- Kannada News Photo gallery Cricket photos IPL 2023: Kedar Jadhav Recalls Phone Call With RCB Coach Sanjay Bangar
IPL 2023: RCB ತಂಡಕ್ಕೆ ಆಯ್ಕೆಯಾದ ಪ್ರಸಂಗ ವಿವರಿಸಿದ ಕೇದಾರ್ ಜಾಧವ್
IPL 2023 Kannada: ಐಪಿಎಲ್ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು.
Updated on: May 04, 2023 | 9:23 PM

IPL 2023: ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗಕ್ಕೆ ಕೇದಾರ್ ಜಾಧವ್ ಅವರದ್ದು ಅನಿರೀಕ್ಷಿತ ಎಂಟ್ರಿ. ಏಕೆಂದರೆ ಐಪಿಎಲ್ 2022 ರಲ್ಲಿ ಹಾಗೂ 2023 ರಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಆಟಗಾರನನ್ನು ಆರ್ಸಿಬಿ ಬದಲಿ ಆಟಗಾರನಾಗಿ ದಿಢೀರ್ ಆಯ್ಕೆ ಮಾಡಿದ್ದರು.

ಆರ್ಸಿಬಿ ಪರ ಆಡುತ್ತಿದ್ದ ಡೇವಿಡ್ ವಿಲ್ಲಿ ಗಾಯಗೊಂಡ ಪರಿಣಾಮ ಐಪಿಎಲ್ನಿಂದ ಹೊರಗುಳಿದಿದ್ದರು. ಇವರ ಸ್ಥಾನದಲ್ಲಿ ಜಾಧವ್ಗೆ ಅವಕಾಶ ನೀಡಲಾಗಿದೆ. ಇಲ್ಲಿ ವಿಶೇಷ ಎಂದರೆ ಕೇದಾರ್ ಜಾಧವ್ ಆರ್ಸಿಬಿ ತಂಡಕ್ಕೆ ಆಯ್ಕೆಯಾಗುವ ಮುನ್ನ ಜಿಯೋ ಸಿನಿಮಾದಲ್ಲಿ ಮರಾಠಿ ಕಾಮೆಂಟೇಟರ್ ಆಗಿದ್ದರು.

ಅಂದರೆ ಐಪಿಎಲ್ನಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಕೇದಾರ್ ಜಾಧವ್ ಅವರ ಇದೀಗ ಆರ್ಸಿಬಿ ಬಳಗವನ್ನು ಸೇರಿಕೊಂಡಿರುವುದು ಅಚ್ಚರಿ. ಇಂತಹ ಅಚ್ಚರಿಗೆ ಕಾರಣವಾದ ಸನ್ನಿವೇಶವನ್ನು ಖುದ್ದು ಜಾಧವ್ ಕೂಡ ಬಹಿರಂಗಪಡಿಸಿದ್ದಾರೆ.

ಅಂದು ನಾನು ಕಾಮೆಂಟ್ರಿ ಮಾಡುತ್ತಿದ್ದೆ. ಈ ವೇಳೆ ಆರ್ಸಿಬಿ ಕೋಚ್ ಸಂಜಯ್ ಬಂಗಾರ್ ಕರೆ ಮಾಡಿದ್ದರು. ಅಲ್ಲದೆ ನನ್ನ ಫಿಟ್ನೆಸ್ ಹಾಗೂ ಪ್ರಾಕ್ಟೀಸ್ ಬಗ್ಗೆ ವಿಚಾರಿಸಿದ್ದರು. ಆಗಲೇ ನನಗೆ ಗೊತ್ತಾಗಿದ್ದು, ಅವರು ಆರ್ಸಿಬಿ ತಂಡಕ್ಕೆ ಕರಿತಾರೆ ಅಂತ ಎಂದು ಜಾಧವ್ ತಿಳಿಸಿದ್ದಾರೆ.

ಇನ್ನು ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಾಧವ್, ಆರ್ಸಿಬಿ ಪರ ಆಡಲು ಉತ್ಸುಕನಾಗಿದ್ದೇನೆ. ತಂಡವನ್ನು ಸೇರಲು ಅವಕಾಶ ನೀಡಿದ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೆ ನಾನು ತಂಡಕ್ಕಾಗಿ ಶೇ.100 ರಷ್ಟು ಪ್ರದರ್ಶನ ನೀಡಲಿದ್ದೇ ಎಂದು ಈ ವೇಳೆ ತಿಳಿಸಿದರು.

ಅಂದಹಾಗೆ ಕೇದಾರ್ ಜಾಧವ್ 2016 ಹಾಗೂ 2017 ರಲ್ಲಿ ಆರ್ಸಿಬಿ ಪರ 17 ಪಂದ್ಯಗಳನ್ನಾಡಿದ್ದರು. ಈ ವೇಳೆ ಅವರು 23.92 ಸರಾಸರಿಯಲ್ಲಿ ಒಟ್ಟು 311 ರನ್ ಕಲೆಹಾಕಿದ್ದರು. ಇನ್ನು ಕೊನೆಯ ಬಾರಿ ಐಪಿಎಲ್ನಲ್ಲಿ ಆಡಿದ್ದು 2021 ರಲ್ಲಿ. ಅಂದು SRH ತಂಡದಲ್ಲಿದ್ದ ಜಾಧವ್ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 55 ರನ್ ಮಾತ್ರ.

ಹಾಗೆಯೇ ಐಪಿಎಲ್ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು. ಇದಾಗ್ಯೂ 38 ವರ್ಷದ ಕೇದಾರ್ ಜಾಧವ್ ಅವರನ್ನು ಆರ್ಸಿಬಿ ಆಯ್ಕೆ ಮಾಡಿರುವುದು ಅಚ್ಚರಿಯೇ ಸರಿ.



















