IPL 2023: RCB ಅಭಿಮಾನಿಗಳಿಗೆ ಖಡಕ್ ಸೂಚನೆ ನೀಡಿದ ಗಂಭೀರ್..!

IPL 2023 Kannada: ಮೊದಲ ವಿಕೆಟ್​ಗೆ 96 ರನ್​ಗಳ ಜೊತೆಯಾಟವಾಡಿದ ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 61 ರನ್​ ಬಾರಿಸಿ ಔಟಾದರು.

TV9 Web
| Updated By: ಝಾಹಿರ್ ಯೂಸುಫ್

Updated on: Apr 11, 2023 | 5:30 PM

IPL 2023: RCB vs LSG: ಏಪ್ರಿಲ್ 10, 2023..ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು.

1 / 9
ಮೊದಲ ವಿಕೆಟ್​ಗೆ 96 ರನ್​ಗಳ ಜೊತೆಯಾಟವಾಡಿದ ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 61 ರನ್​ ಬಾರಿಸಿ ಔಟಾದರು. ಆ ಬಳಿಕ ಬಂದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಮೂಲಕ 115 ರನ್​ಗಳ ಜೊತೆಯಾಟವಾಡಿದರು.

2 / 9
ಈ ವೇಳೆ ಡುಪ್ಲೆಸಿಸ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ ಅಜೇಯ 76 ರನ್​ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್​ವೆಲ್ 29 ಎಸೆತಗಳಲ್ಲಿ 6 ಸಿಡಿಲಬ್ಬರದ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 59 ರನ್​ ಕಲೆಹಾಕಿದರು. ಪರಿಣಾಮ ಆರ್​ಸಿಬಿ ತಂಡದ ಮೊತ್ತವು 212 ಕ್ಕೆ ಬಂದು ನಿಂತಿತು.

3 / 9
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆರ್​ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋ ತಂಡಕ್ಕೆ ಆ ಬಳಿಕ ನೆರವಾಗಿದ್ದು ಮಾರ್ಕಸ್ ಸ್ಟೋಯಿನಿಸ್. ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಫೋರ್​ನೊಂದಿಗೆ ಸ್ಟೋಯಿನಿಸ್ 65 ರನ್​ ಬಾರಿಸಿದರು.

4 / 9
ಆ ನಂತರ ಬಂದ ನಿಕೋಲಸ್ ಪೂರನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಪೂರನ್ ಅಂತಿಮವಾಗಿ 19 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 62 ರನ್​ ಚಚ್ಚಿದರು. ಅಲ್ಲಿಗೆ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್​ ಕಡೆ ವಾಲಿತು.

5 / 9
ಇನ್ನು ಆಯುಷ್ ಬದೋನಿಯ 30 ರನ್​ಗಳ ನೆರವಿನಿಂದ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು. ಕೊನೆಯ ಓವರ್​ನಲ್ಲಿ 5 ರನ್​ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಉನಾದ್ಕಟ್ 1 ರನ್​ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್ ಆದರು. ಇನ್ನು 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ 1 ರನ್​. ಅಲ್ಲಿಗೆ ಸ್ಕೋರ್ ಸಮಗೊಂಡಿತು. ಆದರೆ 5ನೇ ಎಸೆತದಲ್ಲಿ ಉನಾದ್ಕಟ್ ಔಟ್ ಆಗುವುದರೊಂದಿಗೆ ಪಂದ್ಯವು ಮತ್ತೆ ರೋಚಕತೆಯತ್ತ ಸಾಗಿತು.

6 / 9
ಇತ್ತ ಸೂಪರ್ ಓವರ್ ನಿರೀಕ್ಷೆಯಲ್ಲಿ ಆರ್​ಸಿಬಿ ತಂಡವು ಫೀಲ್ಡಿಂಗ್ ಸೆಟ್ ಮಾಡಿತು. ಆದರೆ ಅಂತಿಮ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡು ಹಿಡಿಯಲು ವಿಫಲರಾದ ಕಾರಣ ಅವೇಶ್ ಖಾನ್ 1 ಬೈ ರನ್ ಓಡಿದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ವಿಕೆಟ್​ನಿಂದ ಗೆಲುವು ದಾಖಲಿಸಿತು.

7 / 9
ಇಡೀ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಗಾಂಭೀರ್ಯತೆಗೆ ಒಳಗಾಗಿದ್ದರು. ಕೊನೆಯ ಎಸೆತದವರೆಗೂ ಫುಲ್ ಟೆನ್ಶನ್​ನಲ್ಲಿ ಕಾಣಿಸಿಕೊಂಡ ಗಂಭೀರ್ ಲಕ್ನೋ ಗೆಲ್ಲುತ್ತಿದ್ದಂತೆ ಭರ್ಜರಿಯಾಗಿ ಸಂಭ್ರಮಿಸಿದರು.

8 / 9
ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದರು. ಗಂಭೀರ್ ಅವರ ಈ ಅತಿರೇಕದ ವರ್ತನೆಯ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

9 / 9
Follow us
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ

ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು

ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ

ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ

ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ

ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ

ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ

ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ

ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ