AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಕಳೆದ ಬಾರಿಯ ಐಪಿಎಲ್​ನಲ್ಲಿ ದಾಖಲಾದ ಟಾಪ್-10 ದಾಖಲೆಗಳಿವು..!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಮಾರ್ಚ್ 22 ರಿಂದ ಶುರುವಾಗಲಿರುವ ಐಪಿಎಲ್​ ಸೀಸನ್ 17 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣಕ್ಕಿಳಿಯಲಿದೆ. ಇದರೊಂದಿಗೆ IPL 2024 ಕ್ಕೆ ಅದ್ಧೂರಿ ಚಾಲನೆ ದೊರೆಯಲಿದೆ.

TV9 Web
| Edited By: |

Updated on: Mar 17, 2024 | 11:31 AM

Share
IPL 2024: ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ 17 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಶುಕ್ರವಾರದಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ಕಳೆದ ಸೀಸನ್​ನಲ್ಲಿ ನಿರ್ಮಾಣವಾಗಿದ್ದ ಕೆಲ ದಾಖಲೆಗಳತ್ತ ಕಣ್ಣಾಡಿಸೋಣ...

1 / 11
ಚಾಂಪಿಯನ್ಸ್ ದಾಖಲೆ: ಐಪಿಎಲ್ 2023 ರ ಫೈನಲ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್​ ಪ್ರಶಸ್ತಿ ಗೆದ್ದುಕೊಂಡಿತ್ತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್​ಕೆ ಪಾಲಾಯಿತು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಈ ಸಾಧನೆ ಮಾಡಿತ್ತು.

2 / 11
ಐಪಿಎಲ್ ಸಿಕ್ಸರ್ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಮೂಡಿಬಂದಿದ್ದು 2023 ರಲ್ಲಿ. ಅಂದರೆ ಐಪಿಎಲ್ ಸೀಸನ್ 16 ರಲ್ಲಿ ಒಟ್ಟು 1124 ಸಿಕ್ಸರ್‌ಗಳು ಸಿಡಿದಿದ್ದವು. ಇದಕ್ಕೂ ಮುನ್ನ 2022 ರಲ್ಲಿ 1062 ಸಿಕ್ಸರ್‌ಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು.

3 / 11
ಫೋರ್​ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಫೋರ್​ಗಳು ಮೂಡಿಬಂದಿರುವುದು ಸೀಸನ್ 16 ರಲ್ಲಿ ಎಂಬುದು ವಿಶೇಷ. 2022 ರಲ್ಲಿ 2018 ಫೋರ್​ಗಳನ್ನು ಬಾರಿಸಿದ್ದರೆ, ಕಳೆದ ಬಾರಿ ಬರೋಬ್ಬರಿ 2174 ಬೌಂಡರಿಗಳನ್ನು ಸಿಡಿಸಿದ್ದರು.

4 / 11
ಶತಕಗಳ ದಾಖಲೆ: ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿಗಳನ್ನು ಬಾರಿಸಿರುವುದು ಕಳೆದ ಬಾರಿ ಎಂಬುದು ವಿಶೇಷ. 2022 ರಲ್ಲಿ 8 ಶತಕಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು. ಆದರೆ ಐಪಿಎಲ್ 2023 ರಲ್ಲಿ 12 ಶತಕಗಳು ಮೂಡಿಬಂದಿದ್ದವು.

5 / 11
ಅರ್ಧಶತಕಗಳ ದಾಖಲೆ: ಐಪಿಎಲ್ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ್ದು ಕೂಡ 2023 ರಲ್ಲಿ. ಐಪಿಎಲ್ ಸೀಸನ್​ 16 ರಲ್ಲಿ ಒಟ್ಟು 153 ಅರ್ಧ ಶತಕಗಳು ಮೂಡಿಬಂದಿವೆ. ಇದಕ್ಕೂ ಮುನ್ನ ಐಪಿಎಲ್ 2022ರ ಸೀಸನ್​ನಲ್ಲಿ 118 ಅರ್ಧಶತಕ ಬಾರಿಸಿದ್ದು ದಾಖಲೆಯಾಗಿತ್ತು.

6 / 11
ಸರಾಸರಿ ಸ್ಕೋರ್ ದಾಖಲೆ: ಐಪಿಎಲ್‌ನ 16ನೇ ಸೀಸನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 183 ಎಂಬುದು ವಿಶೇಷ. ಇದು ಯಾವುದೇ ಐಪಿಎಲ್ ಸೀಸನ್​ನ ಗರಿಷ್ಠ ಮೊತ್ತವಾಗಿದೆ. 2018ರಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 172 ಆಗಿತ್ತು.

7 / 11
ಬ್ಯಾಟ್ಸ್​ಮನ್​ಗಳ ಅಬ್ಬರದ ದಾಖಲೆ: ಕಳೆದ ಬಾರಿಯ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳು ಪ್ರತಿ ಓವರ್​ಗೆ 8.99 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. 2018 ರಲ್ಲಿ ಪ್ರತಿ ಓವರ್‌ಗೆ 8.65 ಸರಾಸರಿಯಲ್ಲಿ ರನ್‌ ಕಲೆಹಾಕಿದ್ದು ಅತ್ಯುತ್ತಮ ದಾಖಲೆಯಾಗಿತ್ತು. ಆದರೆ ಕಳೆದ ಬಾರಿ ಈ ದಾಖಲೆಯನ್ನು ಮುರಿಯಲಾಗಿದೆ.

8 / 11
ಡಬಲ್ ಸೆಂಚುರಿ ಚೇಸಿಂಗ್: ಐಪಿಎಲ್ 2023 ರಲ್ಲಿ 8 ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗುರಿ ಬೆನ್ನತ್ತಲಾಗಿದೆ. ಅದು ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಬಾರಿ ಎಂಬುದು ವಿಶೇಷ. ಈ ಹಿಂದೆ 2014 ರಲ್ಲಿ 3 ಬಾರಿ 200+ ಸ್ಕೋರ್​ ಅನ್ನು ಚೇಸ್ ಮಾಡಿದ್ದು ದಾಖಲೆಯಾಗಿತ್ತು.

9 / 11
ಬೌಲರ್​ಗಳ ದಾಖಲೆ: ಐಪಿಎಲ್ ಸೀಸನ್​ವೊಂದರಲ್ಲಿ ಒಂದೇ ತಂಡದ ಮೂವರು ಬೌಲರ್‌ಗಳು 25 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಮೊದಲ ಬಾರಿ. ಗುಜರಾತ್ ಟೈಟಾನ್ಸ್ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಮತ್ತು ರಶೀದ್ ಖಾನ್ ಐಪಿಎಲ್ 2023 ರಲ್ಲಿ ಈ ಸಾಧನೆ ಮಾಡಿದ್ದಾರೆ.

10 / 11
ಅನ್​ಕ್ಯಾಪ್ಡ್ ಆಟಗಾರರ ಸೆಂಚುರಿ: ಕಳೆದ ಬಾರಿ ಇಬ್ಬರು ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಶತಕ ಬಾರಿಸಿ ದಾಖಲೆ ಬರೆದಿದ್ದರು. ಇದು ಕೂಡ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯಾಗಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಪ್ರಭ್​ಸಿಮ್ರಾನ್ ಸಿಂಗ್ ಸೆಂಚುರಿ ಸಿಡಿಸಿ ಈ ವಿಶೇಷ ದಾಖಲೆ ನಿರ್ಮಿಸಿದ್ದರು.

11 / 11
ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಇಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ

ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?

ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ

3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ

SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್

ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ

ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!