- Kannada News Photo gallery Cricket photos IPL 2024 Dinesh Karthik drops retirement hints after IPL 2024 opener game
IPL 2024: ‘ನನ್ನ ಕೊನೆಯ ಪಂದ್ಯವಾಗಿತ್ತು’; ನಿವೃತ್ತಿ ಖಚಿತಪಡಿಸಿದ ದಿನೇಶ್ ಕಾರ್ತಿಕ್
IPL 2024, Dinesh Karthik: ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ನಿರ್ಣಾಯಕ ಇನ್ನಿಂಗ್ಸ್ ಆಡಿದ ತಂಡದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತಮ್ಮ ನಿವೃತ್ತಿ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಿಪಡಿಸಿದ್ದಾರೆ.
Updated on: Mar 23, 2024 | 4:22 PM

ನಿನ್ನೆ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಪರ ನಿರ್ಣಾಯಕ ಇನ್ನಿಂಗ್ಸ್ ಆಡಿದ ತಂಡದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತಮ್ಮ ನಿವೃತ್ತಿ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಿಪಡಿಸಿದ್ದಾರೆ.

ಭಾರತದ ಪ್ರತಿಭಾವಂತ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಆರಂಭದಿಂದಲೂ ಐಪಿಎಲ್‌ನ ಭಾಗವಾಗಿದ್ದಾರೆ. ಇದುವರೆಗೆ ಅವರು ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರೂ ಆಗಿದ್ದರು.

ಐಪಿಎಲ್ 17ನೇ ಸೀಸನ್ ಆರಂಭಕ್ಕೂ ಮುನ್ನವೇ ಇದು ಕಾರ್ತಿಕ್ ಅವರ ಐಪಿಎಲ್ ಕೊನೆಯ ಸೀಸನ್ ಎಂಬ ವರದಿಗಳು ಬಂದಿದ್ದವು. ಅದರಂತೆ ಸಿಎಸ್‌ಕೆ ವಿರುದ್ಧದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿಕ್ಗೆ ಚೆಪಾಕ್‌ನಲ್ಲಿ ಇದು ನಿಮ್ಮ ಕೊನೆಯ ಪಂದ್ಯವೇ ಎಂಬ ಪ್ರಶ್ನೆ ಕೇಳಲಾಯಿತು.

ಇದಕ್ಕೆ ಉತ್ತರಿಸಿದ ಅವರು ‘ಚೆಪಾಕ್‌ನಲ್ಲಿ ಪ್ಲೇಆಫ್ ಪಂದ್ಯವನ್ನು ಆಯೋಜಿಸುವ ಸಾಧ್ಯತೆ ಇರುವುದರಿಂದ ನಾನು ಇಲ್ಲಿ ಇನ್ನೊಂದು ಪಂದ್ಯ ಆಡಬಹುದು. ಒಂದು ವೇಳೆ ನಮ್ಮ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದರೆ, ಇದು ಈ ಮೈದಾನದಲ್ಲಿ ನನ್ನ ಕೊನೆಯ ಪಂದ್ಯ ಎಂದಿದ್ದಾರೆ.

ನಿವೃತ್ತಿಯ ನಂತರವೂ ಕ್ರಿಕೆಟ್‌ನಲ್ಲಿ ಉಳಿಯುವ ನಿರ್ಧಾರ ಮಾಡಿರುವ ಕಾರ್ತಿಕ್ ಕಾಮೆಂಟರಿಯ ಮೇಲೆ ಹೆಚ್ಚು ಆಸಕ್ತಿ ತೊರುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಕಾರ್ತಿಕ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಸಮಯದಲ್ಲಿ ಕಾಮೆಂಟರಿ ಮಾಡುತ್ತಿದ್ದರು. ಆದರೆ ಐಪಿಎಲ್‌ಗೆ ತಯಾರಿ ನಡೆಸಬೇಕಾದ್ದರಿಂದ ಅವರು ಕಾಮೆಂಟರಿಯನ್ನು ಮಧ್ಯದಲ್ಲಿಯೇ ತೊರೆಯಬೇಕಾಯಿತು.

ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗೆಟ್ಟಿದ್ದ ಆರ್‌ಸಿಬಿ ಪರ ಕಾರ್ತಿಕ್ ಅನುಜ್ ರಾವತ್ ಜೊತೆಗೂಡಿ ಆರನೇ ವಿಕೆಟ್ಗೆ 50 ಎಸೆತಗಳಲ್ಲಿ 95 ರನ್ ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಈ ವೇಳೆ ಕಾರ್ತಿಕ್ 26 ಎಸೆತಗಳಲ್ಲಿ ಔಟಾಗದೆ 38 ರನ್ ಗಳಿಸಿ ಮಹತ್ವದ ಇನ್ನಿಂಗ್ಸ್ ಆಡಿದರು. ರಾವತ್ ಮತ್ತು ಕಾರ್ತಿಕ್ ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ಆರ್‌ಸಿಬಿ 173 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಈ ಪಂದ್ಯವನ್ನು ಚೆನ್ನೈ ಆರು ವಿಕೆಟ್‌ಗಳಿಂದ ಗೆದ್ದುಕೊಂಡಿತು.




