IPL 2024: ಕಿಂಗ್ ಕೊಹ್ಲಿಗೆ ಬುಮ್ರಾ ಭಯ..! ಇದು ಐಪಿಎಲ್ ಅಂಕಿ ಅಂಶ ನುಡಿದ ಸತ್ಯ

|

Updated on: Apr 11, 2024 | 9:24 PM

IPL 2024: ಈ ಸೀಸನ್‌ನಲ್ಲಿ ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಮಾತ್ರ ಒಂದಂಕಿಗೆ ಸುಸ್ತಾಗಿದ್ದಾರೆ. ಈ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಜಸ್ಪ್ರೀತ್ ಬುಮ್ರಾಗೆ ಬಲಿಯಾದರು.

1 / 6
ಮುಂಬೈನ ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಹೈವೋಲ್ಟೇಜ್ ಫೈಟ್ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಬ್ಯಾಟಿಂಗ್ ಆರಂಭಿಸಿರುವ ಆರ್​ಸಿಬಿಗೆ ಆರಂಭಿಕ ಹಿನ್ನಡೆಯುಂಟಾಗಿದೆ.

2 / 6
ಈ ಸೀಸನ್‌ನಲ್ಲಿ ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಮಾತ್ರ ಒಂದಂಕಿಗೆ ಸುಸ್ತಾಗಿದ್ದಾರೆ. ಈ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಜಸ್ಪ್ರೀತ್ ಬುಮ್ರಾಗೆ ಬಲಿಯಾದರು.

3 / 6
ಈ ಮೂಲಕ ಬುಮ್ರಾ, ಕೊಹ್ಲಿ ವಿರುದ್ಧ ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದು, ದಾಖಲೆಯ ಐದನೇ ಬಾರಿಗೆ ಕೊಹ್ಲಿಯ ವಿಕೆಟ್ ಉರುಳಿಸಿದ್ದಾರೆ.

4 / 6
ಈ ಪಂದ್ಯದಲ್ಲಿ ಮೂರನೇ ಓವರ್ ಬೌಲ್ ಮಾಡುವ ಜವಬ್ದಾರಿ ಹೊತ್ತ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿಯನ್ನು ಪೆವಿಲಿಯನ್​ಗಟ್ಟಿದರು. ವಿರಾಟ್, ಬುಮ್ರಾ ಅವರ ಚೆಂಡನ್ನು ಹೊಡೆಯಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಬ್ಯಾಟ್‌ನ ಒಳ ಅಂಚಿಗೆ ಬಡಿದು ಇಶಾನ್ ಕಿಶನ್ ಅವರ ಗ್ಲೌಸ್‌ ಸೇರಿತು.

5 / 6
ವಾಸ್ತವವಾಗಿ ವಿರಾಟ್ ಕೊಹ್ಲಿ ಹಾಗೂ ಬುಮ್ರಾ ನಡುವಿನ ಜಿದ್ದಾಜಿದ್ದಿ ಇಂದು ನೆನ್ನೆಯದಲ್ಲ. 2013 ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಬುಮ್ರಾ, ಚೊಚ್ಚಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ರೂಪದಲ್ಲಿ ಮೊದಲ ವಿಕೆಟ್ ಪಡೆದಿದ್ದರು. ಅಂದಿನಿಂದ ಜಸ್ಪ್ರೀತ್ ಬುಮ್ರಾ ಒಮ್ಮೆಯೂ ಹಿಂತಿರುಗಿ ನೋಡಿಲ್ಲ.

6 / 6
ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಹಲವು ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿಗೆ ಐದನೇ ಬಾರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ವಿರಾಟ್ ಕೊಹ್ಲಿ, ಬುಮ್ರಾ ವಿರುದ್ಧ 95 ಎಸೆತಗಳಲ್ಲಿ 147.36 ಸ್ಟ್ರೈಕ್ ರೇಟ್‌ನಲ್ಲಿ 140 ರನ್ ಗಳಿಸಿದ್ದಾರೆ.