- Kannada News Photo gallery Cricket photos Kannada News | IPL 2023 Final Rashid Khan 1 Wicket Away From Creating History Breaking All Time IPL Record
IPL 2023 Final: ಇನ್ನೊಂದೆ ಹೆಜ್ಜೆ ಬಾಕಿ; ಚಹಲ್ ದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್..!
IPL 2023 Final: ಗುಜರಾತ್ ಪರ ಆಲ್ರೌಂಡರ್ ಪ್ರದರ್ಶನ ನೀಡಿರುವ ರಶೀದ್ ಖಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಅಲ್ಲದೆ ಈ ಸೀಸನ್‌ನಲ್ಲಿ 27 ವಿಕೆಟ್ ಉರುಳಿಸಿರುವ ರಶೀದ್ ಪರ್ಪಲ್ ಕ್ಯಾಪ್ ರೇಸ್ನಲ್ಲೂ ಇದ್ದಾರೆ.
Updated on:May 28, 2023 | 4:18 PM

ಗುಜರಾತ್ ಪರ ಆಲ್ರೌಂಡರ್ ಪ್ರದರ್ಶನ ನೀಡಿರುವ ರಶೀದ್ ಖಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಅಲ್ಲದೆ ಈ ಸೀಸನ್‌ನಲ್ಲಿ 27 ವಿಕೆಟ್ ಉರುಳಿಸಿರುವ ರಶೀದ್ ಪರ್ಪಲ್ ಕ್ಯಾಪ್ ರೇಸ್ನಲ್ಲೂ ಇದ್ದಾರೆ. ಇದರೊಂದಿಗೆ ಈ ಫೈನಲ್ ಪಂದ್ಯದಲ್ಲಿ ಇನ್ನೊಂದು ವಿಕೆಟ್ ಉರುಳಿಸಿದರೆ ರಶೀದ್ ಐಪಿಎಲ್ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಲಿದ್ದಾರೆ.

ಈ ಸೀಸನ್‌ನಲ್ಲಿ 27 ವಿಕೆಟ್ ಉರುಳಿಸಿರುವ ರಶೀದ್ ಐಪಿಎಲ್ ಸೀಸನ್‌ನಲ್ಲಿ ಸ್ಪಿನ್ನರ್ ಒಬ್ಬ ಪಡೆದ ಅತಿ ಹೆಚ್ಚು ವಿಕೆಟ್ಗಳ ವಿಚಾರದಲ್ಲಿ ಇದೀಗ ಯುಜ್ವೇಂದ್ರ ಚಾಹಲ್ ನಿರ್ಮಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಚಾಹಲ್ ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು.

ಇದೀಗ 2023 ರ ಐಪಿಎಲ್ ಆವೃತ್ತಿಯಲ್ಲಿ ರಶೀದ್ ಮತ್ತೊಬ್ಬ ಬ್ಯಾಟರ್ ಅನ್ನು ವಜಾ ಮಾಡಿದರೆ ತಮ್ಮ ಹೆಸರಿನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದುಕೊಳ್ಳಲಿದ್ದಾರೆ. ಇನ್ನು ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಸ್ಪಿನ್ನರ್ಗಳು ಯಾರ್ಯಾರು ಎಂಬುದನ್ನು ನೋಡುವುದಾದರೆ..

27 - ಯುಜ್ವೇಂದ್ರ ಚಹಾಲ್ (ರಾಜಸ್ಥಾನ್ ರಾಯಲ್ಸ್), ಐಪಿಎಲ್ 2022

27* - ರಶೀದ್ ಖಾನ್ (ಗುಜರಾತ್ ಟೈಟಾನ್ಸ್), ಐಪಿಎಲ್ 2023

26 - ಇಮ್ರಾನ್ ತಾಹಿರ್ (ಚೆನ್ನೈ ಸೂಪರ್ ಕಿಂಗ್ಸ್), ಐಪಿಎಲ್ 2019

26 - ವನಿಂದು ಹಸರಂಗ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಐಪಿಎಲ್ 2022

24 - ಸುನಿಲ್ ನರೈನ್ (ಕೋಲ್ಕತ್ತಾ ನೈಟ್ ರೈಡರ್ಸ್, ಐಪಿಎಲ್ 2012

24 - ಹರ್ಭಜನ್ ಸಿಂಗ್ (ಮುಂಬೈ ಇಂಡಿಯನ್ಸ್), ಐಪಿಎಲ್ 2013
Published On - 3:58 pm, Sun, 28 May 23




