AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Final CSK vs GT: ಫೈನಲ್ ಪಂದ್ಯ ಮುಂದೂಡಿಕೆ: ರೈಲ್ವೇ ಸ್ಟೇಷನ್​ನಲ್ಲೇ ಮಲಗಿದ CSK ಫ್ಯಾನ್ಸ್​

IPL 2023 Final CSK vs GT: ಒಂದು ದಿನದ ಪ್ಲ್ಯಾನ್​ನೊಂದಿಗೆ ಐಪಿಎಲ್ ಫೈನಲ್ ಅನ್ನು ವೀಕ್ಷಿಸಲು ತೆರಳಿದ ಅಭಿಮಾನಿಗಳು ಪಂದ್ಯದ ಮುಂದೂಡಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

TV9 Web
| Edited By: |

Updated on: May 29, 2023 | 5:23 PM

Share
IPL 2023 Final CSK vs GT: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ GT vs CSK ನಡುವಣ ಫೈನಲ್ ಪಂದ್ಯವನ್ನು ಮಳೆ ಹಿನ್ನಲೆಯಲ್ಲಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ ಭಾನುವಾರವೇ ಅಂತಿಮ ಹಣಾಹಣಿಯನ್ನು ಆನಂದಿಸುವ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭಿಮಾನಿಗಳು ಪಂದ್ಯದ ಮುಂದೂಡಿಕೆಯಿಂದ ಸಂಕಷ್ಟಕ್ಕೆ ಸಿಲುಕಿದರು.

1 / 6
ಗುಜರಾತ್ ಟೈಟಾನ್ಸ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಬೆಂಬಲಿಸಲು ಅಹಮದಾಬಾದ್​ಗೆ ತೆರಳಿದ್ದ ತಮಿಳುನಾಡಿನ ಅಭಿಮಾನಿಗಳು ಪಂದ್ಯ ಮುಂದೂಡಿಕೆಯಿಂದ ಅಲ್ಲೇ ಉಳಿಯಬೇಕಾಯಿತು. ಅಲ್ಲದೆ ಯಾವುದೇ ಲಾಡ್ಜ್​ಗಳಲ್ಲಿ ಉಳಿದುಕೊಳ್ಳುವಂತಹ ಪರಿಸ್ಥಿತಿಯಲ್ಲಿರದ ಕೆಲ ಸಿಎಸ್​ಕೆ ಅಭಿಮಾನಿಗಳು ರೈಲ್ವೇ ಸ್ಟೇಷನ್​ನಲ್ಲೇ ಮಲಗಿದರು.

2 / 6
ಇದೀಗ ರೈಲ್ವೇ ಪ್ಲಾಟ್​ಫಾರ್ಮ್​ಗಳಲ್ಲಿ ಮಲಗಿರುವ ಸಿಎಸ್​ಕೆ ತಂಡದ ಅಭಿಮಾನಿಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಇದು ಸಿಎಸ್​ಕೆ ಅಭಿಮಾನಿಗಳಿಗೆ ತಂಡದ ಮೇಲಿರುವ ಉತ್ಸಾಹವನ್ನು ತೋರಿಸುತ್ತದೆ. ಹಾಗೆಯೇ ಎಂಎಸ್ ಧೋನಿ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅನೇಕರು ಪ್ರಶಂಶಿಸಿದ್ದಾರೆ.

3 / 6
ಒಟ್ಟಿನಲ್ಲಿ ಒಂದು ದಿನದ ಪ್ಲ್ಯಾನ್​ನೊಂದಿಗೆ ಐಪಿಎಲ್​ ಫೈನಲ್ ಪಂದ್ಯವನ್ನು ವೀಕ್ಷಿಸಲು ತೆರಳಿದ ಅಭಿಮಾನಿಗಳು ಪಂದ್ಯದ ಮುಂದೂಡಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವುದಂತು ನಿಜ. ಈ ಸಂಕಷ್ಟ ಮರೆಯಬೇಕಿದ್ದರೆ ಅವರ ನೆಚ್ಚಿನ ತಂಡ ಗೆಲ್ಲಲೇಬೇಕು. ಅಂತಹದೊಂದು ನಿರೀಕ್ಷೆಯಲ್ಲಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್​​.

4 / 6
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾಣ, ಮಿಚೆಲ್ ಸ್ಯಾಂಟರ್, ಶೇಕ್ ರಶೀದ್, ಆಕಾಶ್ ಸಿಂಗ್, ಸಿಸಂದಾ ಮಗಲಾ, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.

5 / 6
ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ (ನಾಯಕ) , ಶುಭ್​ಮನ್ ಗಿಲ್ , ದಸುನ್ ಶಾನಕ , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಮೋಹಿತ್ ಶರ್ಮಾ , ನೂರ್ ಅಹ್ಮದ್ , ಮೊಹಮ್ಮದ್ ಶಮಿ , ಯಶ್ ದಯಾಳ್ , ವಿಜಯ್ ಶಂಕರ್ , ಶಿವಂ ಭರತ್ , ಶಿವಂ ಭರತ್ ಕಿಶೋರ್ , ಅಭಿನವ್ ಮನೋಹರ್ , ಓಡಿಯನ್ ಸ್ಮಿತ್ , ಅಲ್ಜಾರಿ ಜೋಸೆಫ್ , ಮ್ಯಾಥ್ಯೂ ವೇಡ್ , ಜೋಶುವಾ ಲಿಟಲ್ ,ದರ್ಶನ್ ನಲ್ಕಂಡೆ , ಉರ್ವಿಲ್ ಪಟೇಲ್ , ಸಾಯಿ ಸುದರ್ಶನ್ , ಜಯಂತ್ ಯಾದವ್ , ಪ್ರದೀಪ್ ಸಾಂಗ್ವಾನ್.

6 / 6