AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ವೈಮನಸ್ಸು ಮರೆತು ಹಸ್ತಲಾಘವ ಮಾಡಿದ ವಿರಾಟ್ ಕೊಹ್ಲಿ-ಗಂಗೂಲಿ

Virat Kohli - Sourav Ganguly: ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 46 ಎಸೆತಗಳಲ್ಲಿ 55 ರನ್ ಬಾರಿಸಿ 16ನೇ ಓವರ್​ನಲ್ಲಿ ಮುಕೇಶ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು.

TV9 Web
| Updated By: ಝಾಹಿರ್ ಯೂಸುಫ್

Updated on: May 07, 2023 | 12:29 AM

IPL 2023: ಐಪಿಎಲ್​ನ 50ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು.

1 / 10
ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿಗೆ ಫಾಫ್ ಹಾಗೂ ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 10 ಓವರ್​ಗಳಲ್ಲಿ 82 ರನ್ ಕಲೆಹಾಕುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಹಂತದಲ್ಲಿ ಡುಪ್ಲೆಸಿಸ್ (45) ಔಟಾದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ (0) ಕೂಡ ಮಿಚೆಲ್ ಮಾರ್ಷ್​ಗೆ ವಿಕೆಟ್ ಒಪ್ಪಿಸಿದರು.

2 / 10
ಮತ್ತೊಂದೆಡೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 46 ಎಸೆತಗಳಲ್ಲಿ 55 ರನ್ ಬಾರಿಸಿ 16ನೇ ಓವರ್​ನಲ್ಲಿ ಮುಕೇಶ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು.

3 / 10
182 ರನ್​ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 45 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 87 ರನ್ ಬಾರಿಸಿ ಸಾಲ್ಟ್ ಔಟಾದರು.

4 / 10
ಮತ್ತೊಂದೆಡೆ ಮಿಚೆಲ್ ಮಾರ್ಷ್ 26 ರನ್ ಬಾರಿಸಿದರೆ, ರಿಲೀ ರೊಸ್ಸೊವ್ ಅಜೇಯ 35 ರನ್​ ಬಾರಿಸಿದರು. ಅದರಂತೆ 16.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್​ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

5 / 10
ಈ ಗೆಲುವಿನ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರ್ದೇಶಕ ಸೌರವ್ ಗಂಗೂಲಿ ಪರಸ್ಪರ ಮುಖಾಮುಖಿಯಾಗಿದ್ದರು.

6 / 10
ಆದರೆ ಈ ಬಾರಿ ಇಬ್ಬರು ಪರಸ್ಪರ ಕೈ ಕುಲುಕುವ ಮೂಲಕ ಎಲ್ಲಾ ವೈಮನಸ್ಸಿಗೂ ತೆರೆ ಎಳೆದರು. ಅಲ್ಲದೆ ಗಂಗೂಲಿ ಕೊಹ್ಲಿಯ ಬೆನ್ನು ತಟ್ಟುವ ಮೂಲಕ ಗಮನ ಸೆಳೆದರು.

7 / 10
ಇದಕ್ಕೂ ಮುನ್ನ, ಅಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ-ಗಂಗೂಲಿ ಶೇಕ್ ಹ್ಯಾಂಡ್ ಮಾಡಿರಲಿಲ್ಲ.

8 / 10
ಅಷ್ಟೇ ಅಲ್ಲದೆ ಆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗಂಗೂಲಿಯನ್ನು ಗುರಾಯಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಈ ಬಾರಿ ಇಬ್ಬರು ಪರಸ್ಪರ ಕೈಕುಲುಕುವ ಎಲ್ಲಾ ವೈಮನಸ್ಸಿಗೂ ತೆರೆ ಎಳೆಯುವ ಸೂಚನೆ ನೀಡಿದ್ದಾರೆ.

9 / 10
ಅಂದಹಾಗೆ ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ವೈಮನಸ್ಸು ಮೂಡಿತ್ತು. ಇದಾದ ಬಳಿಕ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಗೆ ಎಂಬುದು ವಿಶೇಷ.

10 / 10
Follow us
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ

ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ

ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ

ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ

ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ

ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ

ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು

ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್