IPL 2023: ಐಪಿಎಲ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಬ್ಯಾಟ್ ಬೀಸಿದ್ದು ಇಬ್ಬರೇ ಇಬ್ಬರು..!

Edited By:

Updated on: Apr 10, 2023 | 5:31 PM

IPL 2023 Kannada: ಐಪಿಎಲ್ ಇತಿಹಾಸದಲ್ಲಿ ಓಪನರ್ ಆಗಿ ಕಣಕ್ಕಿಳಿದು ಎಲ್ಲಾ ಆಟಗಾರರೊಂದಿಗೆ ಜೊತೆಯಾಟವಾಡಿದ 2ನೇ ಬ್ಯಾಟರ್ ಎಂಬ ದಾಖಲೆಯೊಂದು ಶಿಖರ್ ಧವನ್ ಪಾಲಾಗಿದೆ.

1 / 5
IPL 2023: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಜೇಯ 99 ರನ್​ ಬಾರಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಗಳಲ್ಲಿ ಪ್ಲೇಯಿಂಗ್​ ಇಲೆವೆನ್​ನ ಎಲ್ಲರೊಂದಿಗೆ ಬ್ಯಾಟ್​ ಬೀಸಿದ ವಿಶೇಷ ದಾಖಲೆ ಕೂಡ ಸೇರಿದೆ.

IPL 2023: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಜೇಯ 99 ರನ್​ ಬಾರಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಗಳಲ್ಲಿ ಪ್ಲೇಯಿಂಗ್​ ಇಲೆವೆನ್​ನ ಎಲ್ಲರೊಂದಿಗೆ ಬ್ಯಾಟ್​ ಬೀಸಿದ ವಿಶೇಷ ದಾಖಲೆ ಕೂಡ ಸೇರಿದೆ.

2 / 5

ಅಂದರೆ ಆರಂಭಿಕನಾಗಿ ಕಣಕ್ಕಿಳಿದು 11ನೇ ಆಟಗಾರನ ಜೊತೆ ಇನಿಂಗ್ಸ್​ ಕಟ್ಟಿದ ವಿಶೇಷ ದಾಖಲೆಯೊಂದು ಶಿಖರ್ ಧವನ್ ಪಾಲಾಗಿದೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಧವನ್ 11ನೇ ಬ್ಯಾಟರ್ ಮೋಹಿತ್ ರಥಿ ಜೊತೆಗೂಡಿ 55 ರನ್​ಗಳ ಜೊತೆಯಾಟವಾಡಿದ್ದರು.

3 / 5

ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಓಪನರ್ ಆಗಿ ಕಣಕ್ಕಿಳಿದು ಎಲ್ಲಾ ಆಟಗಾರರೊಂದಿಗೆ ಜೊತೆಯಾಟವಾಡಿದ 2ನೇ ಬ್ಯಾಟರ್ ಎಂಬ ದಾಖಲೆಯೊಂದು ಶಿಖರ್ ಧವನ್ ಪಾಲಾಯಿತು. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಪಾರ್ಥಿವ್ ಪಟೇಲ್ ನಿರ್ಮಿಸಿದ್ದರು.

4 / 5

2019 ರಲ್ಲಿ ಸಿಎಸ್​ಕೆ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಪಾರ್ಥಿವ್ ಪಟೇಲ್ ಕ್ರೀಸ್ ಕಚ್ಚಿ ನಿಂತು 11ನೇ ಆಟಗಾರ ಮೊಹಮ್ಮದ್ ಸಿರಾಜ್ ಅವರೊಂದಿಗೆ ಜೊತೆಯಾಟವಾಡಿದ್ದರು.

5 / 5

ಇದೀಗ ಎಸ್​ಆರ್​ಹೆಚ್​ ಆರಂಭಿಕನಾಗಿ ಆಡಿದ ಶಿಖರ್ ಧವನ್ 66 ಎಸೆತಗಳಲ್ಲಿ ಅಜೇಯ 99 ರನ್​ ಬಾರಿಸುವ ಮೂಲಕ 11ನೇ ಬ್ಯಾಟರ್​ನೊಂದಿಗೆ ಇನಿಂಗ್ಸ್​ ಅಂತ್ಯಗೊಳಿಸಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Loading...
Unable to load recommendations.
Follow Us