Shubman Gill, IPL 2023: ಡು ಪ್ಲೆಸಿಸ್ ಬಳಿಯಿದ್ದ ಆರೆಂಜ್ ಕ್ಯಾಪ್ ವಶಪಡಿಸಿಕೊಂಡ ಗಿಲ್..!

Shubman Gill, IPL 2023: ಅಂತಿಮವಾಗಿ, ನಿರೀಕ್ಷಿಸಿದಂತೆ ಐಪಿಎಲ್ 2023 ರ ಆರೆಂಜ್ ಕ್ಯಾಪ್ ಶುಭ್​ಮನ್ ಗಿಲ್ ತಲೆಯ ಮೇಲೆ ಬಂದು ಕುಳಿತಿದೆ.

ಪೃಥ್ವಿಶಂಕರ
|

Updated on:May 26, 2023 | 9:10 PM

ಅಂತಿಮವಾಗಿ, ನಿರೀಕ್ಷಿಸಿದಂತೆ ಐಪಿಎಲ್ 2023 ರ ಆರೆಂಜ್ ಕ್ಯಾಪ್ ಶುಭ್​ಮನ್ ಗಿಲ್ ತಲೆಯ ಮೇಲೆ ಬಂದು ಕುಳಿತಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 9 ರನ್ ಬಾರಿಸಿದ ತಕ್ಷಣ ಗಿಲ್ ಫಾಫ್ ಡುಪ್ಲೆಸಿ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.

1 / 5
ಆರ್​ಸಿಬಿ ನಾಯಕ ಡುಪ್ಲೆಸಿ ಈ ಪಂದ್ಯಾವಳಿಯಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 730 ರನ್ ಗಳಿಸಿ ಆರೆಂಜ್ ಕ್ಯಾಪನ್ನು ಈ ಪಂದ್ಯದವರೆಗೆ ತಮ್ಮಲ್ಲೆ ಉಳಿಸಿಕೊಂಡಿದ್ದರು. ಆದರೆ ಗಿಲ್ ಫಾಫ್ ಬಾರಿಸಿದ ರನ್​ಗಳನ್ನು ಹಿಮ್ಮೆಟ್ಟಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

2 / 5
ಈ ಆವೃತ್ತಿಲ್ಲಿ ಶುಭ್​ಮನ್ ಗಿಲ್‌ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಈ ಟೂರ್ನಿಯಲ್ಲಿ ಇದುವರೆಗೆ ಸತತ 2 ಶತಕ ಬಾರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಸ್ಟ್ರೈಕ್ ರೇಟ್ ವಿಚಾರದಲ್ಲಿ ಹಲವು ಟೀಕೆಗಳನ್ನು ಎದುರಿಸಿದ್ದ ಗಿಲ್ ಈ ಆವೃತ್ತಿಯಲ್ಲಿ 150 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

3 / 5
ಈ ಆವೃತ್ತಿಯಲ್ಲಿ ಸತತ ಎರಡು ಶತಕ ಬಾರಿಸಿರುವ ಗಿಲ್ ಲಕ್ನೋ ವಿರುದ್ಧವೂ ಶತಕ ಬಾರಿಸುವ ಸನಿಹದಲ್ಲಿದ್ದರು. ಆದರೆ ಕೇವಲ 6 ರನ್​ಗಳಿಂದ ಶತಕ ವಂಚಿತರಾಗಿದ್ದರು.

4 / 5
ಅಲ್ಲದೆ ಇದೇ ಪಂದ್ಯದಲ್ಲಿ ತಮ್ಮ ಐದನೇ ಅರ್ಧಶತಕ ಬಾರಿಸಿರುವ ಗಿಲ್ ಗುಜರಾತ್ ಇನ್ನಿಂಗ್ಸ್​ಗೆ ಬಲ ತುಂಬುತ್ತಿದ್ದಾರೆ. ಈ ಸುದ್ದಿ ಬರೆಯುವ ಹೊತ್ತಿಗೆ ಗಿಲ್ 43 ಎಸೆತಗಳಲ್ಲಿ 85 ರನ್ ಬಾರಿಸಿದ್ದರು.

5 / 5

Published On - 9:07 pm, Fri, 26 May 23

Follow us