IPL 2023: 6 ರನ್ಗಳನ್ನು ನೀಡಿ..ಎಲ್ಲಾ ವಿವಾದ ಕೊನೆಗೊಳ್ಳುತ್ತೆ ಎಂದ ಬೆನ್ ಸ್ಟೋಕ್ಸ್
IPL 2023 Kannada: ರವಿ ಬಿಷ್ಣೋಯ್ ಕ್ರೀಸ್ ಅನ್ನು ಬೇಗನೆ ಬಿಡುತ್ತಿದ್ದಾರೆ. ಇದಾಗ್ಯೂ ನಾನ್ ಸ್ಟ್ರೈಕ್ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಸಹ ಇದ್ದಾರೆಯೇ?
Updated on: Apr 12, 2023 | 3:30 PM

IPL 2023: ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೊನೆಯ ಎಸೆತದಲ್ಲಿ ಜಯ ಸಾಧಿಸಿತ್ತು. ಆದರೆ ಈ ಪಂದ್ಯವನ್ನು ಟೈ ಮಾಡಿಕೊಳ್ಳುವ ಉತ್ತಮ ಅವಕಾಶ ಆರ್ಸಿಬಿ ಮುಂದಿತ್ತು. ಆದರೆ ನಾನ್ ಸ್ಟ್ರೈಕ್ನಲ್ಲಿ ರವಿ ಬಿಷ್ಣೋಯ್ ಅವರನ್ನು ರನೌಟ್ ಮಾಡುವಲ್ಲಿ ಹರ್ಷಲ್ ಪಟೇಲ್ ವಿಫಲರಾಗಿದ್ದರು.

ಒಂದು ವೇಳೆ ರವಿ ಬಿಷ್ಣೋಯ್ ಕೊನೆಯ ಎಸೆತದ ವೇಳೆ ರನೌಟ್ ಆಗಿದ್ದರೆ ಪಂದ್ಯವು ಸೂಪರ್ ಓವರ್ನತ್ತ ಸಾಗುತ್ತಿತ್ತು. ಆದರೆ ಹೀಗೆ ಸಿಕ್ಕ ಅವಕಾಶದಲ್ಲಿ ಆರ್ಸಿಬಿ ವೇಗಿ ಸಂಪೂರ್ಣವಾಗಿ ವಿಫಲರಾಗಿದ್ದರು. ಇದಾಗ್ಯೂ ನಿರ್ಣಾಯಕ ಹಂತದಲ್ಲಿ ಹರ್ಷಲ್ ಪಟೇಲ್ ಅವರು ಮಂಕಡ್ ರನೌಟ್ಗೆ ಮುಂದಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಈ ಚರ್ಚೆಗಳ ನಡುವೆ ಖ್ಯಾತ ಕಮೆಂಟೇಟರ್ ಹರ್ಷ ಬೋಗ್ಲೆ ಮಾಡಿರುವ ಟ್ವೀಟ್ ಕೂಡ ವೈರಲ್ ಆಗಿದೆ. ರವಿ ಬಿಷ್ಣೋಯ್ ಕ್ರೀಸ್ ಅನ್ನು ಬೇಗನೆ ಬಿಡುತ್ತಿದ್ದಾರೆ. ಇದಾಗ್ಯೂ ನಾನ್ ಸ್ಟ್ರೈಕ್ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಸಹ ಇದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್ ಸಿಎಸ್ಕೆ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ.

ಹರ್ಷ ಬೋಗ್ಲೆ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಬೆನ್ ಸ್ಟೋಕ್ಸ್, ಇದು ಅಂಪೈರ್ಗಳ ನಿರ್ಧಾರಕ್ಕೆ ಬಿಟ್ಟಂತಹ ವಿಷಯ. ಆದರೆ ನಾನ್ ಸ್ಟ್ರೈಕರ್ ಬೇಗನೆ ಕ್ರೀಸ್ ಬಿಟ್ಟು ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸಿದಾಗ 6 ರನ್ಗಳ ಪೆನಾಲ್ಟಿ ನೀಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಈ ಸಮಸ್ಯೆಗೆ ಪರಿಹಾರ ಕಾಣಬಹುದು ಎಂಬುದು ಬೆನ್ ಸ್ಟೋಕ್ಸ್ ಇಂಗಿತ.

ಅಂದರೆ ಬೌಲರ್ ಚೆಂಡೆಸೆಯುವ ಮುನ್ನವೇ ನಾನ್ ಸ್ಟ್ರೈಕರ್ ಕ್ರೀಸ್ ಬಿಟ್ಟರೆ, ಎದುರಾಳಿ ತಂಡಕ್ಕೆ 5 ರನ್ ನೀಡಬೇಕು. ಅಥವಾ ಬ್ಯಾಟಿಂಗ್ ತಂಡದ 5 ರನ್ ಕಡಿತಗೊಳಿಸಬೇಕು. ಇದರಿಂದ ಮಂಕಡ್ ರನೌಟ್ಗೆ ಅವಕಾಶವೇ ನಿರ್ಮಾಣವಾಗುವುದಿಲ್ಲ. ಅಷ್ಟೇ ಅಲ್ಲದೆ ಇದರಿಂದ ನಾನ್ ಸ್ಟ್ರೈಕರ್ ಬೇಗನೆ ಓಡುವುದು ಕೂಡ ತಪ್ಪುತ್ತದೆ. ಹಾಗೆಯೇ ವಿವಾದ ಕೂಡ ಇರುವುದಿಲ್ಲ ಎಂದು ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಬೆನ್ ಸ್ಟೋಕ್ಸ್ ನೀಡಿರುವ ಈ ಅತ್ಯುತ್ತಮ ಸಲಹೆ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಸಲಹೆಯನ್ನು ಮುಂದೆ ಕ್ರಿಕೆಟ್ ನಿಯಮಗಳಲ್ಲಿ ಅಳವಡಿಸಿದರೆ ಮಂಕಡ್ ರನೌಟ್ ವಿವಾದವೇ ದೂರವಾಗಲಿದೆ ಎಂದು ಅನೇಕರು ಅಭಿಮತ ವ್ಯಕ್ತಪಡಿಸಿದ್ದಾರೆ.



















