಧರಿಸಿದ್ದು, ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಜೊತೆ ಕೂಡ ಮಾತುಕತೆಯನ್ನು ನಡೆಸಲಾಗಿದೆ. ಅದರಂತೆ ಐಪಿಎಲ್ 2022 ಲೀಗ್ ಪಂದ್ಯಗಳನ್ನು ಮುಂಬೈನಲ್ಲಿ ಮೂರು ಸ್ಥಳಗಳಲ್ಲಿ ನಡೆಸಲಾಗುತ್ತದೆ. ಹಾಗೆಯೇ ಪ್ಲೇಆಫ್‌ಗಳನ್ನು ಅಹಮದಾಬಾದ್ನಲ್ಲಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿದೆ.

TOI ವರದಿಯ ಪ್ರಕಾರ, ಮುಂಬೈನ ಮೂರು ಕ್ರೀಡಾಂಗಣಗಳಾದ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಮ್ಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿದೆ. ಹಾಗೆಯೇ ಪ್ಲೇಆಫ್ ಪಂದ್ಯಗಳನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆದ ಅಹಮದಾಬಾದ್‌ಗೆ ಸ್ಥಳಾಂತರಿಸಲಿದೆ.

ಇಡೀ ಲೀಗ್ ಪಂದ್ಯಗಳನ್ನು ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಆಯೋಜಿಸಿ, ಲೀಗ್ ಹಂತದ ಸಮಯದಲ್ಲಿ ಆಟಗಾರರ ಪ್ರಯಾಣವನ್ನು ತಪ್ಪಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಬಯೋ ಬಬಲ್ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು. ಈಗಾಗಲೇ ಮೂರು ಸ್ಟೇಡಿಯಂಗಳಲ್ಲಿ ಟೂರ್ನಿ ನಡೆಸುವ ಫ್ರಾಂಚೈಸಿಗಳ ಜೊತೆ ಕೂಡ ಚರ್ಚೆ ನಡೆಸಿದ್ದು, ತಂಡಗಳ ಮಾಲೀಕರಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಹೀಗಾಗಿ ಮಾರ್ಚ್ 27 ರಿಂದ ಮುಂಬೈನಲ್ಲಿ ಐಪಿಎಲ್ ಸೀಸನ್ 15 ಗೆ ಚಾಲನೆ ಸಿಗಲಿದ್ದು, ಅದರಂತೆ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಮ್ಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿದೆ. ಹಾಗೆಯೇ ಪ್ಲೇಆಫ್ ಪಂದ್ಯಗಳು ಅಹಮದಾಬಾದ್ನಲ್ಲಿ ನಡೆಸಲಾಗುತ್ತದೆ.



















