- Kannada News Photo gallery Cricket photos IPL 2023: MI vs RCB: Faf Du Plessis Six, Virat Kohli Reaction
IPL 2023: ಫಾಫ್ ಡುಪ್ಲೆಸಿಸ್ ಸ್ಕೂಪ್ ಸಿಕ್ಸ್ಗೆ ಕಿಂಗ್ ಕೊಹ್ಲಿಯ ರಿಯಾಕ್ಷನ್
IPL 2023 Kannada: ಈ ಪಂದ್ಯದಲ್ಲಿ 4ನೇ ವಿಕೆಟ್ಗೆ ಜೊತೆಯಾದ ಫಾಫ್ ಡುಪ್ಲೆಸಿಸ್ (65) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (68) 120 ರನ್ಗಳ ಭರ್ಜರಿ ಜೊತೆಯಾಟವಾಡಿದರು.
Updated on: May 09, 2023 | 11:31 PM

IPL 2023: ಐಪಿಎಲ್ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

16 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜೊತೆಯಾದ ಫಾಫ್ ಡುಪ್ಲೆಸಿಸ್-ಮ್ಯಾಕ್ಸ್ವೆಲ್ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಅಲ್ಲದೆ ಬಿರುಸಿನ ಬ್ಯಾಟಿಂಗ್ ಮೂಲಕ ಫಾಫ್-ಮ್ಯಾಕ್ಸಿ ಜೋಡಿ ಗಮನ ಸೆಳೆದರು. ಇದರ ನಡುವೆ 10ನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್ ಬಾರಿಸಿದ ಸ್ಕೂಪ್ ಶಾಟ್ಗೆ ಡಗೌಟ್ನಲ್ಲಿದ್ದ ವಿರಾಟ್ ಕೊಹ್ಲಿ ತಲೆದೂಗಿದರು.

ಆಕಾಶ್ ಮಧ್ವಾಳ್ ಎಸೆದ 10ನೇ ಓವರ್ನ 3ನೇ ಎಸೆತವು ನೋ ಬಾಲ್ ಆಗಿತ್ತು. ಹೀಗೆ ಸಿಕ್ಕ ಫ್ರೀ ಹಿಟ್ಗೆ ಡುಪ್ಲೆಸಿಸ್ ಸ್ಕೂಪ್ ಶಾಟ್ ಸಿಕ್ಸ್ ಬಾರಿಸಿದರು.

ಅತ್ತ ಚೆಂಡು ಬೌಂಡರಿ ಲೈನ್ ದಾಟುತ್ತಿದ್ದಂತೆ ಡಗೌಟ್ನಲ್ಲಿದ್ದ ವಿರಾಟ್ ಕೊಹ್ಲಿ ಸಿಕ್ಸ್ ಎಂದು ಕೈ ಎತ್ತುವ ಮೂಲಕ ಸಂಭ್ರಮಿಸಿದರು. ಇದೀಗ ಫಾಫ್ ಡುಪ್ಲೆಸಿಸ್ ಅವರ ಸ್ಕೂಪ್ ಸಿಕ್ಸ್ಗೆ ವಿರಾಟ್ ಕೊಹ್ಲಿ ನೀಡಿದ ರಿಯಾಕ್ಷನ್ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ 4ನೇ ವಿಕೆಟ್ಗೆ ಜೊತೆಯಾದ ಫಾಫ್ ಡುಪ್ಲೆಸಿಸ್ (65) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (68) 120 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ ತಂಡವು 199 ರನ್ ಕಲೆಹಾಕಿತು.
