- Kannada News Photo gallery Cricket photos IPL 2023 From sam curran to kl rahul these 4 players top 4 earners in ipl 2023
IPL 2023: ಕೊಹ್ಲಿ, ರೋಹಿತ್, ಧೋನಿ ಅಲ್ಲ; ಈ ಆವೃತ್ತಿಯ ಅತ್ಯಂತ ದುಬಾರಿ ಆಟಗಾರರು ಯಾರು ಗೊತ್ತಾ?
IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್‌ಎಸ್ ಧೋನಿ 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
Updated on: Mar 25, 2023 | 11:20 AM

16ನೇ ಆವೃತ್ತಿಯ ಐಪಿಎಲ್ನ ಅತ್ಯಂತ ದುಬಾರಿ ಆಟಗಾರನೆಂದರೆ ಅದು ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್. ಇವರನ್ನು ಪಂಜಾಬ್ ಕಿಂಗ್ಸ್ ತಂಡ ಮಿನಿ ಹರಾಜಿನಲ್ಲಿ ರೂ. 18.5 ಕೋಟಿ ನೀಡಿ ಖರೀದಿಸಿತು. ಅಲ್ಲದೆ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನೂ ಇವರೇ ಆಗಿದ್ದಾರೆ.

ಸ್ಯಾಮ್ ಕರನ್ ಬಳಿಕ ಅತ್ಯಂತ ದುಬಾರಿ ಆಟಗಾರನಂದರೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್. ಈ ಆಲ್ರೌಂಡರ್ ಆಟಗಾರನನ್ನು ಮುಂಬೈ ಇಂಡಿಯನ್ಸ್ ತಂಡ 17.5 ಕೋಟಿಗೆ ಖರೀದಿಸಿತು.

ಇನ್ನು 3ನೇ ಸ್ಥಾನದಲ್ಲಿ ಕನ್ನಡಿಗ ರಾಹುಲ್ ಇದ್ದು, ಇವರಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ 17 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದೆ.

4ನೇ ಸ್ಥಾನದಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ, ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇದ್ದು, ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ರೂ. 16.5 ಕೋಟಿ ನೀಡುತ್ತಿದೆ.

ಇನ್ನು 5ನೇ ಸ್ಥಾನದಲ್ಲಿ 16 ಕೋಟಿ ರೂ. ಪಡೆಯುತ್ತಿರುವ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ರಿಷಬ್ ಪಂತ್ (ಐಪಿಎಲ್ 2023 ಆಡುತ್ತಿಲ್ಲ), ನಿಕೋಲಸ್ ಪೂರನ್ ಇದ್ದಾರೆ.

6ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಆಟಗಾರ ಇಶಾನ್ ಕಿಶನ್ ರೂ. 15.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಎಂಎಸ್‌ಎಸ್ ಧೋನಿ 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.




