AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ನನ್ನನ್ನು ಇನ್ಮುಂದೆ ಈ ರೀತಿ ಕರೆಯಬೇಡಿ: ವಿರಾಟ್ ಕೊಹ್ಲಿ ಮನವಿ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. IPL 2024 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಪಂದ್ಯದೊಂದಿಗೆ ಐಪಿಎಲ್​ನ 17ನೇ ಆವೃತ್ತಿಗೆ ಚಾಲನೆ ದೊರೆಯಲಿದೆ.

TV9 Web
| Edited By: |

Updated on: Mar 20, 2024 | 8:24 AM

Share
IPL 2024: ಕ್ರಿಕೆಟ್​ ಅಂಗಳದಲ್ಲಿ ಕಿಂಗ್ ಕೊಹ್ಲಿಯಂದೇ ಜನಪ್ರಿಯರಾಗಿರುವ ವಿರಾಟ್ ಕೊಹ್ಲಿ (Virat Kohli) ಐಪಿಎಲ್​ ಸೀಸನ್ 17 ಗಾಗಿ ಸಜ್ಜಾಗುತ್ತಿದ್ದಾರೆ. ಈ ಸಿದ್ಧತೆಗಳ ನಡುವೆ ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ತಂಡದ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಕಿಂಗ್ ಕೊಹ್ಲಿ ಮಿಂಚಿದ್ದರು.

1 / 6
ಆರ್​ಸಿಬಿ ತಂಡದ ಜೆರ್ಸಿ ಬಿಡುಗಡೆ, ಮಹಿಳಾ ತಂಡಕ್ಕೆ ಸನ್ಮಾನ ಸೇರಿದಂತೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದರು. ಆ ಮನವಿಯೇ... ಇನ್ಮುಂದೆ ನನ್ನನ್ನು ಕಿಂಗ್ ಕೊಹ್ಲಿ ಎಂದು ಕರೆಯಬೇಡಿ ಎಂಬುದು.

2 / 6
ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಂಡ ದ್ಯಾನಿಶ್ ಸೇಠ್ ವಿರಾಟ್ ಕೊಹ್ಲಿಯನ್ನು ಕಿಂಗ್ ಎಂದು ಸಂಬೋಧಿಸಿದರು. ಈ ವೇಳೆ ಆ ರೀತಿಯಾಗಿ ಕರೆಯಬೇಡಿ ಎಂದ ಕೊಹ್ಲಿ, ಆ ಥರ ಕರೆಯುವುದರಿಂದ ನನಗೆ ಮುಜುಗರವಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ಯಾರು ಸಹ ಕಿಂಗ್ ಎಂದು ಕರೆಯಬೇಡಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡಿದರು.

3 / 6
ಆದರೆ ವಿರಾಟ್ ಕೊಹ್ಲಿಯ ಈ ಮನವಿಗೆ ಅಭಿಮಾನಿಗಳು ಕಿಂಗ್ ಕೊಹ್ಲಿಯ ಘೋಷಣೆಯೊಂದಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಉತ್ತರ ನೀಡಿದ್ದರು. ಏಕೆಂದರೆ ವಿರಾಟ್ ಕೊಹ್ಲಿಯನ್ನು ಈಗಾಗಲೇ ಅಭಿಮಾನಿಗಳು ಕ್ರಿಕೆಟ್​ನ ಕಿಂಗ್ ಎಂದು ಪರಿಗಣಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಅವರ ದಾಖಲೆಗಳು.

4 / 6
ಇದಾಗ್ಯೂ ಖುದ್ದು ವಿರಾಟ್ ಕೊಹ್ಲಿ, ಕಿಂಗ್ ಎಂದು ಕರೆಯಬೇಡಿ ಎಂದಿರುವುದು ಅವರ ಸಜ್ಜನಿಕೆ. ಆದರೆ ನಮಗೆ ಯಾವತ್ತಿದ್ದರೂ ಕೊಹ್ಲಿಯೇ ಕಿಂಗ್. ಹೀಗಾಗಿ ಕಿಂಗ್ ಕೊಹ್ಲಿ ಹೆಸರು ಮುಂದುವರೆಯಲಿದೆ ಎಂಬ ವಾದವನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.

5 / 6
ಹೀಗಾಗಿ ವಿರಾಟ್ ಕೊಹ್ಲಿಯ ಮನವಿಯನ್ನು ಅಭಿಮಾನಿಗಳು ಒಪ್ಪುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಕೊಹ್ಲಿಯನ್ನು ಕಿಂಗ್ ಪಟ್ಟದಿಂದ ಕೆಳಗಿಳಿಸುವ ಲಕ್ಷಣಗಳು ಸಹ ಗೋಚರಿಸುತ್ತಿಲ್ಲ. ಹಾಗಾಗಿ ಕ್ರಿಕೆಟ್ ಅಂಗಳದ ಕಿಂಗ್ ಆಗಿ ವಿರಾಟ್ ಕೊಹ್ಲಿ ಮುಂದುವರೆಯಲಿದ್ದಾರೆ ಎಂದೇ ಹೇಳಬಹುದು.

6 / 6