- Kannada News Photo gallery Cricket photos IPL 2023 Jadeja completes 200 T20 wickets vs rajasthan royals
IPL 2023: ರಾಜಸ್ಥಾನ್ ವಿರುದ್ಧ ಸೋತರೂ ಹೀಗೊಂದು ದಾಖಲೆ ಬರೆದ ಜಡೇಜಾ..!
Ravindra Jadeja: ಇದೀಗ 200 ಟಿ20 ವಿಕೆಟ್ ಪೂರೈಸಿರುವ ಜಡೇಜಾ ಮತ್ತೊಂದೆಡೆ, ಟಿ20 ಕ್ರಿಕೆಟ್‌ನಲ್ಲಿ 3198 ರನ್ ಕೂಡ ಬಾರಿಸಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ 457 ರನ್‌ಗಳು ಸೇರಿವೆ.
Updated on:Apr 13, 2023 | 4:10 PM

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದು ಅಜೇಯ 25 ರನ್ ಗಳಿಸಿದ ಜಡೇಜಾ ಟಿ20 ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರೈಸಿದ ದಾಖಲೆ ಬರೆದಿದ್ದಾರೆ.

ರಾಜಸ್ಥಾನದ ಬ್ಯಾಟಿಂಗ್ ವೇಳೆ 9ನೇ ಓವರ್ ಬೌಲ್ ಮಾಡಿದ ಜಡೇಜಾ ಮೂರನೇ ಎಸೆತದಲ್ಲಿ ದೇವದತ್ ಪಡಿಕ್ಕಲ್ ಮತ್ತು 5ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದರು.

ಇದೀಗ 200 ಟಿ20 ವಿಕೆಟ್ ಪೂರೈಸಿರುವ ಜಡೇಜಾ ಮತ್ತೊಂದೆಡೆ, ಟಿ20 ಕ್ರಿಕೆಟ್‌ನಲ್ಲಿ 3198 ರನ್ ಕೂಡ ಬಾರಿಸಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ 457 ರನ್‌ಗಳು ಸೇರಿವೆ.

ಅಲ್ಲದೆ ಐಪಿಎಲ್‌ನಲ್ಲಿ 2000 ರನ್ ಗಳಿಸಿದ ಮತ್ತು ಟಿ20 ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ.

ಹಾಗೆಯೇ ಜಡೇಜಾ ಟಿ20 ಮಾದರಿಯಲ್ಲಿ 200 ವಿಕೆಟ್ ಪಡೆದ 9 ನೇ ಭಾರತೀಯರಾಗಿದ್ದಾರೆ. ಐಪಿಎಲ್‌ನಲ್ಲಿ 2531 ರನ್‌ಗಳನ್ನು ಹೊರತುಪಡಿಸಿ, ಜಡೇಜಾ ಐಪಿಎಲ್‌ನಲ್ಲಿ 138 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ 2 ಅರ್ಧಶತಕಗಳನ್ನು ಬಾರಿಸಿರುವ ಜಡೇಜಾ ಅವರ ಅತ್ಯುತ್ತಮ ಸ್ಕೋರ್ 62 ಆಗಿದೆ.

ಇನ್ನು ಟಿ20 ಮಾದರಿಯಲ್ಲಿ 296 ಪಂದ್ಯಗಳನ್ನಾಡಿರುವ ಜಡೇಜಾ, 25.58 ಸರಾಸರಿ ಮತ್ತು 128.48 ಸ್ಟ್ರೈಕ್ ರೇಟ್‌ನಲ್ಲಿ 3198 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 2 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 7.54 ರ ಎಕಾನಮಿಯಲ್ಲಿ 200 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
Published On - 4:10 pm, Thu, 13 April 23




