IPL 2023: ಕ್ವಾಲಿಫೈಯರ್ 1 ಗೆದ್ದ ತಂಡವೇ ಚಾಂಪಿಯನ್! ಇದು ಅಂಕಿ-ಅಂಶ ನುಡಿದ ಭವಿಷ್ಯ

IPL 2023: ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 9 ಬಾರಿ ಕ್ವಾಲಿಫೈಯರ್ 1ರಲ್ಲಿ ಆಡಿದ ತಂಡಗಳ ನಡುವೆ ಫೈನಲ್ ಪಂದ್ಯ ನಡೆದಿದೆ. ದಾಖಲೆಯ ಪ್ರಕಾರ, ಕ್ವಾಲಿಫೈಯರ್ 1 ಪಂದ್ಯವನ್ನು ಗೆದ್ದ ತಂಡವು 9 ಪಂದ್ಯಗಳಲ್ಲಿ 7 ರಲ್ಲಿ ಫೈನಲ್ ಪಂದ್ಯವನ್ನು ಗೆದ್ದಿದೆ.

ಪೃಥ್ವಿಶಂಕರ
|

Updated on: May 27, 2023 | 7:31 PM

ಈ ಆವೃತ್ತಿಯ ಐಪಿಎಲ್​ನ ಫೈನಲ್ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೇ 28 ರಂದು ನಡೆಯಲಿದೆ. ಈ ಸೀಸನ್​ ಕೂಡ ಇದೇ ಎರಡು ತಂಡಗಳ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು. ಆ ನಂತರ ಕ್ವಾಲಿಫೈಯರ್ 1 ಪಂದ್ಯ ಕೂಡ ಚೆನ್ನೈ ಮತ್ತು ಗುಜರಾತ್ ನಡುವೆ ನಡೆದಿತ್ತು. ಇದೀಗ ಈ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗಲಿವೆ.

1 / 10
ಫೈನಲ್ ಪಂದ್ಯಕ್ಕೂ ಮುನ್ನ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದನ್ನು ಹೇಳುವುದು ಕಷ್ಟ. ಆದರೆ ಐಪಿಎಲ್ ಅಂಕಿ ಅಂಶ ಹೇಳುವ ಪ್ರಕಾರ ಈ ಬಾರಿಯ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಹೊರಹೊಮ್ಮಲಿದೆ.

2 / 10
ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 9 ಬಾರಿ ಕ್ವಾಲಿಫೈಯರ್ 1ರಲ್ಲಿ ಆಡಿದ ತಂಡಗಳ ನಡುವೆ ಫೈನಲ್ ಪಂದ್ಯ ನಡೆದಿದೆ. ದಾಖಲೆಯ ಪ್ರಕಾರ, ಕ್ವಾಲಿಫೈಯರ್ 1 ಪಂದ್ಯವನ್ನು ಗೆದ್ದ ತಂಡವು 9 ಪಂದ್ಯಗಳಲ್ಲಿ 7 ರಲ್ಲಿ ಫೈನಲ್ ಪಂದ್ಯವನ್ನು ಗೆದ್ದಿದೆ.

3 / 10
ಅಂದರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ.. ಈ ಬಾರಿಯ ಕ್ವಾಲಿಫೈಯರ್ 1 ಪಂದ್ಯವನ್ನು ಗೆದ್ದ ಚೆನ್ನೈ ತಂಡವೇ ಫೈನಲ್​ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.

4 / 10
2022 ರ ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯ ಗುಜರಾತ್ ಮತ್ತು ರಾಜಸ್ಥಾನ ತಂಡಗಳ ನಡುವೆ ನಡೆದಿತ್ತು. ಇದರಲ್ಲಿ ಗುಜರಾತ್ ಗೆದ್ದು ನೇರವಾಗಿ ಫೈನಲ್ ತಲುಪಿತ್ತು. ಆ ನಂತರ ಮತ್ತೆ ರಾಜಸ್ಥಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಗುಜರಾತ್ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು.

5 / 10
ಈ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯನ್ನು ಗಮನಿಸಿದರೆ.. 2011ರ ಸೀಸನ್​ನಿಂದ 5 ಬಾರಿ ಕ್ವಾಲಿಫೈಯರ್ 1 ಪಂದ್ಯವನ್ನು ಆಡಿದ ಚೆನ್ನೈ, ಆ ಬಳಿಕ ಫೈನಲ್ ಪಂದ್ಯವನ್ನೂ ಆಡಿದೆ. ಇದರಲ್ಲಿ 2013 ರಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈಯನ್ನು ಸೋಲಿಸಿದ್ದ ಚೆನ್ನೈ, ಫೈನಲ್‌ನಲ್ಲಿ ಮುಂಬೈ ವಿರುದ್ಧ 23 ರನ್‌ಗಳಿಂದ ಸೋಲಬೇಕಾಯಿತು.

6 / 10
ಇನ್ನು 2011 ರ ಕ್ವಾಲಿಫೈಯರ್ 1 ಪಂದ್ಯವನ್ನು ಗೆದ್ದು ಬೀಗಿದ್ದ ಚೆನ್ನೈ, ಫೈನಲ್‌ನಲ್ಲಿ ಆರ್​ಸಿಬಿ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

7 / 10
ಆದರೆ 2015 ರ ಆವೃತ್ತಿಯಲ್ಲಿ ಕ್ವಾಲಿಫೈಯರ್ 1 ರಲ್ಲಿ ಗೆದ್ದಿದ್ದ ಚೆನ್ನೈ, ಮುಂಬೈ ವಿರುದ್ಧದ ಫೈನಲ್‌ನಲ್ಲಿ ಸೋಲನ್ನು ಅನುಭವಿಸಿತ್ತು.

8 / 10
2018 ರ ಕ್ವಾಲಿಫೈಯರ್ 1 ರಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಿದ್ದ ಚೆನ್ನೈ ಫೈನಲ್‌ ಗೆದ್ದು ಚಾಂಪಿಯನ್ ಆಗಿತ್ತು.

9 / 10
ಹಾಗೆಯೇ 2019 ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಚೆನ್ನೈ ತಂಡವನ್ನು ಮಣಿಸಿದ್ದ ಮುಂಬೈ, ಫೈನಲ್ ಪಂದ್ಯದಲ್ಲೂ ಚೆನ್ನೈ ತಂಡವನ್ನು ಸೋಲಿಸಿ ಕಪ್ ವಶ ಪಡಿಸಿಕೊಂಡಿತ್ತು.

10 / 10
Follow us
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್