- Kannada News Photo gallery Cricket photos IPL 2024: ಡೆಲ್ಲಿ ಕ್ಯಾಪಿಟಲ್ಸ್ನ ಬಿಗ್ ಟಾರ್ಗೆಟ್ ಟ್ರಾವಿಸ್ ಹೆಡ್
IPL 2024: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಿಗ್ ಟಾರ್ಗೆಟ್ ಟ್ರಾವಿಸ್ ಹೆಡ್
IPL 2024 Auction: ಈ ಬಾರಿಯ ಐಪಿಎಲ್ ಮಿಜಿ ಹರಾಜಿಗಾಗಿ ಒಟ್ಟು 333 ಆಟಗಾರರ ಹೆಸರು ಫೈನಲ್ ಮಾಡಲಾಗಿದೆ. ಆದರೆ ಇತ್ತ 10 ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳ ಸಂಖ್ಯೆ 77 ಮಾತ್ರ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನ ಮೂಲಕ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.
Updated on: Dec 18, 2023 | 2:30 PM

ಇಂಡಿಯನ್ ಪ್ರೀಮಿಯರ್ ಲೀಗ್ ಲೀಗ್ನ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಾಳೆ ನಡೆಯಲಿದೆ. ಈ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಿಗ್ ಟಾರ್ಗೆಟ್ ಆಸ್ಟ್ರೇಲಿಯಾದ ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್.

ಇದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರೇ ಖಚಿತಪಡಿಸಿದ್ದಾರೆ. ಕಳೆದ ಸೀಸನ್ನಲ್ಲಿಯೇ ನಾವು ಟ್ರಾವಿಸ್ ಹೆಡ್ ಅವರನ್ನು ಖರೀದಿಸಲು ಪ್ಲ್ಯಾನ್ ರೂಪಿಸಿದ್ದೆವು. ಆದರೆ ಐಪಿಎಲ್ ವೇಳೆ ಆತನ ವಿವಾಹ ನಿಗದಿಯಾಗಿತ್ತು. ಹೀಗಾಗಿ ಹೆಡ್ ಐಪಿಎಲ್ನಿಂದ ಹಿಂದೆ ಸರಿದಿದ್ದರು ಎಂದು ಪಾಂಟಿಂಗ್ ಹೇಳಿದ್ದಾರೆ.

ಒಂದು ವೇಳೆ ಅವರು ಕಳೆದ ಸೀಸನ್ನಲ್ಲಿ ಇದ್ದಿದ್ರೆ ನಾವು ಬಿಡ್ ಮಾಡಲು ತಯಾರಿದ್ದೆವು. ಆದರೆ ಅವರು ಐಪಿಎಲ್ ವೇಳೆ ಮೂರು ವಾರಗಳ ಸಮಯಕಾಶ ಕೇಳಿದ್ದರು. ಹೀಗಾಗಿ ನಮ್ಮ ಫ್ರಾಂಚೈಸಿ ಬಿಡ್ ಮಾಡಲು ಆಸಕ್ತಿ ತೋರಲಿಲ್ಲ ಎಂದು ಪಾಂಟಿಂಗ್ ತಿಳಿಸಿದ್ದಾರೆ.

ಇದೀಗ ಟ್ರಾವಿಸ್ ಹೆಡ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರನಿಗಾಗಿ ಕೋಚ್ ರಿಕಿ ಪಾಂಟಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ನಡೆಸುವುದು ಖಚಿತ ಎನ್ನಬಹುದು. ಅತ್ತ ಹೆಡ್ ಖರೀದಿಗಾಗಿ ಮತ್ತೆ ಕೆಲ ಫ್ರಾಂಚೈಸಿಗಳು ಆಸಕ್ತಿ ಹೊಂದಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಅಂದಹಾಗೆ ಟ್ರಾವಿಸ್ ಹೆಡ್ ಐಪಿಎಲ್ನಲ್ಲಿ ಇದುವರೆಗೆ 10 ಪಂದ್ಯಗಳನ್ನಾಡಿದ್ದಾರೆ. 2016-17 ರಲ್ಲಿ ಆರ್ಸಿಬಿ ಪರ ಹತ್ತು ಪಂದ್ಯಗಳನ್ನಾಡಿದ್ದ ಹೆಡ್ ಒಟ್ಟು 205 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಆರ್ಸಿಬಿ ಅವರನ್ನು ಬಿಡುಗಡೆ ಮಾಡಿತ್ತು. ಇದೀಗ ಭರ್ಜರಿ ಫಾರ್ಮ್ನೊಂದಿಗೆ ಟ್ರಾವಿಸ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಾಜಿ ಆಟಗಾರನ ಖರೀದಿಗೆ ಆರ್ಸಿಬಿ ಮುಂದಾಗುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರು: ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಇಶಾಂತ್ ಶರ್ಮಾ , ಮುಕೇಶ್ ಕುಮಾರ್.



















