IPL 2023: ಈ ಬಾರಿಯಾದ್ರು ಕನ್ನಡಿಗನಿಗೆ ಚಾನ್ಸ್ ನೀಡುತ್ತಾ RCB?

| Updated By: ಝಾಹಿರ್ ಯೂಸುಫ್

Updated on: Apr 25, 2023 | 9:22 PM

IPL 2023 RCB Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ.

1 / 7
IPL 2023: ಐಪಿಎಲ್​ನ 36ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಾದರೂ ಕರ್ನಾಟಕದ ಯುವ ಆಲ್​ರೌಂಡರ್​ಗೆ ಅವಕಾಶ ಸಿಗಲಿದೆಯಾ ಎಂಬುದೇ ಪ್ರಶ್ನೆ.

2 / 7
ಏಕೆಂದರೆ ಆರ್​ಸಿಬಿ ಆಡಿರುವ 7 ಪಂದ್ಯಗಳಲ್ಲಿ 4 ಜಯ ಹಾಗೂ 3 ಸೋಲಿನೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿದೆ. ಇಲ್ಲಿ ಆರ್​ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ ಹಾಗೂ ಕೆಲ ಬೌಲರ್​ಗಳ ಕಳಪೆ ಪ್ರದರ್ಶನ.

3 / 7
ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ದಿನೇಶ್ ಕಾರ್ತಿಕ್ 7 ಪಂದ್ಯಗಳಿಂದ ಒಟ್ಟು 61 ರನ್​ಗಳಿಸಿದರೆ, ಶಹಬಾಝ್ ಅಹ್ಮದ್ 40 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಮಹಿಪಾಲ್ ಲೋಮ್ರರ್ 5 ಪಂದ್ಯಗಳಿಂದ 41 ರನ್​ ಕಲೆಹಾಕಿದರೆ, ಸುಯಶ್ ಪ್ರಭುದೇಸಾಯಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 19 ರನ್​ ಮಾತ್ರ. ಅಂದರೆ ಆರ್​ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವಿಫಲರಾಗುತ್ತಿರುವುದು ಸ್ಪಷ್ಟ.

4 / 7
ಇದಾಗ್ಯೂ ತಂಡದಲ್ಲಿರುವ ಕರ್ನಾಟಕದ ಯುವ ಆಲ್​ರೌಂಡರ್ ಮನೋಜ್ ಭಾಂಡಗೆಗೆ ಮಾತ್ರ ಆರ್​ಸಿಬಿ ಅವಕಾಶ ನೀಡುತ್ತಿಲ್ಲ. ದೇಶೀಯ ಅಂಗಳದಲ್ಲಿ ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ಬೌಲಿಂಗ್ ಮೂಲಕ ಆಲ್​ರೌಂಡರ್ ಆಗಿ ಮಿಂಚಿರುವ ಮನೋಜ್ ಆರ್​ಸಿಬಿ ಮುಂದಿರುವ ಅತ್ಯುತ್ತಮ ಆಯ್ಕೆ.

5 / 7
ಏಕೆಂದರೆ 24 ವರ್ಷದ ಮನೋಜ್ ಭಾಂಡಗೆ ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದು ಈ ವೇಳೆ 7 ಇನಿಂಗ್ಸ್​ನಲ್ಲಿ 116 ರನ್​ ಕಲೆಹಾಕಿದ್ದಾರೆ. ಹಾಗೆಯೇ 8 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ. ಅಂದರೆ ದೇಶೀಯ ಅಂಗಳದಲ್ಲಿ ಮನೋಜ್ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ ಎನ್ನಬಹುದು.

6 / 7
ಹೀಗಾಗಿ ತವರು ಮೈದಾನದಲ್ಲಿ ನಡೆಯುತ್ತಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಯುವ ಆಲ್​ರೌಂಡರ್​ ಮನೋಜ್ ಭಾಂಡಗೆಗೆ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.

7 / 7
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.