7 ಪಂದ್ಯಗಳು... 6 ಸೋಲು... 1 ಗೆಲುವು, ಈ ಬಾರಿಯ ಐಪಿಎಲ್ನ (IPL 2024) ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೀಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಕೊನೆಯ ಸ್ಥಾನದಿಂದ ಅಗ್ರ-4 ರಲ್ಲಿ ಸ್ಥಾನ ಪಡೆಯಬೇಕಿದ್ದರೆ ಆರ್ಸಿಬಿ ಮುಂದಿನ 7 ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಹೀಗಾಗಿಯೇ ಆರ್ಸಿಬಿ ಪಾಲಿಗೆ ಮುಂದಿನ ಪಂದ್ಯಗಳು ಸೆಮಿಫೈನಲ್ ಎಂದು ಅಭಿಪ್ರಾಯಪಟ್ಟಿದ್ದಾರೆ ಕೋಚ್ ಆ್ಯಂಡಿ ಫ್ಲವರ್.