AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಈ ಐವರು ವಿದೇಶಿ ಆಟಗಾರರಿಗೆ ಇದು ಚೊಚ್ಚಲ ಐಪಿಎಲ್

IPL 2024: 2024 ರ ಐಪಿಎಲ್​ಗೆ ವೇದಿಕೆ ಸಿದ್ಧವಾಗಿದೆ. ಮಾರ್ಚ್​ 22 ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದೆ. ಇದು ಈ ಲೀಗ್​ನ 17ನೇ ಆವೃತ್ತಿಯಾಗಿದ್ದು, ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕಿಳಿಯಲು ಪ್ರಮುಖವಾಗಿ ಈ ಐವರು ವಿದೇಶಿ ಆಟಗಾರರು ಎದುರು ನೋಡುತ್ತಿದ್ದಾರೆ. ಅವರ ವಿವರ ಇಂತಿದೆ.

ಪೃಥ್ವಿಶಂಕರ
|

Updated on: Mar 15, 2024 | 6:13 PM

Share
2024 ರ ಐಪಿಎಲ್​ಗೆ ವೇದಿಕೆ ಸಿದ್ಧವಾಗಿದೆ. ಮಾರ್ಚ್​ 22 ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದೆ. ಇದು ಈ ಲೀಗ್​ನ 17ನೇ ಆವೃತ್ತಿಯಾಗಿದ್ದು, ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕಿಳಿಯಲು ಪ್ರಮುಖ ಈ ಐವರು ವಿದೇಶಿ ಆಟಗಾರರು ಎದುರು ನೋಡುತ್ತಿದ್ದಾರೆ. ಅವರ ವಿವರ ಇಂತಿದೆ.

1 / 6
ಜೆರಾಲ್ಡ್ ಕೊಯೆಟ್ಜಿ: ಕಳೆದ ನವೆಂಬರ್​ನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ತನ್ನ ವೇಗದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ ಈ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಯೆಟ್ಜಿ, ಭಾರತದ ಆಫ್ರಿಕಾ ಪ್ರವಾಸದಲ್ಲೂ ಟೀಂ ಇಂಡಿಯಾ ಆಟಗಾರರಿಗೆ ಸಿಂಹ ಸ್ವಪ್ನರಾಗಿದ್ದರು. ಯುವ ಬೌಲರ್​ನ ಪ್ರತಿಭೆ ನೋಡಿದ್ದ ಮುಂಬೈ ಫ್ರಾಂಚೈಸಿ ಈತನನ್ನು 5 ಕೋಟಿ ರೂಗೆ ಖರೀದಿಸಿದ್ದು, ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಈ ವೇಗಿಗೆ ಅವಕಾಶ ಸಿಗುವುದು ಖಚಿತವಾಗಿದೆ.

2 / 6
ರಚಿನ್ ರವೀಂದ್ರ: ಕರ್ನಾಟಕ ಮೂಲಕ ನ್ಯೂಜಿಲೆಂಡ್‌ನ ಈ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ವಿಶ್ವ ಕ್ರಿಕೆಟ್​ನ ಗಮನ ಸೆಳೆದಿದ್ದರು. ಅಲ್ಲದೆ ಟೂರ್ನಿಯಲ್ಲಿ ಅಧಿಕ ರನ್ ಗಳಿಸಿದ ಬ್ಯಾಟರ್​ಗಳ ಪೈಕಿ ಒಬ್ಬರಾಗಿದ್ದರು. ಇದರ ನಂತರ, ಐಪಿಎಲ್ ಮಿನಿ ಹರಾಜಿನಲ್ಲಿ ಸಿಎಸ್​ಕೆ ಫ್ರಾಂಚೈಸಿ ಈ ಆಟಗಾರರನ್ನು 1 ಕೋಟಿ 80 ಲಕ್ಷಕ್ಕೆ ಖರೀದಿಸಿತ್ತು. ಇದೀಗ ಆರ್​ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ರಚಿನ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.

3 / 6
ದಿಲ್ಶಾನ್ ಮಧುಶಂಕ: ಶ್ರೀಲಂಕಾದ ಯುವ ಎಡಗೈ ಬೌಲರ್ ದಿಲ್ಶನ್ ಮಧುಶಂಕ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ 4 ಕೋಟಿ 60 ಲಕ್ಷ ರೂಪಾಯಿಗೆ ಖರೀದಿಸಿದೆ. ಮಧುಶಂಕ ಇದುವರೆಗೆ 14 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಅವರು 14 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 6
ಅಜ್ಮತುಲ್ಲಾ ಒಮರ್ಜಾಯ್‌: ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಅವರನ್ನು 50 ಲಕ್ಷ ಮೂಲ ಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿದೆ. ಒಮರ್ಜಾಯ್ ಇದುವರೆಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಒಮರ್ಜಾಯ್ ಅವರ ಪ್ರದರ್ಶನವನ್ನು ನೋಡಿದರೆ, ನಾಯಕ ಶುಭ್​ಮನ್ ಗಿಲ್ ಆರಂಭಿಕ ಪಂದ್ಯದಿಂದಲೇ ಈ ಆಲ್ ರೌಂಡರ್‌ಗೆ ಆಡಲು ಅವಕಾಶ ನೀಡಬಹುದು.

5 / 6
ಶಮರ್ ಜೋಸೆಫ್: ಗಬ್ಬಾ ಟೆಸ್ಟ್ ಗೆಲುವಿನ ಶಮರ್ ಜೋಸೆಫ್ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. ಕಾಂಗರೂಗಳನ್ನು ಅವರ ನಾಡಲ್ಲೇ ಮಣಿಸಿದ ವೆಸ್ಟ್ ಇಂಡೀಸ್ ತಂಡದ ಪ್ರಮುಖ ಗೆಲುವಿನ ರೂವಾರಿ ಎನಿಸಿಕೊಂಡಿರುವ ಶಮರ್ ಜೋಸೆಫ್ ಅವರನ್ನು ಮತ್ತೊಬ್ಬ ವೇಗಿ ಮಾರ್ಕ್ ವುಡ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಯುವ ಬೌಲರ್ ಮೊದಲ ಪಂದ್ಯದಲ್ಲೇ ಐಪಿಎಲ್ ಪಾದಾರ್ಪಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

6 / 6
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು