- Kannada News Photo gallery Cricket photos IPL 2024 angkrish raghuvanshi breaks 16 years old records with his maiden fifty
IPL 2024: ಅಂಗ್‌ಕ್ರಿಶ್ ರಘುವಂಶಿ ಆಟಕ್ಕೆ 16 ವರ್ಷಗಳ ಹಳೆಯ ದಾಖಲೆ ಉಡೀಸ್..!
IPL 2024 Angkrish Raghuvanshi: ಕೆಆರ್ ಪರ ಮೊದಲ ಐಪಿಎಲ್ ಪಂದ್ಯವನ್ನಾಡಿದ 18ರ ಹರೆಯದ ಅಂಗ್‌ಕ್ರಿಶ್ ರಘುವಂಶಿ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಐಪಿಎಲ್ನಲ್ಲಿ 16 ವರ್ಷಗಳ ಹಿಂದೆ ದಾಖಲಾಗಿದ್ದ ಅಪರೂಪದ ದಾಖಲೆಯನ್ನು ಮುರಿದರು.
Updated on:Apr 04, 2024 | 4:12 PM

ವಿಶಾಖಪಟ್ಟಣದಲ್ಲಿ ನಡೆದ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 16ನೇ ಪಂದ್ಯದಲ್ಲಿ ಕೆಕೆಆರ್ ತಂಡದ ಆಲ್ರೌಂಡರ್ ಆಟಕ್ಕೆ ಶರಣಾದ ಡೆಲ್ಲಿ ತಂಡ ಬರೋಬ್ಬರಿ 100ಕ್ಕೂ ಅಧಿಕ ರನ್ಗಳಿಂದ ಸೋಲು ಕಂಡಿತು. ಇತ್ತ ಡೆಲ್ಲಿ ತಂಡವನ್ನು ಬೃಹತ್ ಅಂತರದಿಂದ ಮಣಿಸಿದ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ತಂಡದ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಸುನೀಲ್ ನರೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿ 39 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 85 ರನ್ ಕಲೆಹಾಕಿದರು.

ನರೈನ್ ಜೊತೆಗೆ ಕೆಕೆಆರ್ ಪರ ಮೊದಲ ಐಪಿಎಲ್ ಪಂದ್ಯವನ್ನಾಡಿದ 18ರ ಹರೆಯದ ಅಂಗ್‌ಕ್ರಿಶ್ ರಘುವಂಶಿ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಐಪಿಎಲ್ನಲ್ಲಿ 16 ವರ್ಷಗಳ ಹಿಂದೆ ದಾಖಲಾಗಿದ್ದ ಅಪರೂಪದ ದಾಖಲೆಯನ್ನು ಮುರಿದರು.

ಡೆಲ್ಲಿ ವಿರುದ್ಧ ಅರ್ಧಶತಕ ಸಿಡಿಸಿದ ಅಂಗ್‌ಕ್ರಿಶ್ ರಘುವಂಶಿ, ಐಪಿಎಲ್‌ನ ಮೊದಲ ಇನ್ನಿಂಗ್ಸ್‌ನಲ್ಲೇ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಂಗ್‌ಕ್ರಿಶ್ 18 ವರ್ಷ, 303 ದಿನಗಳಲ್ಲಿ ಈ ಸಾಧನೆ ಮಾಡಿದರು.

ಅಂಗ್‌ಕ್ರಿಶ್ ರಘುವಂಶಿಗೂ ಮೊದಲು ಈ ದಾಖಲೆ ಶ್ರೀವತ್ಸ ಗೋಸ್ವಾಮಿ ಹೆಸರಿನಲ್ಲಿತ್ತು. ಶ್ರೀವತ್ಸ ಗೋಸ್ವಾಮಿ ಅವರು 2008 ರಲ್ಲಿ ತಮ್ಮ ಮೊದಲ ಐಪಿಎಲ್ ಇನ್ನಿಂಗ್ಸ್‌ನಲ್ಲಿ 19 ವರ್ಷ, 1 ದಿನದಲ್ಲಿ ಅರ್ಧಶತಕ ಸಿಡಿಸಿ, ಈ ದಾಖಲೆ ಸೃಷ್ಟಿಸಿದ್ದರು.

ಇದಲ್ಲದೆ ಕೇವಲ 25 ಎಸೆತಗಳಲ್ಲಿ ತಮ್ಮ ಮೊದಲ ಐಪಿಎಲ್ ಅರ್ಧಶತಕ ಬಾರಿಸಿದ ಅಂಗ್‌ಕ್ರಿಶ್ ರಘುವಂಶಿ, ಇದರೊಂದಿಗೆ 200 ಸ್ಟ್ರೈಕ್ ರೇಟ್‌ನೊಂದಿಗೆ ಐಪಿಎಲ್ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಅಲ್ಲದೆ, ಇದು ಐಪಿಎಲ್ ವೃತ್ತಿಜೀವನದ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ ಎರಡನೇ ವೇಗದ ಅರ್ಧಶತಕ ಎಂಬ ದಾಖಲೆಯನ್ನು ಬರೆಯಿತು. ಇದಕ್ಕೂ ಮುನ್ನ 2008ರಲ್ಲಿ ಜೇಮ್ಸ್ ಹೋಪ್ಸ್ ತಮ್ಮ ಮೊದಲ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
Published On - 4:12 pm, Thu, 4 April 24




