AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Final: ಎಷ್ಟು ಗಂಟೆಗೆ ಪಂದ್ಯ ಶುರುವಾದರೆ, ಎಷ್ಟು ಓವರ್​ಗಳ ಆಟ ನಡೆಯಲಿದೆ? ಇಲ್ಲಿದೆ ಮಾಹಿತಿ

IPL 2023 Final CSK Vs GT: 7.30 ಕ್ಕೆ ಶುರುವಾಗಬೇಕಿರುವ ಪಂದ್ಯವು ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಅಂದರೆ 2 ತಂಡಗಳು 20 ಓವರ್​ಗಳನ್ನು ಆಡಲಿದೆ.

TV9 Web
| Edited By: |

Updated on: May 29, 2023 | 4:34 PM

Share
IPL 2023 Final CSK Vs GT: ಅಹಮದಾಬಾದ್​ನ ನರೇಂದ್ರ ಸ್ಟೇಡಿಯಂ ನಡೆಯಲಿರುವ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ ನಡೆಯಬೇಕಿದ್ದ ಈ ಪಂದ್ಯವವನ್ನು ಮಳೆಯ ಹಿನ್ನಲೆಯಲ್ಲಿ ಸೋಮವಾರಕ್ಕೆ ಮುಂದೂಡಲಾಗಿದೆ.

1 / 11
ಆದರೆ ಇದೀಗ ಸೋಮವಾರ ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಬಿಬಿಸಿ ಹವಾಮಾನ ವರದಿ ಪ್ರಕಾರ, ಸಂಜೆ 6.30 ರಿಂದ ಅಹಮದಾಬಾದ್​ನತ್ತ ಸುತ್ತ ಮುತ್ತ ಮಳೆಯಾಗಲಿದೆ. ಈ ತುಂತುರು ಮಳೆಯು ರಾತ್ರಿ 10.30 ರವರೆಗೆ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

2 / 11
ಇತ್ತ ಮೀಸಲು ದಿನದಂದು ಕೂಡ ಮಳೆಯಾದರೆ ಓವರ್​ಗಳ ಕಡಿತದೊಂದಿಗೆ ಪಂದ್ಯ ಆಯೋಜಿಸುವುದು ಖಚಿತ. ಏಕೆಂದರೆ ನಿಗದಿತ ಸಮಯದೊಳಗೆ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ 1 ಗಂಟೆಯನ್ನು ಬಳಸಲಾಗುತ್ತದೆ.

3 / 11
7.30 ಕ್ಕೆ ಶುರುವಾಗಬೇಕಿರುವ ಪಂದ್ಯವು ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಅಂದರೆ 2 ತಂಡಗಳು 20 ಓವರ್​ಗಳನ್ನು ಆಡಲಿದೆ. ಒಂದು ವೇಳೆ 9.40 ರ ಬಳಿಕ ಪಂದ್ಯ ಆರಂಭವಾದರೆ ಓವರ್​ಗಳನ್ನು ಕಡಿತ ಮಾಡಲಾಗುತ್ತದೆ.

4 / 11
ಇಲ್ಲಿ 9.45 ಕ್ಕೆ ಪಂದ್ಯವನ್ನು ಆರಂಭಿಸಿದರೆ 1 ಓವರ್ ಅನ್ನು ಕಡಿತ ಮಾಡಲಾಗುತ್ತದೆ. ಅಂದರೆ ತಲಾ 19 ಓವರ್​ಗಳ ಪಂದ್ಯ ನಡೆಯಲಿದೆ. ಇನ್ನು ಉಭಯ ತಂಡಗಳಿಗೂ ಟೈಮ್ ಔಟ್ ಕೂಡ ಇರಲಿದೆ.

5 / 11
ಇನ್ನು 10 ಗಂಟೆಗೆ ಪಂದ್ಯ ಆರಂಭವಾದರೆ ತಲಾ 17 ಓವರ್​ಗಳ ಪಂದ್ಯ ನಡೆಯಲಿದೆ. ಹಾಗೆಯೇ 10.15 ಕ್ಕೆ ಅಥವಾ 10.30 ಕ್ಕೆ ಪಂದ್ಯ ಶುರುವಾದರೆ ಉಭಯ ತಂಡಗಳ ಇನಿಂಗ್ಸ್​ 15 ಓವರ್​ಗಳಿಗೆ ಸೀಮಿತವಾಗಿರಲಿದೆ.

6 / 11
ಹಾಗೆಯೇ 10.45 ಕ್ಕೆ ಪಂದ್ಯ ಆರಂಭವಾದರೆ ಓವರ್​ಗಳ ಸಂಖ್ಯೆಯನ್ನು 14 ಕ್ಕೆ ಇಳಿಸಲಾಗುತ್ತದೆ. ಅದಂತೆ ಉಭಯ ತಂಡಗಳು ತಲಾ 14 ಓವರ್​ ಓವರ್​ಗಳ ಇನಿಂಗ್ಸ್ ಆಡಲಿದೆ. ಇನ್ನು 11 ಗಂಟೆಗೆ ಪಂದ್ಯ ಆರಂಭವಾದರೆ ತಲಾ 12 ಓವರ್​ಗಳ ಪಂದ್ಯ ನಡೆಯಲಿದೆ.

7 / 11
ಒಂದು ವೇಳೆ 11.15 ಕ್ಕೆ ಪಂದ್ಯ ಶುರುವಾದರೆ 10 ಓವರ್​ಗಳ ಇನಿಂಗ್ಸ್​ಗಳನ್ನು ಆಡಲಾಗುತ್ತದೆ. ಹಾಗೆಯೇ 11.30 ಕ್ಕೆ ಪಂದ್ಯ ಆರಂಭವಾಗುವುದಾದರೆ ಓವರ್ ಸಂಖ್ಯೆ 9 ಕ್ಕೆ ಇಳಿಯಲಿದೆ. 11.45 ರಿಂದ ಪಂದ್ಯ ಶುರುವಾಗುವುದಾದರೆ ತಲಾ 7 ಓವರ್​ಗಳ ಇನಿಂಗ್ಸ್ ನಡೆಯಲಿದೆ.

8 / 11
ಇನ್ನು 11.56 ರೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 12.06 ರಿಂದ ಶುರುವಾಗಲಿದೆ.

9 / 11
ಒಂದು ವೇಳೆ ರಾತ್ರಿ 12.06 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಕೂಡ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಇಲ್ಲಿ ಸೂಪರ್ ಓವರ್ ನಡೆಸಲು ಪಿಚ್ ಸಿದ್ಧವಿದೆಯಾ ಎಂಬುದನ್ನು ಮುಖ್ಯವಾಗಿ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ.

10 / 11
ಈ ಬಗ್ಗೆ ಉಭಯ ತಂಡಗಳ ನಾಯಕರುಗಳೊಂದಿಗೆ ಚರ್ಚಿಸಿದ ಬಳಿಕ ಅಂಪೈರ್ ಸೂಪರ್ ಓವರ್​ ನಡೆಸಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಸೂಪರ್ ಓವರ್ ನಡೆಸಲು ಕೂಡ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಲಿದೆ.

11 / 11
Follow Us
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!

ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!

ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!

ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ

ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ

ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?

ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !

ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!

1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!